ಕುರೆಕುಪ್ಪದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚಾರಣೆ ಕಾರ್ಯಕ್ರಮ

0
495

ಸಂಡೂರು:ಸೆ:೩೮:-ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಲ್ಲಿ ಪೋಷನ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ತೋರಣಗಲ್ಲು ಎ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಕುರೇಕುಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಪೌಷ್ಟಿಕ ಶಿಬಿರದಲ್ಲಿ ಪೌಷ್ಟಿಕ ಆಹಾರಗಳ ಪ್ರದರ್ಶನ, ಶಿಶುಗಳಿಗೆ ಅನ್ನಪ್ರಾಶನ ಕಾರ್ಯಕ್ರಮ ಮತ್ತು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಸದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಡಿಪಿಓ ಕೆ ಪ್ರೇಮಮೂರ್ತಿ ರವರು ರಾಷ್ಟ್ರೀಯ ಪೋಷಣೆ ಅಭಿಯಾನ ಯೋಜನೆಯು ಭಾರತದಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಜಾರಿಗೆ ಬಂದಿದೆ ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಪೋಷಕಾಂಶಗಳಿರುವ ಆಹಾರವನ್ನು ಸೇವನೆ ಮಾಡುವವರ ಮೂಲಕ ಬಲಿಷ್ಠ ಮಗುವನ್ನು ನೀಡಲು ಸಾಧ್ಯ.” ಸ್ಥಳೀಯವಾಗಿ ಸಿಗುವ ಸಿರಿಧಾನ್ಯಗಳನ್ನು ಬಳಕೆ ಮಾಡುವುದರ ಜೊತೆಗೆ ತರಕಾರಿ ಹಣ್ಣುಹಂಪಲ ಸೇವನೆ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು ಹಾಗೂ ಮಹಿಳೆಯರಿಗಾಗಿ ಇರುವ ಇಲಾಖೆಯ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳಲು ತಿಳಿಸಿದರು.

ವಲಯದ ಮೇಲ್ವಿಚಾರಕರಾದ ಲಕ್ಷ್ಮೀಬಾಯಿ ಕಂಕನವಾಡಿ, ಅವರು ಮಾತನಾಡಿ ಒಬ್ಬ ತಾಯಿ ಮಗುವಿನ ಲಾಲನೆ ಪಾಲನೆ ಮಾಡುವುದರ ಮೂಲಕ ಪೌಷ್ಟಿಕವಾದ ಮಗುವನ್ನು ದೇಶಕ್ಕೆ ಕೊಡುಗೆಯಾಗಿ ನೀಡುವುದಕ್ಕೆ ಸಾಧ್ಯ ಎಂದರು

ಸದರಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಪ್ಪ ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿ ಬಗ್ಗೆ , ಹಾಗೂ ಡಾಕ್ಟರ್ ಸುಮಿತ್ರ ಮಕ್ಕಳ ಆರೋಗ್ಯ ತಪಾಸಣೆ ಬಗ್ಗೆ ಮಾತನಾಡಿದರು, ತಾಲೂಕು ಪೋಷಣ ಅಭಿಯಾನದ ಸಂಯೋಜಕರಾದ ಗಂಗಾಧರ್ ಹಾಗೂ ಮೇಲ್ವಿಚಾರಕರಾದ ಶ್ರೀಮತಿ ಗೀತಾ ಲಕ್ಷ್ಮಿ ಪ್ರಸನ್ನನವರು ಮತ್ತು ಚೇತನ್ ಗೌಡ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಸುಮನಾ ಹಾಗೂ ಪುರಸಭೆ ಸದಸ್ಯರಾದ ಎಸ್ ಕೆ ಮೆಹಬೂಬ್ ಬಾಷ ಹಾಗೂ ಎಲ್ಲಾ ಅಂಗನವಾಡಿ ಕಾರ್ಯಕರ್ತರಾದ ಮಾರೆಕ್ಕ, ಮಹಾಲಕ್ಷ್ಮಿ, ನೀಲಮ್ಮ, ಮಲ್ಲಮ್ಮ, ಜ್ಯೋತಿ, ಹೆಚ್.ಎಮ್ ಅರುಣಕುಮಾರಿ, ವೆಂಕಮ್ಮ, ಪಾರ್ವತಿ, ನಾಗರತ್ನ, ಲತಾ, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆ ಬಸಮ್ಮ,ಮಾಳಮ್ಮ, ನೀಲಮ್ಮ, ಸುಶೀಲಮ್ಮ,ತಿಮ್ಮಕ್ಕ, ಗರ್ಭಿಣಿಯರು ಬಾಣಂತಿಯರು ಮತ್ತು ಮಕ್ಕಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here