ಪಿತಾಶ್ರೀ ಪ್ರಜಾಪಿತ ಬ್ರಹ್ಮಾರವರ 55ನೇ ಪುಣ್ಯ ಸ್ಮೃತಿ ದಿನದ ಅಂಗವಾಗಿ “ವಿಶ್ವ ಶಾಂತಿ ದಿನ” ಕಾರ್ಯಕ್ರಮ

0
112

ಸಂಡೂರು: ಜ:19: ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸೇವಾ ಕೇಂದ್ರದಲ್ಲಿ “ವಿಶ್ವ ಶಾಂತಿ ದಿನ” ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ಘಾಟನೆ ಮಾಡಿದ ಜೆ.ಎಸ್.ಡಬ್ಲ್ಯೂ ವಿದ್ಯಾನಗರದ ಲೇಡೀಸ್ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಸುವರ್ಣ ರಾಜಶೇಖರ ಪಟ್ಟಣಶೆಟ್ಟಿ ಅವರು ಮಾತನಾಡಿ ಪ್ರಜಾಪಿತ ಶ್ರೀ ಬ್ರಹ್ಮಾರವರ ಅವರ ತ್ಯಾಗ ತಪಸ್ಸು ಇಡೀ ವಿಶ್ವದ ಜನತೆಯ ಉದ್ಧಾರಕ್ಕಾಗಿ, ಮಾನವ ಕುಲದ ಒಳಿತಿಗಾಗಿ ಮಾಡಿದ್ದಾರೆ, ಅವರ ತ್ಯಾಗ ಬಹಳ ಅದ್ಭುತವಾಗಿದೆ,ಸತ್ಸಂಗದಲ್ಲಿ ಹೇಳುವ ವಾಕ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಶ್ರೇಷ್ಠ ಮಾಡಿಕೊಳ್ಳಬೇಕು ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಆಹ್ವಾನಿತರಾಗಿ ಆಗಮಿಸಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಸತ್ಸಂಗದಲ್ಲಿ ಹೇಳುವ ರಾಜಯೋಗ ಒಂದು ಆಲೌಕಿಕ ಲೋಕಕ್ಕೆ ಕೊಂಡೊಯ್ಯುತ್ತದೆ ಇಲ್ಲಿಯ ಸತ್ಸಂಗದಲ್ಲಿ ಭಾಗವಹಿಸಿ ಒಂದು ಹೊಸ ಅನುಭವವನ್ನೇ ಪಡೆದಿದ್ದೇನೆ ಪ್ರತಿಯೊಬ್ಬ ವ್ಯಕ್ತಿಯೂ ಇಲ್ಲಿಯ ಜ್ಞಾನವನ್ನು ತಿಳಿದುಕೊಳ್ಳಬೇಕು ಅದರಂತೆ ನಡೆಯಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಬಿ.ಕೆ ರಾಜೇಶ್ವರಿ ಅಕ್ಕನವರು ಮಾತನಾಡಿ ಪಿತಾಶ್ರೀ ಬ್ರಹ್ಮಾರವರ 55ನೇ ಪುಣ್ಯ ಸ್ಮೃತಿ ದಿನ ಭಾಗವಹಿಸಿದ ನಾವೆಲ್ಲರೂ ಭಾಗ್ಯಶಾಲಿಗಳು, ಪ್ರಜಾಪಿತ ಬ್ರಹ್ಮಾವರ ಅವರು 65ನೇ ವಯಸ್ಸಿನಲ್ಲಿ ನಿರಾಕಾರನಾದ ಪರಮಾತ್ಮನು ಇವರ ದೇಹವನ್ನು ಪರಕಾಯ ಪ್ರವೇಶ ಮಾಡಿ ವಿಶ್ವ ಪರಿವರ್ತನೆಗೆ ಇವರನ್ನು ಆಯ್ಕೆ ಮಾಡಿಕೊಂಡನು, ಭಾರತ ದೈವಭೂಮಿಯನ್ನು ರಾಮ ರಾಜ್ಯವನ್ನಾಗಿ ಮಾಡಲು ರಾಜಯೋಗ ಶಿಕ್ಷಣವನ್ನು ಬ್ರಹ್ಮಾವರ ಅವರ ಮೂಲಕ ಕೊಡುತ್ತಿದ್ದಾರೆ, ಎಲ್ಲಾ ಮನುಷ್ಯಾತ್ಮರು ಸಂಸಾರದ ಜಂಜಾಟದಲ್ಲಿರುವ, ಅಜ್ಞಾನದ ನಿದ್ರೆಯಲ್ಲಿರುವ ಎಲ್ಲರನ್ನು ಸತ್ಯ ಜ್ಞಾನ ಅಮೃತ ಸುಧೆ,ಚೈತನ್ಯ ಅಜರಾಮರ ಅವಿನಾಸಿ ಜ್ಯೋತಿ ಸ್ವರೂಪ ಆತ್ಮಗಳು, ಪರಮಧಾಮ ನಿವಾಸಿಗಳು, ನಮ್ಮೆಲ್ಲರ ಆತ್ಮಗಳ ತಂದೆ, ಶಿವ ಪರಮಾತ್ಮ ಜ್ಞಾನ ಸಾಗರ, ಸರ್ವ ಗುಣಗಳ ಸಾಗರ, ಸರ್ವ ಶಕ್ತಿವಂತ ಆ ತಂದೆಯ ಪರಧಾಮ ನಿವಾಸಿ ನಾವೆಲ್ಲರೂ, ಆ ತಂದೆಯ ಮಕ್ಕಳು ಆತ್ಮ ಸ್ವರೂಪಿಗಳು ನಮ್ಮ ಮನಸ್ಸು ಬುದ್ಧಿಯನ್ನು ಕಣ್ಣಿಗೆ ಕಾಣುವ ಜಗತ್ತಿನಿಂದ ಭಿನ್ನವಾಗಿ ಆತ್ಮಗಳ ಮನೆಯಾದ ಪರಧಾಮ ಶಾಂತಿಯ ಧಾಮದಲ್ಲಿ ತಂದೆಯ ಜೊತೆ ನಮ್ಮ ಸಂಬಂಧವನ್ನು ಜೋಡಿಸಿ ನೆನಪು ಮಾಡುವುದರಿಂದ ನಮ್ಮ ಜನ್ಮ-ಜನ್ಮಾಂತರದ ವಿಕರ್ಮಗಳು ಬಸ್ಮವಾಗುತ್ತವೆ ಎಂದು ಅವರು ತಿಳಿಸಿದರು,

ಈ ವಿಶ್ವ ಪರಿವರ್ತನೆಯ ಸೇವೆಯನ್ನು ಮಾಡಲು ಪಿತಾಶ್ರೀ ಅವರು ತಮ್ಮ ಧನವನ್ನು ಈಶ್ವರನ ಸೇವೆಗೆ ಸಮರ್ಪಣೆ ಮಾಡಿದರು ಎಂದಿಗೂ ಇಂದಿಗೂ ಅವರು ಸರ್ವರ ದೇಹದಲ್ಲಿದ್ದು ಈಶಾರಾನುಭೂತಿಯನ್ನು ಮಾಡಲು ಜನ ಸೇವೆಯಲ್ಲಿದ್ದಾರೆ ಎಂದು ತಮ್ಮ ಪ್ರವಚನದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮದ ಬಹಳಷ್ಟು ರಾಜಯೋಗಿ ಸಾಧಕರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here