ಹಣ ಲೂಟಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಚಿವರು ಪೈಪೋಟಿಗೆ : ಜಿ.ಪರಮೇಶ್ವರ

0
173

ಕೋಲಾರ : ಹಣ ಲೂಟಿ ಹೊಡೆಯಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಚಿವರು ಪೈಪೋಟಿಗೆ ನಿಂತಿದ್ದಾರೆ. ಕರೋನಾ ಹೆಸರಲ್ಲಿ ನಡೆದಿರುವ 2 ಸಾವಿರ ಕೋಟಿ ಹಗರಣವನ್ನು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಕಾಂಗ್ರೆಸ್ ನ ಮಾಜಿ ಡಿಸಿಎಂ ಜಿ.ಪರಮೇಶ್ವರ ಆಗ್ರಹಿಸಿದರು.

ಕೋಲಾರದ ಪತ್ರಕರ್ತರ ಭವನದಲ್ಲಿ ಜಿಲ್ಲೆಯ ಶಾಸಕರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಜಿ.ಪರಮೇಶ್ವರ ಕೋವಿಡ್-19 ಹೆಸರಲ್ಲಿ ರಾಜ್ಯ ಸರ್ಕಾರ ಲೂಟಿ ನಡೆಸಿರುವುದನ್ನು ಇಡೀ ರಾಜ್ಯದ ಜನತೆಗೆ ತಿಳಿಸಲು ಕಾಂಗ್ರೆಸ್ ನಿರ್ಧಾರಿಸಿದೆ.
ಸಾಮಾನ್ಯ ಜನರಿಗೂ ಬಿಜೆಪಿ ಕೋವಿಡ್-19 ಹೆಸರಲ್ಲಿ ಸರ್ಕಾರ ನಡೆಸಿರುವ ಅಕ್ರಮ ಗೊತ್ತಾಗಬೇಕಾಗಿದೆ ಕೋವಿಡ್-19 ಹೆಸರಲ್ಲಿ 2 ಸಾವಿರ ಕೋಟಿ ಭ್ರಷ್ಟಾಚಾರವನ್ನು ಸಿಎಂ ಯಡಿಯೂರಪ್ಪ ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

330ರೂಪಾಯಿ ಬೆಲೆಯ ಕಿಟ್
ಗಳನ್ನು 2000ರೂಪಾಯಿಗೆ ,ಐವತ್ತು ರೂಪಾಯಿಗೂ ಕಡಿಮೆ ಬೆಲೆಯ ಮಾಸ್ಕ್ ಗಳಿಗೆ 150ರೂಪಾಯಿ ಖರೀದಿಸಿದ್ದೀರ. ಥರ್ಮಲ್ ಎಕ್ಯುಪಮೆಂಟ್ ನ ‌ಬೆಲೆ 2ಸಾವಿರ, ಆದ್ರೆ ಸರ್ಕಾರದ ಆರೋಗ್ಯ ಇಲಾಖೆ 5945 ಹಾಗೂ ಸಮಾಜ ಕಲ್ಯಾಣ ಇಲಾಖೆ ಒಂಬತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ವೆನ್ಟಿಲೇಟರ್ ಮಿಳುನಾಡಿನಲ್ಲಿ 4 ಲಕ್ಷ ಕೊಟ್ಟು ಖರೀದಿಸಿದ್ದಾರೆ. ಕೇಂದ್ರ ಸರ್ಕಾರ ನಾಲ್ಕು ಲಕ್ಷಕ್ಕೆ ತೆಗೆದುಕೊಳ್ಳತ್ತಾರೆ. ರಾಜ್ಯ ಸರ್ಕಾರ ಲೂಟಿ 5.6 ಲಕ್ಷ ದಿಂದ 18.2 ಲಕ್ಷ ತೆಗೆದುಕೊಂಡಿದ್ದಾರೆ, ಥರ್ಮಲ್ ಸ್ಕಾನ್ಯರ 2ರಿಂದ 3 ಸಾವಿರ ಮಾರುಕಟ್ಟೆ ಬೆಲೆ ಇದ್ರೆ ಆರೋಗ್ಯ ಇಲಾಖೆ ಥರ್ಮಲ್ ಸ್ಕ್ಯಾನರ್ 5945ರೂ ಕೊಟ್ಟ ಖರೀದಿ ಮಾಡಿದ್ರೆ ಇತ್ತ ಸಮಾಜ ಕಲ್ಯಾಣ ಇಲಾಖೆ 9 ಸಾವಿರ ಕೊಟ್ಟ ಖರೀದಿ ಮಾಡಿದ್ದಾರೆ‌. ಕೋವಿಡ್-19 ಹೆಸರಲ್ಲಿ 2 ಸಾವಿರ ಕೋಟಿ ಭ್ರಷ್ಟಾಚಾರವನ್ನು ಸಿಎಂ ಯಡಿಯೂರಪ್ಪ ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here