ಸಾರ್ವಜನಿಕರ ಬೇಡಿಕೆಗೆ ಮನ್ನಣೆ ನೀಡಿದ ಪಾಲಿಕೆ, ಅರ್ಜಿ ಸಲ್ಲಿಕೆಗೆ ಮೇ 2 ಕೊನೆಯ ದಿನ ಬಳ್ಳಾರಿ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ರಚನೆಗೆ ಅಸ್ತು;ಅಭಿವೃದ್ಧಿಗೆ ಮುನ್ನುಡಿ!

0
142

ಬಳ್ಳಾರಿ,ಏ.22 : ವಾರ್ಡ್ ಸಮಿತಿಗಳನ್ನು ರಚಿಸಬೇಕೆಂಬ ಬಳ್ಳಾರಿ ನಗರದ ಸಾರ್ವಜನಿಕರ ಬೇಡಿಕೆಗೆ ಮನ್ನಣೆ ನೀಡಿರುವ ಬಳ್ಳಾರಿ ಮಹಾನಗರ ಪಾಲಿಕೆಗೆ ವಾರ್ಡ್ ಸಮಿತಿ ರಚನೆಗೆ ಅನುಮೋದನೆ ನೀಡಿದ್ದು ವಾರ್ಡ್ ಸಮಿತಿ ರಚನೆಗೆ ಅಧಿಸೂಚನೆ ಹೊರಡಿಸಿದೆ.
ಪಾಲಿಕೆಯ 39 ವಾರ್ಡ್‍ಗಳಿಗೆ ಸಾರ್ವಜನಿಕರು ಒಳಗೊಂಡಂತೆ 11 ಸದಸ್ಯರ ಸಮಿತಿ ರಚನೆಗೆ ಅರ್ಹ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ವಾರ್ಡ್ ಪ್ರತಿನಿಧಿಸುವಂತಹ ಮಹಾನಗರ ಪಾಲಿಕೆಯ ಸದಸ್ಯನು ವಾರ್ಡ್ ಸಮಿತಿಯ ಅಧ್ಯಕ್ಷರಾಗಿರಲಿದ್ದು, ಇತರೆ ಹತ್ತು ಸದಸ್ಯರನ್ನು ಮಹಾನಗರ ಪಾಲಿಕೆ ನಾಮನಿರ್ದೇಶನ ಮಾಡಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ನಾಮನಿರ್ದೇಶಿತ 10 ಸದಸ್ಯರ ಪೈಕಿ ಕನಿಷ್ಟ ಇಬ್ಬರು ಸದಸ್ಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರಾರಿತಕ್ಕದ್ದು.ಕನಿಷ್ಟ ಮೂರು ಮಂದಿ ಮಹಿಳಾ ಸದಸ್ಯರು ಮತ್ತು ನಿವಾಸಿ ಕ್ಷೇಮಾಭಿವೃದ್ದಿ ಸಂಘಗಳನ್ನು ಪ್ರತಿನಿಧಿಸುವಂತಹ ಕನಿಷ್ಟ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಕ್ಷೇಮಾಭಿವೃದ್ಧಿ ಸಂಘಗಳು ಯಾವುದೇ ಹೆಸರುಳ್ಳದಾಗಿದ್ದು, ಈ ಷರತ್ತುಗಳನ್ನು ಪೂರೈಸಿರತಕ್ಕದ್ದು( ಅದರ ನೋಂದಾಯಿತ ಕಛೇರಿಯ ಅ ವಾರ್ಡಿನ ಭೌಗೋಳಿಕ ವ್ಯಾಪ್ತಿಯಲ್ಲಿರತಕ್ಕದ್ದು. ಅದು ಬಹುತೇಕ ನಿವಾಸಿಗಳು, ಆಥವಾ ಪೌರಸಂಬಂಧಿ ಗುಂಪು ಅಥವಾ ವಾಣಿಜ್ಯ ಗುಂಪು ಅಥವಾ ಕೈಗಾರಿಕಾ ಗುಂಪುಗಳನ್ನು ಪ್ರತಿನಿಧಿಸುತ್ತಿರತಕ್ಕದ್ದು. ಕನಿಷ್ಟ ಮೂರು ವರ್ಷ ಕಾಲ ತನ್ನ ಕಾರ್ಯಚಟುವಟಿಕೆಗಳಲ್ಲಿ ನಿರತವಾಗಿರತಕ್ಕದ್ದು. ಯಾವುದೇ ಹೆಸರಿನಿಂದ ನೊಂದಾಯಿಸಲ್ಪಟ್ಟಿದ್ದು, ಧರ್ಮದರ್ಶಿತ್ವದ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಗಳನ್ನು ಒಳಗೊಂಡಿರತಕ್ಕದ್ದು).ಇನ್ನುಳಿದಂತೆ ಮೂವರು ಸದಸ್ಯರನ್ನು ಮಹಾನಗರ ಪಾಲಿಕೆ ನೇಮಿಸಲಿದ್ದು, ಇದಕ್ಕೆ ಮಹಾನಗರ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಲು ಅನರ್ಹನಾಗಿರತಕ್ಕ ವ್ಯಕ್ತಿಯನ್ನು ಹೊರತುಪಡಿಸಿ ನೇಮಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆ ಕಚೇರಿ ತಿಳಿಸಿದೆ.
*ಅರ್ಜಿಗಳು ಎಲ್ಲಿ ಲಭ್ಯ..?: ಮಹಾನಗರಪಾಲಿಕೆಯ Websiಣe:ತಿತಿತಿ.beಟಟಚಿಡಿಥಿಛಿiಣಥಿ.mಡಿಛಿ.gov.iಟಿ ನಲ್ಲಿ ಇತ್ತೀಚಿನ ಸುದ್ದಿಗಳು ಕಾಲಂನಲ್ಲಿ ಅರ್ಜಿ ನಮೂನೆಯನ್ನು ಅಪ್‍ಡೇಟ್ ಮಾಡಿದ್ದು ಅದನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ ಬಳ್ಳಾರಿ ಮಹಾನಗರಪಾಲಿಕೆಯ ವಲಯ ಕಛೇರಿ 1,2 ಹಾಗೂ 3 ರಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು ಅಲ್ಲಿಯು ಸಹಾ ಪಡೆದು ಭರ್ತಿ ಮಾಡಿ ಮೇ 2ರೊಳಗೆ ಸಂಬಂಧಪಟ್ಟ ವಾರ್ಡಿನ ವಲಯ ಕಛೇರಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಏನೇನು ದಾಖಲೆಗಳು ಬೇಕು…?: ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ (ಮೀಸಲಾತಿ ಕ್ಲೇಮ್ ಮಾಡಿದ್ದಲ್ಲಿ ತಹಸೀಲ್ದಾರರವರಿಂದ ಪಡದ ಪ್ರಮಾಣ ಪತ್ರ ಲಗತ್ತಿಸುವುದು), ಕುಟುಂಬದ ವಾರ್ಷಿಕ ವರಮಾನ (ತಹಶೀಲ್ದಾರರವರಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸುವುದು),ದೈಹಿಕ ನ್ಯೂನ್ಯತೆ ಹೊಂದಿದ ಬಗ್ಗೆ ಪತ್ರ (ಪ್ರಾಥಮಿಕ ಆರೋಗ್ಯ ಕೇಂದ್ರ ದೃಢೀಕರಣ ಪತ್ರ), ಆರ್‍ಡಬ್ಲ್ಯೂಎ/ಎನ್‍ಜಿಓ ವರ್ಗದಲ್ಲಿ ಮೀಸಲಾತಿ ಕೋರಿದ್ದಲ್ಲಿ ಅಧ್ಯಕ್ಷರು/ಸಂಘ-ಸಂಸ್ಥೆಯ ಕಾರ್ಯದರ್ಶಿರವರಿಂದ ಶಿಫಾರಸ್ಸು ಪತ್ರ ಲಗತ್ತಿಸುವುದು. ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿದ ಬಗ್ಗೆ ಪ್ರಶಸ್ತಿ/ಮನ್ನಣೆ ಪಡೆದಿರುವ ಕುರಿತು ಸಮರ್ಥಿಸುವಂತಹ ದಾಖಲೆಗಳು. ವರ್ಗ ಅಧಾರಿತ ದಾಖಲೆಗಳು (ಆಸಕ್ತಿ/ಅನುಭವ ಹೊಂದಿದ ಕ್ಷೇತ್ರಗಳಿಂದ).ಚುನಾವಣಾ ಗುರುತಿನ ಚೀಟಿಯ ದೃಢೀಕರಣ ಪ್ರತಿಗಳನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿ ಹಾಗೂ ವಾರ್ಡ್ ಸಮಿತಿ ಸದಸ್ಯರ ಷರತ್ತುಗಳ ಕುರಿತು ಕಛೇರಿ ಅವಧಿಯಲ್ಲಿ ಮಹಾನಗರಪಾಲಿಕೆಯ ವಲಯ ಕಛೇರಿ-1,2 ಹಾಗೂ 3 ರ ವಲಯ ಆಯುಕ್ತರಿಗೆ ಭೇಟಿಯಾಗಿ ಪಡೆಯಬಹುದು ಎಂದು ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಸ್ಪಷ್ಟಪಡಿಸಿದ್ದಾರೆ.
ವಾರ್ಡ್ ಸಮಿತಿ ರಚನೆ;ಜನರ ಅಭಿಪ್ರಾಯ ಮಂಡಿಸಲು ವೇದಿಕೆ: ವಾರ್ಡ್ ಮಟ್ಟದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಮತ್ತು ವಾರ್ಡ್‍ನ ಅಭಿವೃದ್ಧಿ ಕುರಿತು ಚರ್ಚಿಸಲು ವಾರ್ಡ್ ಸಮಿತಿ ರಚನೆ ಒಂದೊಳ್ಳೆ ವೇದಿಕೆ ಎನ್ನುತ್ತಾರೆ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು. ವಾರ್ಡ್‍ನ ಎಲ್ಲ ಸಮಸ್ಯೆಗಳನ್ನು ಪ್ರತಿ ಬಾರಿ ಪಾಲಿಕೆ ಕಚೇರಿಗೆ ಹೋಗಿ ತಿಳಿಸಲು ಜನರಿಗೆ ಕಷ್ಟವಾಗಬಹುದು. ವಾರ್ಡ್ ಸಮಿತಿ ರಚನೆ ಆದ್ರೇ ವಾರ್ಡ್‍ನಲ್ಲಿಯೇ ಅವುಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ವಾರ್ಡ್‍ನ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಸಾರ್ವಜನಿಕರು ಬೇಗ ಅರ್ಜಿ ಸಲ್ಲಿಸಿದರೇ ಆದಷ್ಟು ಬೇಗ ಸಮಿತಿ ರಚಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಾರೆ.

LEAVE A REPLY

Please enter your comment!
Please enter your name here