ಜವಳಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಉಚಿತ ತರಗತಿಗಳ ಪ್ರಾರಂಭೋತ್ಸವ

0
212

ವಿಜಯನಗರ:ಸೆ:೦4; ಹೊಸಪೇಟೆಯ ಟಿ.ಬಿ.ಡ್ಯಾಂನಲ್ಲಿ ನಡೆದ ಶಾಂತಪ್ರಭ ಎಜುಕೇಷನಲ್ ಟ್ರಸ್ಟ್ ಅಡಿಯಲ್ಲಿ ಬರುವ ಜವಳಿಸ್ ಪ.ಪೂ ಕಾಲೇಜನಲ್ಲಿ ಪ್ರಥಮ ಪಿ.ಯು.ಸಿ ಉಚಿತ ತರಗತಿಗಳ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಾಗಿತ್ತು ಕಾಲೇಜಿನ ಪ್ರಾಚಾರ್ಯರು ಬೋದಕ ಮತ್ತು ಬೋಧಕೇತರ ವರ್ಗದವರು ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರವೇಶ ಪಡೆದ ಪಿ.ಯು.ಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಾನಿಗಳಾದ
ಶ್ರೀ.ಹರ್ಷವರ್ದನ ಪತ್ತಿಕೊಂಡರವರು ಜ್ಯೋತಿ ಬೆಳಗಿಸುವ ಮ‌ೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು

ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ ಧ್ಯಾನದಿಂದ ಮಾತ್ರ ಏಕಾಗ್ರತೆ ಲಭ್ಯವಾಗುತ್ತೆಂದು ಮತ್ತು ವಿದ್ಯಾರ್ಥಿಗಳಿಗೆ ಮುಂದಿನ ಗುರಿಗಳನ್ನು ತಲುಪಲು ಏಕಾಗ್ರತೆ ಅವಶ್ಯಕವೆಂದು,ಧ್ಯಾನದ ಮೂಲಕ ಗುರಿ ಸಾಧನೆ ಸಾಧ್ಯ ಎಂದು ತಿಳಿ ಹೇಳಿದರು. ಇಂದಿನ ದಿನಮಾನಗಳಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯವು ಬಹಳ ಮುಖ್ಯವೆಂದು ತಿಳಿಸುತ್ತಾ ಮಹಾಮಾರಿಯಾಗಿ ಪಕ್ಕದ ರಾಜ್ಯಗಳನ್ನು ಕಾಡುತ್ತಿರುವ ಕರೋನವನ್ನು ದೊರವಿಡಬೇಕಾದರೆ ನಮ್ಮಲ್ಲಿ ಜಾಗರೂಕತೆ ಬಹಳ ಮುಖ್ಯವೆಂದು ಉತ್ತಮ ಆರೋಗ್ಯವನ್ನು ಗಳಿಸಿಕೊಳ್ಳಲು ಪ್ರಯತ್ನಿಸಿ ಎಂದು ಕಿವಿ ಮಾತು ಹೇಳುತ್ತಾ ಲೇಪಾಕ್ಷ ಎಸ್ ಜವಳಿರವರ ಅವಿರತ ಸೇವೆಯನ್ನು ನಾನು ನನ್ನ ತಂದೆವರೊಂದಿಗೆ ನೋಡುತ್ತಿದ್ದು ಇವರ ಉಚಿತ ವಿದ್ಯಾಭ್ಯಾಸವನ್ನು ಪಡೆದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಉತ್ತುಂಗದಲ್ಲಿ ಇದ್ದಾರೆ, ಇಂದು ಜವಳಿಸ್ ಪ.ಪೂ ಕಾಲೇಜಿಗೆ ನನ್ನ ಅಲ್ಪ ಮಟ್ಟದಲ್ಲಾದರು ಸಹಾಯವಾದರೆ ಅದು ನನಗೆ ಸಂತೋಷವೆಂದು ನನ್ನಂತೆ ಇನ್ನೂ ಹಲವು ದಾನಿಗಳು ಈ ಶಿಕ್ಷಣ ಸಂಸ್ಥೆಗೆ ಸಹಾಯ ನೀಡಿದರೆ ಅದು ಸಮಾಜಕ್ಕೆ ಮಾಡಿದ ಸೇವೆ ಮಾಡಿದ ಹಾಗೇ ಆಗುತ್ತದೆ ಎಂದು ತಿಳಿಸಿದರು.

ನಂತರ ಜವಳಿಸ್ ಪ.ಪೂ ಕಾಲೇಜ ಹಿರಿಯ ಸಹಾಯಕರು ಹಾಗೂ ಮಾರ್ಗದರ್ಶಕರಾದ ಶ್ರೀ ಜಿ.ಸದ್ಯೋಜಾತಪ್ಪನವರು ಮಾತನಾಡುತ್ತಾ ವಿದ್ಯಾರ್ಥಿಗಳು ಕರೋನದಿಂದ ತಮ್ಮನ್ನು ತಾವು ಕಾಪಾಡಿಕೊಂಡು ಜ್ಞಾನ ಜ್ಯೋತಿಯಂತಿರುವ ಈ ಕಾಲೇಜಿಗೆ ಒಳಿತನ್ನು ಮಾಡುತ್ತಾ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ನಂತರ ಹಿರಿಯ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ.ಸಿಕಂದರ್ ರವರು ಮಕ್ಕಳನ್ನು ಉದ್ದೇಶಿಸಿ ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವೆಂದು ಈ ದಿನಗಳಲ್ಲಿ ವಿದ್ಯಾರ್ಥಿಗಳು ಸೃಜನಶೀಲರಾಗಬೇಂದು ಕಿವಿ ಮಾತು ಹೇಳುತ್ತಾ ಜವಳಿಸ್ ಕಾಲೇಜಿನವರ ನಿಸ್ವಾರ್ಥ ಸೇವೆಗೆ ವಿದ್ಯಾರ್ಥಿಗಳು ಪ್ರತಿಫಲ ನೀಡಬೇಕೆಂದರೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಕೀರ್ತಿ ತರುವಂತಾಗಬೇಂದು ತಿಳಿಸಿದರು.

ಹಾಗೆಯೇ ಜೀವಶಾಸ್ತ್ರ ಉಪನ್ಯಾಸಕಿ
ಕು.ಸಂಗೀತ ನಟರಾಜನ್ ರವರು ಮಾತನಾಡುತ್ತಾ ಶಿಸ್ತಿನಿಂದ ಮಾತ್ರ ವಿದ್ಯಾರ್ಥಿಗಳು ಉತ್ತಮ ಬದುಕನ್ನು ಕಂಡುಕೊಳ್ಳಲು ಸಾಧ್ಯವೆಂದು ತಿಳಿಸಿದರು ನಂತರ ಶಾಂತಪ್ರಭ ಎಜ್ಯುಕೇಷನಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ಲೇಪಾಕ್ಷ. ಎಸ್.ಜವಳಿರವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಂದ ದೂರವಿರಬೇಕೆಂದು , ಫ್ಯಾಷನ್ ಪ್ರಪಂಚಕ್ಕೆ ಮಾರು ಹೋಗದೆ ತಮ್ಮ ಗುರಿಗಳತ್ತಾ ಲಕ್ಷ್ಯೆವಿರಿಸಬೇಕೆಂದು ತಿಳಿಸುತ್ತಾ ಪ್ರಥಮ ಪಿ.ಯು.ಸಿ ಉಚಿತ ಪ್ರವೇಶಕ್ಕೆ ಇನ್ನೂ ಕಾಲಾವಕಾಶವಿದೆ ಎಂದು ಅಸಕ್ತ ವಿದ್ಯಾರ್ಥಿಗಳು ಕೂಡಲೇ ಸಂಪರ್ಕಿಸಿ ಪ್ರವೇಶವನ್ನು ಪಡೆಯಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಉತ್ತಮ ವಿದ್ಯಾರ್ಥಿಗಳಿಗೆ ಯಾವುದೇ ಕಾಲೇಜಾದರೇನು ಅವರು ಉತ್ತಮವಾಗಿಯೇ ಓದುತ್ತಾರೆಂದು, ಕಾಲೇಜಿನ ಕುಂದುಕೊರತೆಗಳನ್ನು ಹೇಳುತ್ತಾ ಕುಂಟು ನೆಪ ಹೇಳದೆ ಉಪನ್ಯಾಸಕರ ಮಾರ್ಗದರ್ಶನ ಪಡೆದು ಒಳ್ಳೆಯ ಅಂಕಗಳಿಸಿ ಕೀರ್ತಿವಂತರಾಗಿ ಎಂದು ಹಾರೈಸಿದರು ದಾನಿಗಳಾದ ಶ್ರೀ ಹರ್ಷವರ್ಧನ ಪತ್ತಿಕೊಂಡರವರನ್ನು ಜವಳಿಸ್ ಪ.ಪೂ ಕಾಲೇಜಿನವತಿಂದ ಸನ್ಮಾನಿಸಲಾಯಿತು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಎಸ್.ಮಂಜುಳ ಸ್ವಾಗತ ಮತ್ತು ವಂದಾನರ್ಪಣೆ ಮಾಡಿದರು ಉಪನ್ಯಾಸಕರಾದ ಶ್ರೀ.ವಿರೇಶ ಮಸಲವಾಡ ಮತ್ತು ಅಜರುಧ್ಧಿನ್ ಜೆ, ಉಪಸ್ಥಿತಿಯಲ್ಲಿದ್ದರು

LEAVE A REPLY

Please enter your comment!
Please enter your name here