ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಆಶಯಗಳಿಗೆ ಧಕ್ಕೆ ಖಂಡನೆ:ಭಾರತೀಯ ದಲಿತ ಪ್ಯಾಂಥರ್

0
184

ಬಳ್ಳಾರಿ:ಕಂಪ್ಲಿ:ಜೂನ್:04:- ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್ ವಿಚಾರಗಳ ಮರು ಪರಿಷ್ಕರಣೆಯನ್ನು ಅತ್ಯಂತ ಉಗ್ರ ಪದಗಳಲ್ಲಿ ಖಂಡಿಸುತ್ತಾ, ಭಾರತೀಯ ದಲಿತ ಪ್ಯಾಂಥರ್‍ ಸಂಘಟನೆಯ ಕಂಪ್ಲಿ ನಗರ ಘಟಕದ ಅಧ್ಯಕ್ಷರು ದೊಡ್ಡ ಬಸವರಾಜ ಬಡಗಿ ರವರು ಮಾತನಾಡಿ.ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಕುರಿತು ರಾಜ್ಯದ ಹಲವು ಗಣ್ಯ ಸಾಹಿತಿಗಳು, ಬರಹಗಾರರು, ಶಿಕ್ಷಣ ತಜ್ಞರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದ ಜನತೆ ಮತ್ತು ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಜಾತಿ, ಧರ್ಮಗಳ ಗಡಿಯನ್ನು ಮೀರಿ ಒಂದಾಗಿ, ಈ ಶಿಕ್ಷಣ ವಿರೋಧಿ ಮರು ಪರಿಷ್ಕರಣೆ ವಿರುದ್ಧ ತಮ್ಮ ಆಕ್ರೋಶದ ಧ್ವನಿಯೆತ್ತಿದ್ದಾರೆ. ಪಠ್ಯದಲ್ಲಿ ಕೈ ಬಿಡಲಾಗಿದ್ದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಕುರಿತ ಪಾಠವನ್ನು ಜನ ಚಳುವಳಿಯ ಒತ್ತಾಯದಿಂದ, ಸರ್ಕಾರವು ಮರು ಸೇರ್ಪಡೆ ಮಾಡಿದ್ದರೂ, ಮರು ಪರಿಷ್ಕೃತ ಪಠ್ಯದಲ್ಲಿ ಹಲವು ಮೂಲಭೂತ ದೋಷಗಳು ಕಂಡು ಬಂದಿರುವುದು ಅತ್ಯಂತ ಆತಂಕಕ್ಕೆ ಕಾರಣವಾಗಿದೆ.

ಇದೀಗ ಬೆಳಕಿಗೆ ಬಂದಿರುವಂತೆ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಕುರಿತ ಪಾಠಗಳನ್ನು ತಿದ್ದುಪಡಿ ಮಾಡಲಾಗಿದೆ. ಬದಲಾಯಿಸಿರುವ ಪಾಠದಲ್ಲಿ, ಬಸವಣ್ಣನವರ ಐತಿಹಾಸಿಕ ಹಿನ್ನಲೆ ಕುರಿತು ತಪ್ಪಾಗಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿ ಇದ್ದ ಜಾತಿ ಸಮಸ್ಯೆಯನ್ನು ಪ್ರತಿಭಟಿಸುತ್ತಾ ಅಂಬೇಡ್ಕರರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದರು ಎಂಬ ಬಹು ಮುಖ್ಯ ಸತ್ಯವನ್ನೇ ಮರೆಮಾಚಲಾಗಿದೆ. ಜಾತಿ ಶ್ರೇಣಿಯನ್ನು ವಿರೋಧಿಸಿದ್ದ ಇಬ್ಬರು ಧೀಮಂತರ ಚಾರಿತ್ರ್ಯಕ್ಕೆ ಭಂಗ ತರಲಾಗಿದೆ. ಅದೇ ರೀತಿಯಲ್ಲಿ ಭಾರತೀಯತೆ ಹಾಗೂ ಮಹಿಳೆಯರ ಘನತೆಗಳಿಗೆ ವಿರುದ್ಧವಾಗಿದ್ದ ಪಾಠಗಳಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವುಗಳಲ್ಲೇ ಕೆಲವು ಮಾರ್ಪಾಡು ಮಾಡಿ ಪುನರ್ ಜಾರಿಗೊಳಿಸಲಾಗಿದೆ. ಇವೆರಡೂ ಅನೈತಿಕ ಕ್ರಮಗಳನ್ನೂ -ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ.

ಸರ್ಕಾರವು ಸಂಘ ಪರಿವಾರದ ವಿಚಾರಗಳನ್ನು ಹೇರುತ್ತಿದೆ. ಇದು ವೈಚಾರಿಕ ದಾಳಿ ಎಂಬುದು ಬಹಳ ಸ್ಪಷ್ಟವಾಗಿ ಕಾಣುತ್ತದೆ. ಬಸವಣ್ಣ, ಅಂಬೇಡ್ಕರ್, ಭಗತ್ ಸಿಂಗ್, ವಿವೇಕಾನಂದ, ಗಾಂಧೀಜಿ – ಈ ಎಲ್ಲಾ ಮಹಾನ್ ವ್ಯಕ್ತಿಗಳ ಆಶಯಕ್ಕೆ ತಿಲಾಂಜಲಿ ಇಟ್ಟು, ಒಂದೆಡೆ ಶಿಕ್ಷಣವನ್ನು ಆಳುಮಾಡುವುದು ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಇರುವ ಆದರ್ಶಗಳನ್ನು ಧ್ವಂಸ ಮಾಡುವುದೆ ಇದರ ಹಿಂದಿರುವ ಹುನ್ನಾರ.

ಸರ್ಕಾರವು ಆಳುವ ವರ್ಗದ ಕೊಳಕು ರಾಜಕಾರಣದ ಹಿತಕ್ಕಾಗಿ ಹಾಗೂ ಜನತೆಯ ಹಿತಕ್ಕೆ ವಿರುದ್ಧವಾಗಿ ಮಕ್ಕಳ ಮನಸ್ಸಿನ ಮೇಲೆ ದಾಳಿ ನಡೆಸುತ್ತಿದೆ. ಮಕ್ಕಳಲ್ಲಿ ಜಾತಿ ತಾರತಮ್ಯ ಇರುವುದಿಲ್ಲ. ಅದು ಮುಗ್ಧ ಮನಸ್ಸುಗಳು. ಆದರೆ ಈಗ ಅದನ್ನೇ ಕೆಡವಲು ಸರ್ಕಾರ ಮುಂದಾಗಿದೆ. ಈ ದಾಳಿಯ ವಿರುದ್ಧ ಶಿಕ್ಷಣ ಪ್ರೇಮಿ ಜನತೆ, ಜೀವ ಪ್ರೇಮಿ ಜನತೆ ಪ್ರತಿಭಟಿಸಬೇಕು.

ಈ ವೈಚಾರಿಕ ದಾಳಿಯ ವಿರುದ್ಧ ಹೋರಾಡುತ್ತಾ ಮರು ಪರಿಷ್ಕರಣೆಯನ್ನು ಖಂಡಿಸಿ, ಹಲವು ಗಣ್ಯ ಸಾಹಿತಿಗಳು, ಬರಹಗಾರರು, ಕವಿಗಳು ಹಾಗೂ ಶಿಕ್ಷಣ ತಜ್ಞರು ಪ್ರತಿರೋಧಿಸುತ್ತಿದ್ದಾರೆ. ಪಠ್ಯಕ್ಕೆ ತಮ್ಮ ಲೇಖನ / ಕವಿತೆಯನ್ನು ಸೇರಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆಯುತ್ತಿದ್ದಾರೆ. ಇವರ ಹೋರಾಟವನ್ನು ಶ್ಲಾಘಿಸುತ್ತಾ, ಈ ಹೋರಾಟದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಲು -ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಕಂಪ್ಲಿ ನಗರ ಘಟಕದ ಅಧ್ಯಕ್ಷರು ದೊಡ್ಡ ಬಸವರಾಜ ಬಡಗಿ ಮತ್ತು ತಾಲೂಕು ಘಟಕದ ಗೌರವಾಧ್ಯಕ್ಷರು ಹೇಮಂತ್ ಕುಮಾರ ದಾನಪ್ಪ ಅಧ್ಯಕ್ಷರು ಸೈಯದ್ ವಾರೀಶ್ ಮತ್ತು ಉಪಾಧ್ಯಕ್ಷರು ಜಿ.ಫ್ರಭು. ಪ್ರಧಾನ ಕಾರ್ಯದರ್ಶಿ ರಮೇಶ ಕುಂಟೋಜಿ ಮತ್ತು ಸಂಘಟನಾ ಕಾರ್ಯದರ್ಶಿ ಮನೋಜ್ ಕುಮಾರ ದಾನಪ್ಪ ಮತ್ತು ಸಹ ಕಾರ್ಯದರ್ಶಿ ಹೆಚ್ ವೆಂಕಟೇಶ್ ಖಜಾಂಚಿ ರೋಷನ್ ಪದಾಧಿಕಾರಿಗಳಾದ ಎಸ್.ಲೋಕೇಶ್. ಪುಟಾಣ ಈರಣ್ಣ ಮಣಜುನಾಥ ಗುಡಿಮನೆ, ಗಂಗಾವತಿ ಕೃಷ್ಣರವರು ತಿಳಿಸಿದರು

LEAVE A REPLY

Please enter your comment!
Please enter your name here