ಭಾರತದ ಹೆಮ್ಮೆಯ ಇಸ್ರೋಗೆ ವಿಜಯೋತ್ಸವದ ಸಂಭ್ರಮಾಚರಣೆ

0
93

ಕೊಟ್ಟೂರು:ಕೊಟ್ಟೂರೇಶ್ವರ ಮಹಾವಿದ್ಯಾಲಯ ವತಿಯಿಂದ ಇಸ್ರೋ ಉಡಾವಣೆ ಮಾಡಿದ  ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಸ್ಪರ್ಶ ಮಾಡಿದ ಸಂಭ್ರಮಾಚರಣೆಯನ್ನು ನಮ್ಮ ಕಾಲೇಜಿನ ಆಡಳಿತ ಮಂಡಳಿಯ  ಗೌರವಾನ್ವಿತಅಧ್ಯಕ್ಷರಾದ ಸಿದ್ದರಾಮ ಕಲ್ಮಠ  ಉದ್ಘಾಟಿಸುವುದರ ಮೂಲಕ  ವಿಜಯೋತ್ಸವವನ್ನು ಸಂಭ್ರಮಿಸಲಾಯಿತು.

ಕೊಟ್ಟೂರಿನ ಪ್ರಮುಖ ಬೀದಿಗಳಲ್ಲಿ ಇದೇ ಮೊದಲ ಬಾರಿಗೆ 20 ಮೀಟರ್ ಉದ್ದದ ರಾಷ್ಟ್ರೀಯ ಧ್ವಜವನ್ನು ದೇಶ ಪ್ರೇಮ ಮೆರೆದ  ವಿದ್ಯಾರ್ಥಿಗಳ ಸನ್ನಿವೇಶಗಳು ಮತ್ತು ವಿಕ್ರಂ ರೋವರ್ ಮಾದರಿಯ ಮಾಡಲ್ ಮತ್ತು ವಿಜ್ಞಾನಿಗಳ ಚಿತ್ರಗಳನ್ನು ಹಿಡಿದು ಜಯ ಘೋಷ ದೊಂದಿಗೆ ಏನ್. ಸಿ ಸಿ ವಿದ್ಯಾರ್ಥಿಗಳು , ಪದವಿ  ಪದವಿಪೂರ್ವ ಕಾಲೇಜಿನ 800ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಜ್ಜಿನಿ ಸರ್ಕಲ್ ಮೂಲಕ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ  ಗಾಂಧಿ ಸರ್ಕಲ್ ಬಳಿ ಪಟಾಕಿ ಸಿಡಿಸುವುದರ ಮೂಲಕ ಚಂದ್ರಯಾನ- 3 ವಿಜಯೋತ್ಸವವನ್ನು ಸಂಭ್ರಮಿಸಲಾಯಿತು.

ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ನಮ್ಮ ಕೊಟ್ಟೂರಿನ ಹೆಮ್ಮೆಯ ವಿಜ್ಞಾನಿಯಾದ   ಬಿ.ಎಚ್ ಎಂ.ದಾರುಕೇಶ್ ಹಾಗೂ ಎಲ್ಲಾ ಇಸ್ರೋ ವಿಜ್ಞಾನಿಗಳಿಗೆ ಜಯ ಘೋಷಣೆ ಕೂಗುವ ಮೂಲಕ ಅಭಿನಂದಿಸಲಾಯಿತು.ಮತ್ತು ವಿಜಯೋತ್ಸವವನ್ನು ಅದ್ದೂರಿಯಾಗಿ ಸಂಭ್ರಮಿಸಲಾಯಿತು.ಈ ಸಂಭ್ರಮವನ್ನು ಕೊಟ್ಟೂರಿನ ಜನತೆ ಬಹಳ ಸಂತೋಷದಿಂದ  ತಮ್ಮ ಮೊಬೈಲ್ಗಳಲ್ಲಿ ಭಾವಚಿತ್ರವನ್ನು ಸೆರೆ ಹಿಡಿಯುವುದರ ಮುಖಾಂತರ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ  ಸಿಹಿ ಕೊಡುವುದರ ಮೂಲಕ ನಮ್ಮ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರನ್ನು ಮತ್ತು ವಿದ್ಯಾರ್ಥಿಗಳನ್ನ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನಮ್ಮ , ಪ್ರಾಂಶುಪಾಲರಾದ ಡಾ. ಎಂ .ರವಿಕುಮಾರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಮತ್ತು ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ವರ್ಗದವರು
ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here