ಬಂಡ್ರಿ: ಕ್ಷಯ ರೋಗದಿಂದಿರುವವರಿಗೆ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ರೇಷನ್ ಕಿಟ್ ಅತಿ ಉಪಯುಕ್ತ ಡಾ.ಭರತ್ ಕುಮಾರ್.

0
220

ಸಂಡೂರು ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಕೆ.ಹೆಚ್.ಪಿ.ಟಿ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಂಡೂರು ಇವರ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕ್ಷಯ ನಿರ್ಮೂಲನೆ ಕುರಿತು ಮಾತನಾಡಿದ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭರತ್ ಕುಮಾರ್, ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಕಾಯಿಲೆ ಬಂದಾಗ ಹೇಗೆ ಇರಬೇಕೆಂದನ್ನು ವಿವರಿಸುತ್ತಾ, ಕ್ಷಯರೋಗ ಸಾಂಕ್ರಾಮಿಕ ರೋಗ, ರೋಗಿಗಳು ಕೆಮ್ಮಿದಾಗ ಶೀನಿದಾಗ ಹೊರಬರುವ ತುಂತುರು ಹನಿಗಳು ಗಾಳಿ ಮೂಲಕ ಟ್ಯುಬೆರ್ಕ್ಯುಲೈ ಎಂಬ ಬ್ಯಾಕ್ಟೀರಿಯಾದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ, ಕೆಮ್ಮಿದಾಗ ಬಟ್ಟೆ ಅಡ್ಡ ಇಟ್ಟುಕೊಳ್ಳಬೇಕು, ಎಲ್ಲಂದರಲ್ಲಿ ಉಗುಳಬಾರದು, ಮಕ್ಕಳಿಂದ ಅಂತರ ಕಾಯ್ದುಕೊಳ್ಳಬೇಕು, ಬೀಡಿ,ಸಿಗರೇಟು, ತಂಬಾಕು ಸೇವನೆ ಮತ್ತು ಮದ್ಯಪಾನ ಮಾಡುವುದನ್ನು ಸಂಪೂರ್ಣ ತ್ಯಜಿಸಬೇಕು, ಕುಟುಂಬದ ಯಾರಿಗಾದರೂ ಕ್ಷಯರೋಗದ ಲಕ್ಷಣಗಳು ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಹಸಿವೆಯಾಗದಿರುವುದು, ಕೆಮ್ಮಿದಾಗ ಕಫ ಬರುವ ಲಕ್ಷಣಗಳು ಕಾಣಿಕೊಂಡರೆ ತಕ್ಷಣ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು.

ಕರ್ನಾಟಕ ಹೆಲ್ತ್ ಪ್ರೋಮೋಷನಲ್ ಟ್ರಸ್ಟ್, ಬೆಂಗಳೂರು ಇವರು ಕ್ಷಯರೋಗ ನಿರ್ಮೂಲನೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದ್ದು ಮಹತ್ತರ ಕಾರ್ಯವಾಗಿದೆ,ಈಗ ಕ್ಷಯರೋಗದ ಚಿಕಿತ್ಸೆಯಲ್ಲಿ ಇರುವವರಿಗೆ ಕೋವಿಡ್ ವಿಪತ್ತಿನಲ್ಲಿ ಪೌಷ್ಟಿಕಾಹಾರ ದೊರೆಯುವ ಸಲುವಾಗಿ ರೋಗಿಗಳಿಗೆ ಅನುಕೂಲವಾಗಲು ಟ್ರಸ್ಟ್ ವತಿಯಿಂದ ಅಕ್ಕಿ,ಬೇಳೆ, ಎಣ್ಣೆ, ಸೋಪು, ಸಾಸುವೆ, ಜೀರಿಗೆ, ಅರಿಷಿಣ, ಟೀಪುಡಿ, ಹಾಲೀನ ಪುಡಿ, ಇತರೆ ಆಹಾರ ಪದಾರ್ಥಗಳುಳ್ಳ ಕಿಟ್ ಗಳನ್ನು ನೀಡಿದ್ದಾರೆ, ಅವುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡುವ ಅವಕಾಶ ನಮಗೆ ಮಾಡಿ ಕೊಟ್ಟಿದ್ದಾರೆ ಅವರಿಗೆ ಇಲಾಖೆ ಅಭಾರಿಯಾಗಿರುತ್ತೆ ಎಂದು ತಿಳಿಸುತ್ತಾ, ರೋಗಿಗಳು ಚಿಕಿತ್ಸೆ ಪಡೆಯುತ್ತಾ ದಿನಕ್ಕೆ ಮೂರು ನಾಲ್ಕು ಸಲ ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು, ಆಹಾರ ಸೇವನೆ ಮಾಡದಿದ್ದಾಗ ಕೆಲವೊಮ್ಮೆ ಅಡ್ಡ ಪರಿಣಾಮಗಳ ಉಂಟಾಗಬಹುದು ಇಂತಹ ಸಂದರ್ಭಗಳಲ್ಲಿ ಆಶಾ, ಆರೋಗ್ಯ ಸಿಬ್ಬಂದಿಯವರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು,

ಎಸ್.ಟಿ.ಎಸ್ ಗೋಪಾಲ್ ಅವರು ಪ್ರವಾಹದಲ್ಲಿ ಚೇಳು ಮತ್ತು ಸನ್ಯಾಸಿಯ ಕಥೆಯನ್ನು ಹೇಳಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು ಈ ಮಾಹಿತಿಯನ್ನು ಬೇರೆಯವರಿಗೂ ತಿಳಿಸುವುದು ತುಂಬಾ ಮುಖ್ಯವಾಗಿರುತ್ತದೆ ಎಂದು ಕಥೆಯ ಮೂಲಕ ತಿಳಿಸಿದರು.

ಕಿಟ್ ವಿತರಣಾ ಸಮಾರಂಭದಲ್ಲಿ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭರತ್ ಕುಮಾರ್, RBSK ಟೀಮ್ ನ ಡಾ.ಸಹನಾ ನಾಡಗೌಡರ್, STS ಗೋಪಾಲ್, LHV ವಿಜಯಲಕ್ಷ್ಮಿ, KHPT ಟೀಮ್ ನ ಸದಸ್ಯೆ ಸುನಿತಾ, ಶಿವಕುಮಾರ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here