ಆನೆಕಾಲು ರೋಗ ಪ್ರಕರಣಗಳು ಪತ್ತೆಹಚ್ಚಲು ತೋರಣಗಲ್ ಗ್ರಾಮದಲ್ಲಿ ರಾತ್ರಿವೇಳೆ ರಕ್ತದ ಮಾದರಿ ಸಂಗ್ರಹಣೆ ಚಟುವಟಿಕೆಗೆ ಚಾಲನೆ,

0
597

ಸಂಡೂರು:ಡಿ:28:- ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಆನೆಕಾಲು ರೋಗ ಅಥವಾ ಫೈಲೇರಿಯಾಸಿಸ್ ಕಾಯಿಲೆಯ ಮೂರು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇನ್ನಷ್ಟು ಪ್ರಕರಣಗಳು ಇರಬಹುದು ಎಂಬ ಕಾರಣಕ್ಕೆ ಮೂರನೇ ಬಾರಿ ರಾತ್ರಿ ವೇಳೆ
ರಕ್ತದ ಮಾದರಿಗಳ ಸಂಗ್ರಹಣೆಯನ್ನು ಹಮ್ಮಿಕೊಳ್ಳಲಾಗಿದೆ,

ಆನೆಕಾಲು ರೋಗ ಪತ್ತೆ ಹಚ್ಚಲು ಸಾಧಾರಣವಾಗಿ ರಾತ್ರಿ ವೇಳೆ 9 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ರಕ್ತದ ಸಂಗ್ರಹಣೆ ಮಾಡಲಾಗುತ್ತದೆ ಕಾರಣ ರೋಗಕಾರಕ ಪರಾವಲಂಬಿ ಜೀವಿಗಳು ರಾತ್ರಿಯ ವೇಳೆಯಲ್ಲಿ ರಕ್ತನಾಳಗಳಲ್ಲಿ ಸಂಚಾರಮಾಡುವ ಸಮಯವಾಗಿದ್ದು ಹಗಲು ಸಮಯದಲ್ಲಿ ದುಗ್ದಕೋಶದಲ್ಲಿರುವವು, ಆದಕಾರಣ ರಾತ್ರಿ ವೇಳೆಯಲ್ಲಿ ರಕ್ತದ ಮಾದರಿ ಸಂಗ್ರಹಣೆ ಮಾಡಲಾಯಿತು,

ಗ್ರಾಮದ ಎರಡು ಸ್ಥಳಗಳಾದ ಜನತಾ ಕಾಲೋನಿ ಮತ್ತು ಬನ್ನಿ ಮಾಂಕಾಳಮ್ಮ ಟೆಂಪಲ್ ಹತ್ತಿರದ ಸ್ಥಳಗಳನ್ನು ಆಯ್ಕೆ ಮಾಡಿ ಕೊಳ್ಳಲಾಗಿತ್ತು ಎರಡು ವರ್ಷದೊಳಗಿನ ಮಕ್ಕಳನ್ನು ಬಿಟ್ಟು ಉಳಿದ ಎಲ್ಲಾ ಜನರಿಗೂ ರಕ್ತದ ಮಾದರಿಗಳನ್ನು ಸಂಗ್ರಹಣೆ ಮಾಡಲಾಯಿತು,ಜನತಾ ಕಾಲೋನಿಯಲ್ಲಿ 250 ಜನರಿಗೆ ಮತ್ತು ಬನ್ನಿ ಮಾಂಕಾಳಮ್ಮ ಟೆಂಪಲ್ ಹತ್ತಿರ 250 ಒಟ್ಟು 500 ಜನರಿಗೆ ರಕ್ತದ ಸಂಗ್ರಹಣೆ ಮಾಡಲು ಗುರಿ ಹೊಂದಲಾಗಿದೆ,ಈ ಎಲ್ಲಾ ಮಾದರಿಗಳನ್ನು ಪರೀಕ್ಷೆಗೆ ಜಿಲ್ಲಾ ಲ್ಯಾಬ್ ಕಳಿಸಲಾಗುವುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು,

ಈ ರಾತ್ರಿ ರಕ್ತ ಮಾದರಿ ಸಂಗ್ರಹಣೆ ಚಟುವಟಿಕೆಯಲ್ಲಿ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಮೇಲ್ವಿಚಾರಕ ಬಸವರಾಜ್, ಪ್ರಯೋಗ ಶಾಲೆಯ ತಂತ್ರಜ್ಞರಾದ ಶಶಿಧರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ತಾಲೂಕಿನ ಮಲೇರಿಯಾ ಮೇಲ್ವಿಚಾರಕ ಸಾಗರ್ ಕುಮಾರ್, ನಿಜಾಮುದ್ದೀನ್,ಬಸವರಾಜ, ನಾಗರತ್ನ, ಸುನಿಲ್, ಆಶಾ ಕಾರ್ಯಕರ್ತೆ ಹನುಮಂತಮ್ಮ, ನೀಲಮ್ಮ,ದೇವಮ್ಮ, ಸವಿತಾ,ಲಕ್ಷ್ಮಿ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here