ಕೊಟ್ಟೂರು: ಭೀಮ ಕೋರೆಗಾಂವ್ ಯುದ್ದ ವಿಜಯೋತ್ಸವ ಆಚರಣೆ.

0
156

ಕೊಟ್ಟೂರು: ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವ ನಗರದ ಶ್ರೀ ಗುರು ಕೊಟ್ಟೂರೇಶ್ವರ ಮಹಾದ್ವಾರ ಬಾಗಿಲಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿತ್ತು.

ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಎರಚುವ ಮೂಲಕ ಭೀಮ ಕೊರೆಗಾವ್ ಆಚರಣೆ ಹಾಗೂ ಮೆರವಣೆಗೆ ಚಾಲನೆಯನ್ನು ದಲಿತ ಸಂಘಟನೆ ಜಿಲ್ಲಾ ಸಂಘಟನೆಕಾರರಾದ ತೆಗ್ಗಿನಕೇರಿ ಕೊಟ್ರೇಶ್ ರವರು ಚಾಲನೆ ನೀಡಿ ಮಾತನಾಡಿದರು ಎಸ್ಸಿ ಎಸ್ಟಿ ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೊರೆಗಾವ್ ಯುದ್ಧವಾಗಿದೆ. ಮೇಲ್ವರ್ಗದವರು ಮಾತ್ರ ಆಡಳಿತ ಹಾಗೂ ಯುದ್ಧ ಮಾಡಲು ಯೋಗ್ಯರು. ಕೆಳ ವರ್ಗದವರು ಮೇಲ್ವರ್ಗದವರ ಸೇವೆ ಮಾಡಲು ಮಾತ್ರ ಕೆಳ ವರ್ಗದವರ ಕರ್ತವ ಎಂಬ ರೀತಿಯಲ್ಲಿ ಕೇಶವಗಳ ಆಡಳಿತ ಮಹರ್ (ದಲಿತರು) ಜನಾಂಗವನ್ನು ನಡೆಸಿಕೊಳ್ಳುತ್ತಿತ್ತು. ಮಹರ್ ಜನಾಂಗದ ಮಕ್ಕಳಿಗೆ ಶಿಕ್ಷಣ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು ನಿರ್ಲಕ್ಷ ತೋರುವುದರಿಂದ ಇಂಗ್ಲಿಷ್ ಆಡಳಿತ ಮಹರ್ ಸೇರಿ ಶೋಷಿತರ ಪರವಾಗಿ ಶಿಕ್ಷಣ ಮೂಲಸೌಕರ್ಯ ಕಲ್ಪಿಸಿ ಸೇನೆಯಲ್ಲಿ ಅವಕಾಶ ಕಲ್ಪಿಸಿ ಸ್ವಾಭಿಮಾನ ಮತ್ತು ಶೌರ್ಯ ಕಲ್ಪಿಸಲು ಒಪ್ಪಿದ್ದರಿಂದ ಭೀಮಾ ನದಿ ದಡದಲ್ಲಿ ಪೇಶ್ವೆಯವರ ಸೇನೆ ಹಾಗೂ ಇಂಗ್ಲಿಷ ಸೈನಿಕರ ಮಧ್ಯೆ ನಡೆದ ಯುದ್ಧದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವಗಳ ಸೈನಿಕರನ್ನು 500 ಮಹರ್ ಸೈನಿಕರು ಕೊಂದು ಶೌರ್ಯ ಮೆರೆದಿದ್ದಾರೆ. ಇದನ್ನು ಈ ದೇಶದ ಮೇಲ್ವರ್ಗದ ಪರವಾಗಿರುವ ಇತಿಹಾಸಕಾರರು ಮರೆಮಾಚಿದ್ದರು. ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಕೇಂಬ್ದಿಜ್ ವಿವಿ ಮ್ಯೂಸಿಯಂ ಇತಿಹಾಸದಲ್ಲಿ ಬರೆದು ಸಂಗ್ರಹಿಸಲಾಯಿತು. ಇದನ್ನು ಓದಿದ ಅಂಬೇಡ್ಕರ್ ಅವರು ಭಾರತಕ್ಕೆ ಮರಳಿ ಭೀಮ ನದಿ ದಡದಲ್ಲಿರುವ ಕೊರೆಗಾವ್ ಯುದ್ಧ ಸ್ಥಳವನ್ನು ಪರಿಶೀಲಿಸಿ ಉತ್ಕನ್ನ ಮಾಡಿ ಮಹರ್ ಜನಾಂಗದ ಸೈನಿಕರ ಶೌರ್ಯ ಸ್ಥೂಪವನ್ನು ನಿರ್ಮಿಸಿ ಭೀಮ ಕೊರೆಗಾವ್ ವಿಜಯೋತ್ಸವ ಆಚರಣೆ ಮಾಡಿದರು ಎಂದು ಹೇಳಿದರು.

ಮೆರವಣಿಗೆಯು ಗಾಂಧಿ ಸರ್ಕಲ್ ಆರಂಭಗೊಂಡ ಪಟ್ಟಣದ ಪ್ರಮುಖ ರಸ್ತೆಗಳಾದ ಉಜ್ಜಿನಿ ಸರ್ಕಲ್, ರೇಣುಕಾ ಟಾಕೀಸ್ ರಸ್ತೆ , ಬಸ್ ನಿಲ್ದಾಣ ಹಾಗೂ ಹೆಚ್ ಬಿ ಹಳ್ಳಿ ರೋಡ್ ಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆ ಸಂಚಾಲಕರಾದ ಬಿ ಮರಿಸ್ವಾಮಿ, ಟಿ ಹನುಮಂತಪ್ಪ ವಕೀಲರು, ಬಿ ದುರ್ಗೇಶ್, ಪಟ್ಟಣ ಪಂಚಾಯತಿ ಸದಸ್ಯರಾದ, ತಗ್ಗಿನಕೇರೆ ಜಗದೀಶ್, ಕೆಂಗಪ್ಪ, ದಲಿತ ಸಂಘಟನೆ ಪದಾಧಿಕಾರಿಗಳಾದ, ಪ್ರಭಾಕರ್, ಅಜ್ಜಯ್ಯ, ವಿಷ್ಣು, ಮಣಿಕಂಠ, ಪರಶುರಾಮ್, ಹಾಗೂ ಯುವಕರು ಇತರರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here