ಸರ್ಕಾರಿ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ನಡೆಸಿ: ರಾಮಕೃಷ್ಣ

0
61

ಬಳ್ಳಾರಿ,ಮೇ 16: ಸರ್ಕಾರವು ವಿಕಲಚೇತನರ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಯೋಜನೆಗಳ ಅರಿವು ಹೊಂದುವ ಮೂಲಕ ವಿಕಲಚೇತನರು ವಿವಿಧ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ರಾಮಕೃಷ್ಣ ನಾಯಕ್ ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಪುನರ್ವಸತಿ ಕೇಂದ್ರ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕಂಟೋನ್‍ಮೆಂಟ್‍ನ ಶಾಂತಿಧಾಮ ಆವರಣದ ಸರ್ಕಾರಿ ಕಿವುಡು ಮಕ್ಕಳ ಪಾಠಶಾಲೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಸುಲಭ ಲಭ್ಯತೆ ವಿಶ್ವ ಜಾಗೃತಿ ಅರಿವು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗವಿಕಲರ ಕಾಯ್ದೆ-2016 ರ ಸುಲಭ ಲಭ್ಯತೆಯ ಉಪಬಂದಗಳು 40-46 ರವರೆಗಿನ ನಿಯಮಗಳ ಬಗ್ಗೆ ಅರಿವು ಹೊಂದಿ ವಿಶೇಷಚೇತನರು ಸರಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶ್ವ ಭಾರತಿ ಕಲಾನಿಕೇತನ ಸಂಸ್ಥೆಯ ಆಡಳಿತಾಧಿಕಾರಿ ಗುರುಮೂರ್ತಿ, ಕುರುಗೋಡು ಸ್ಮೈಲ್ ಸಂಸ್ಥೆಯ ಪಣಿರಾಜ, ಅನುಗ್ರಹ ಫೌಂಡೇಷನ್ ಟ್ರಸ್ಟ್ ಸಿಸ್ಟರ್ ಲಿಯೋನ, ಜಿಲ್ಲಾ ಪುನರ್ವಸತಿ ಕೇಂದ್ರದ ನಾಗೇಂದ್ರ, ಜಿಲ್ಲೆಯ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯರ್ತರಾದ ಸಿ.ರಾಣಿ ಸಾಬೇಶ್, ಕರಿಬಸಜ್ಜ, ರೇವಣ್ಣ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರು ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here