ಜ.28 ರಂದು ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ

0
37

ಬಳ್ಳಾರಿ,ಜ.16: 2022-23ನೇ ಸಾಲಿನ ಮಿಕ್ಕುಳಿದ ವೃಂದ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ (ಸಿಎಆರ್/ಡಿಎಆರ್) (ಪುರುಷ ಮತ್ತು ತೃತೀಯ ಲಿಂಗ ಪುರುಷ) 3064 ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಯು ಜ.28 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ರ ವರೆಗೆ ಬಳ್ಳಾರಿ ನಗರದ 16 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ಹೆಸರು ಮತ್ತು ವಿಳಾಸ:
ಗಾಂಧಿನಗರದ 2ನೇ ಕ್ರಾಸ್‍ನ ಬಾಲ ಭಾರತಿ ಶಾಲೆ, ಸಿರುಗುಪ್ಪ ರಸ್ತೆಯ ಕುರಿಹಟ್ಟಿಯ ಬಳ್ಳಾರಿ ಬ್ಯುಸಿನೆಸ್ ಕಾಲೇಜ್, ಅನಂತಪುರ ರಸ್ತೆಯ ಪಟೇಲ್ ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆ ಮತ್ತು ಕಾಲೇಜು, ಅಲ್ಲೀಪುರದ ಬಳ್ಳಾರಿ ಇಂಡಿಪೆಂಡಂಟ್ ಪಿಯು ಕಾಲೇಜ್(ಬೆಸ್ಟ್), ಶಾಸ್ತ್ರಿನಗರದ ಶೆಟ್ಟರ ಗುರುಶಾಂತಪ್ಪ ಪಿಯು ಕಾಲೇಜು, ಪಟೇಲ್ ನಗರದ ನಂದಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಸೈನ್ಸ್ ಕಾಲೇಜು, ಕಂಟೋನ್‍ಮೆಂಟ್‍ನ ರಾವ್ ಬಹದ್ದೂರ್ ವೈ ಮಹಾಬಲೇಶ್ವರ ಇಂಜಿನಿಯರಿಂಗ್ ತಾಂತ್ರಿಕ ಮಹಾವಿದ್ಯಾಲಯ, ಕೋಟೆ ಪ್ರದೇಶದ ಶ್ರೀ ಮೇಧಾ ಡಿಗ್ರಿ ಕಾಲೇಜು, ಎಸ್.ಎನ್.ಪೇಟೆಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್‍ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಲ್ಲಂ ಸುಮಂಗಳಮ್ಮ ಮೆಮೊರೀಯಲ್ ಮಹಿಳೆಯರ ಕಾಲೇಜು, ಕಾಳಮ್ಮ ರಸ್ತೆಯ ವಾಡ್ರ್ಲಾ ಪಿಯು ಕಾಲೇಜು, ಗಾಂಧಿನಗರದ ಟೆಕೂರ್ ಕಾಂಪೌಂಡ್‍ನ ಕೆಹೆಚ್‍ಬಿ ಕಾಲೋನಿಯ ಸುಕೃತ ನರ್ಸಿಂಗ್ ಹೋಮ್‍ನ ಎಸ್‍ಜಿಟಿ ಕಾಲೇಜು, ಅಂಚೆ ಕಚೇರಿ ಹತ್ತಿರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಂಟೋನ್‍ಮೆಂಟ್ ಪ್ರದೇಶದ ವೀರಶೈವ ಕಾಲೇಜು, ಕೋಟೆ ಪ್ರದೇಶದ ಸೆಂಟ್ ಜಾನ್ಸ್ ಪದವಿ ಪೂರ್ವ ಕಾಲೇಜು ಹಾಗೂ ಕೋಟೆ ಪ್ರದೇಶದ ಸೆಂಟ್ ಜಾನ್ಸ್ ಹೈಸ್ಕೂಲ್.

ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್‍ನಿಂದ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪಡೆದುಕೊಂಡು, ಯಾವುದಾದರೊಂದು ಮೂಲ ಗುರುತಿನ ಚೀಟಿಯನ್ನು ತಪ್ಪದೇ ಪರೀಕ್ಷೆಯಲ್ಲಿ ಹಾಜರುಪಡಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತರಹದ ವಿದ್ಯುನ್ಮಾನ ಮತ್ತು ಇತರೆ ಉಪಕರಣಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here