ತೋರಣಗಲ್ಲು ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ “ಕೋಟಿ ಕಂಠ ಗಾಯನ”

0
415

ಸಂಡೂರು:ಅ28: ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದಲ್ಲಿ “ಕೋಟಿ ಕಂಠ ಗಾಯನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಆರು ಕನ್ನಡ ಗೀತೆಗಳ ಗಾಯನ ಮಾಡಲಾಯಿತು,

ಈ ಕಾರ್ಯಕ್ರಮ ಉದ್ದೇಶಿಸಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಧರಿಯಪ್ಪ ರಾಥೋಡ್ ಮಾತನಾಡಿ ನಾಡು,ನುಡಿ ಸಂಸ್ಕೃತಿ ಉಳಿಸುವ ಮತ್ತು ಬೆಳಸುವ ನಿಟ್ಟಿನಲ್ಲಿ ಕೆಲಸ ಮಾಡುವ ಮನೋಭಾವ ಹೊಂದಿರಬೇಕು ಎಂದು ಕರೆ ನೀಡಿದರು, ಇದೇ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿ ಪಿ.ಹೆಚ್.ಡಿ ಪಧವಿದರೆ ಉಮಾ ಅವರು ನಿರೂಪಣೆ ಮಾಡಿ ಮಾತನಾಡಿ ಮಕ್ಕಳು ಆರು ಕನ್ನಡದ ಗೀತೆಗಳನ್ನು ಕೇಳಿದರೆ ರೋಮಾಂಚನವಾಗುವುದು, ನಿತ್ಯ ಗೀತೆಗಳನ್ನು ಆಲಿಸುವ ಅಭ್ಯಾಸ ಮಾಡಿಕೊಳ್ಳಲು ಸಲಹೆ ನೀಡಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ವರ್ಷಕ್ಕಿಂತ ವರ್ಷ ಕನ್ನಡ ರಾಜ್ಯೋತ್ಸವದ ರಂಗು ಬದಲಾಗುತ್ತಿದೆ, ಎರಡು ಮೂರು ದಿನಗಳು ಹಬ್ಬದ ವಾತಾವರಣ ಸೃಷ್ಟಿಯಾಗಿದೆ, ಮಾತಾಡ್ ಮಾತಾಡ್ ಕನ್ನಡ, ಕೋಟಿ ಕಂಠ ಗಾಯನ ಕಾರ್ಯಕ್ರಮಗಳು ಅದ್ಬುತವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಧರಿಯಪ್ಪ ರಾಥೋಡ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಸಹ ಶಿಕ್ಷಕರಾದ ಉಮಾ, ಹೆಚ್.ಎಮ್ ಶ್ರೀ ದೇವಿ, ಹೇಮ ಪ್ರಭ, ಶರಣ ಬಸಯ್ಯ, ವಿರೂಪಾಕ್ಷಪ್ಪ, ಶಾರದ,ರೇಖಾ,ಮಾಲಾ, ಮಹಾಂತೇಶ್, ವೀರರಾಜು, ಮಹೇಶ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here