ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ಮತದಾನ ಮಾಡಿ – ಅನಿಲ್ ಕುಮಾರ್

0
12

ಸಂಡೂರು: ಏ:6: ಸಂಡೂರು: ಮತದಾನ ಹಾಗೂ ಮತದಾನ ಜಾಗೃತಿ ಮೂಡಿಸುವುದು ಪ್ರತಿಯೋರ್ವರ ಒಂದು ಜವಾಬ್ದಾರಿಯುತ ಕರ್ತವ್ಯವಾಗಿದ್ದು ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ಮತದಾನ ಮಾಡಿ ಮತ್ತು ಕನಿಷ್ಠ 100 ಮಂದಿಯನ್ನು ಮತದಾನಕ್ಕೆ ಕರೆತರುವಂತೆ ಕ್ರಮ ವಹಿಸುವಂತೆ ಲೋಕಸಭಾ ಚುನಾವಣೆ – 24 ಸಂಡೂರು ಎ ಆರ್ ಓ ಚುನಾವಣಾ ಅಧಿಕಾರಿಗಳಾದ ಹೆಚ್ ಕೆ ಸತೀಶ್ ರವರು ಕರೆ ನೀಡಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬಳ್ಳಾರಿ, ಸಂಡೂರು ತಾಲ್ಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಡೂರು ವತಿಯಿಂದ ಇಂದು ಶ್ರೀಶೈಲೇಶ್ವರ ಬಿ ಇ ಡಿ ತರಬೇತಿ ಕಾಲೇಜಿನಲ್ಲಿ ನಡೆದಂತಹ ಸ್ಪೀಕಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಮತದಾನ ಎನ್ನುವುದು ಒಂದು ಪವಿತ್ರ ಕೆಲಸವಾಗಿದ್ದು ಇದರಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಪಾಲ್ಗೊಳ್ಳಬೇಕು ಎಂದರು.

ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಷಡಕ್ಷರಯ್ಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರಜ್ಞಾವಂತರೇ ಮತದಾನದಿಂದ ದೂರ ಉಳಿಯುತ್ತಿದ್ದು ಅವರಿಗೆ ತಿಳುವಳಿಕೆಯನ್ನು ಮೂಡಿಸಿ ಮತದಾನಕ್ಕೆ ಬರುವಂತೆ ಪ್ರೇರೇಪಿಸಲು ತಿಳಿಸಿದರು ಹಾಗೂ ಸಂಡೂರು ತಾಲೂಕಿನಲ್ಲಿ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರೆಲ್ಲರೂ ಈ ವಿಷಯದಲ್ಲಿ ಸಹಕರಿಸಬೇಕೆಂದು ಕೋರಿದರು.

ತಾಲೂಕು ದಂಡಾಧಿಕಾರಿಗಳಾದ ಅನಿಲ್ ಕುಮಾರ್ ರವರು ಮಾತನಾಡಿ ಸ್ಪೀಕತಾನ್ ಕಾರ್ಯಕ್ರಮದ ಉದ್ದೇಶಗಳನ್ನ ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾಕ್ಟರ್ ಐ ಆರ್ ಅಕ್ಕಿ, ಇಸಿಓ ಬಸವರಾಜ್ ಹಾಗೂ ಡಿ ಎಲ್ ಎಂ ಟಿ ಕೊಟ್ರೇಶ್ ಟಿ ಎಲ್ ಎಂ ಟಿ ಸುಭಾನ್ ಹಾಜರಿದ್ದರು . ಕಾರ್ಯಕ್ರಮದಲ್ಲಿ 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಸ್ಪೀಕಥಾನ್ ಕಾರ್ಯಕ್ರಮದ ಆಯ್ದ ವಿಷಯದ ಬಗ್ಗೆ ಮಾತನಾಡಿಸಲಾಯಿತು.

ನಂತರ ಅಂತಿಮವಾಗಿ ಮೂರು ಜನವನ್ನು ಆರಿಸಿ ತಾಲ್ಲೂಕು ಹಂತದಿಂದ ಜಿಲ್ಲಾ ಹಂತಕ್ಕೆ ಆಯ್ಕೆ ಮಾಡಲಾಯಿತು ಗೆದ್ದವರಿಗೆ ಬಹುಮಾನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. 30 ವರ್ಷದ ನಂತರದ ಸ್ಪರ್ಧಿಗಳನ್ನು ಅಂತಿಮಗೊಳಿಸಲಾಯಿತು ಹಾಗೂ ಜಿಲ್ಲಾ ಅಂತಕ್ಕೆ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here