ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ರಾಜಸ್ವ ಧನ ಸೇರಿದಂತೆ 18 ಸಾವಿರ ಕೋಟಿ ಜಮೆ ಆಗಿದೆಯೆಂದು ತಪ್ಪು ಹೇಳಿದ್ದು ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ಖಂಡನೆ.

0
140

ಸಂಗ್ರಹ ಚಿತ್ರ

                                            ಕರ್ನಾಟಕ ರಾಜ್ಯದ ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯ ಸಚಿವರಾದ ಶ್ರೀ ಮುರುಗೇಶ್ ನಿರಾಣಿ ಯವರು ದಿನಾಂಕ 12.03.21 ರಂದು ಧಾರವಾಡದಲ್ಲಿ ನಡೆಸಿದ ಪತ್ರಿಕಾ ಘೋಷ್ಠಿಯಲ್ಲಿ ಬಳ್ಳಾರಿ,ಚಿತ್ರದುರ್ಗ,ತುಮಕೂರು ಜಿಲ್ಲೆಗಳಲ್ಲಿ ನಡೆದ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ರಾಜಸ್ವ ಧನ 12000 ಕೋಟಿ ಜೊತೆಗೆ ಬಡ್ಡಿ ಸೇರಿದಂತೆ 18 ಸಾವಿರ ಕೋಟಿ ಜಮೆ ಆಗಿದೆಯೆಂದು ಜನರ ದಿಕ್ಕು ತಪ್ಪಿಸುವಂತಹ ಹೇಳಿಕೆ ನೀಡಿರುವುದನ್ನು ಖಂಡಿಸಿ ಜನ ಸಂಗ್ರಾಮ್ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಆಲ್ದಳ್ಳಿ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದರು.

ಬಳ್ಳಾರಿ,ಚಿತ್ರದುರ್ಗ,ತುಮಕೂರು ಜಿಲ್ಲೆಗಳಲ್ಲಿ 2000-2010 ರವೆರೆಗೆ ನಡೆದ ಅವ್ಯಾಹಿತ ಅಕ್ರಮ ಗಣಿಗಾರಿಕೆಯಿಂದ ಸುತ್ತಲಿನ ಪ್ರದೇಶಗಳು ಗಣಿ ಧೂಳಿನ ಹೊಡೆತಕ್ಕೆ ಸಿಲುಕಿ ಕೃಷಿ,ಪರಿಸರ,ಅರಣ್ಯ,ಆರೋಗ್ಯ ಸೇರಿದಂತೆ ಎಲ್ಲಾ ವಲಯಗಳ ಮೇಲೆ ಗಂಭೀರವಾದ ಪರಿಣಾಮವನ್ನ ಬೀರಿತ್ತು, ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಯ ಲೋಕಾಯುಕ್ತ ವರದಿಯನ್ನು ಜಾರಿಗೊಳಿಸಿ ಅಕ್ರಮಗಳನ್ನ ತಡೆಯಬೇಕಾಗಿದ್ದಂತಹ ಅಧಿಕಾರಿಗಳು-ಸರ್ಕಾರದ ಸಚಿವರುಗಳು ಅಕ್ರಮ ಗಣಿಗಾರಿಕೆಗಳಲ್ಲಿ ತೊಡಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದರು.

ನೈಸರ್ಗಿಕ ಸಂಪನ್ಮೂಲಗಳ ಲೂಟಿಯನ್ನು ತಡೆಯಲು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕರಾದಂತಹ ಶ್ರೀ ಎಸ್ ಆರ್ ಹಿರೇಮಠ್ ರವರು ಸುಪ್ರೀಂಕೋರ್ಟನ್ಲಲಿ ಲೋಕಾಯುಕ್ತ ವರದಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವುದರ ಮೂಲಕ ಬಳ್ಳಾರಿ,ಚಿತ್ರದುರ್ಗ,ತುಮಕೂರು ಜಿಲ್ಲೆಗಳಲ್ಲಿ ನಡೆಯುತ್ತಿದಂತಹ ಅಕ್ರಮ ಗಣಿ ಗಾರಿಕೆ ಮಟ್ಟಹಾಕುವಲ್ಲಿ ಯಶಸ್ವಿಯಾಗುವುದರ ಜೊತೆಗೆ ಅಕ್ರಮ ಗಣಿಗಾರಿಕೆಯ ಗಣಿ ಧೂಳಿನ ಹೊಡೆತಕ್ಕೆ ಸಿಲುಕಿ ಕೃಷಿ,ಪರಿಸರ,ಅರಣ್ಯ,ಆರೋಗ್ಯ,ನೀರಿನ ಮೂಲಗಳು ಸೇರಿದಂತೆ ಎಲ್ಲಾ ವಲಯಗಳ ಮೇಲೆ ಆದ ದುಷ್ಪಪರಿಣಾಮಗಳನ್ನು ಪುನಶ್ಚೇತನಗೊಳಿಸಲು ಸಾಗರಧಾರ ಮತ್ತವರ ವಿಜ್ಞಾನಿಗಳ ತಂಡವು ನೀಡಿದ ಅಂಶಗಳನ್ನು ಸುಪ್ರೀಂಕೋರ್ಟಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಫಲವಾಗಿಯೇ ಇಂದು ಗಣಿಭಾದಿತ ಪ್ರದೇಶಕ್ಕೆ ವಿಶೇಷವಾದ ಪ್ಯಾಕೇಜ್‍ನಲ್ಲಿ 18000 ಸಾವಿರ ಕೋಟಿಗೂ ಹೆಚ್ಚು ಹಣ ಜಮಾವಣೆಯಾಗಿದೆ ಹೊರತು ರಾಜ್ಯ ಸರ್ಕಾರದ ಕಾಳಜಿಯಿಂದ ಅಲ್ಲ.

ಅಕ್ರಮ ಗಣಿ ಗಾರಿಕೆಯಿಂದ ಸಾರ್ಕರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ಸೋರಿಕೆಯಾಗುವುದನ್ನು ತಪ್ಪಿಸಿ ಬೊಕ್ಕಸಕ್ಕೆ ಜಮೆಯಾಗುವಲ್ಲಿ ಸಮಾಜ ಪರಿವರ್ತನಾ ಸಮುದಾಯದ ಶ್ರೀ ಎಸ್ ಆರ್ ಹಿರೇಮಠ್ ರವರ ಪರಿಶ್ರಮದಿಂದಾಗಿದೆ

ಸಮಾಜ ಪರಿವರ್ತನಾ ಸಮುದಾಯ, ಜನ ಸಂಗ್ರಾಮ ಪರಿಷತ್, ಗಣ ಭಾದಿತ ಪ್ರದೇಶದ ಜನರ ಅಭಿವೃದ್ದಿ ಸಮಿತಿಯಿಂದ ಗಣ ಭಾದಿತ ಪ್ರದೇಶದ ಜನರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಿ ಜೀವನ ನಡೆಸುವಂತಹ ಸಮುದಾಯದ ಅಪೇಕ್ಷೆಯುಳ್ಳ ಯೋಜನೆಗಳನ್ನು ರೂಪಿಸುವಲ್ಲಿ ಕಾರ್ಯನಿರತರಾದ್ದು 18000 ಸಾವಿರ ಕೋಟಿಯ ಹಣದ ಬಳಕೆಯ ಬಗ್ಗೆ ಕಣ್ಗಾವಲಾಗಿ ಕಾರ್ಯನಿರ್ವಹಿಸಲಿದೆ.

ಗಣಿ ಭಾದಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಮೀಸಲಿಟ್ಟಿರುವುದು ಅದಿರು ಮಾರಾಟವಾಗುವ ಮೊತ್ತದಲ್ಲಿನ 10% ರಷ್ಟು ಕೆ.ಇ.ಎಂ.ಆರ್.ಸಿ ಗೆ ಜಮೆ ಆಗುತ್ತದೆಯೆ ವಿನಃ ರಾಜಸ್ವ ಧನದಿಂದ (ರಾಯಲ್ಟಿ) ಅಲ್ಲ, ರಾಜ್ಯದ ಜವಾಬ್ದಾರಿಯುತ ಮಂತ್ರಿಯಾಗಿರುವ ಮುರುಗೇಶ್ ನಿರಾಣಿ ಯವರು ಅಧಿಕಾರಿಗಳಿಂದ ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ಹೇಳಿಕೆಯನ್ನು ನೀಡಬೇಕು. ಈಗ ಗಣಿ ಮಂತ್ರಿಗಳಿಗಾಗಲಿ ಜಿಲ್ಲಾ ಉಸ್ತುವಾರಿ ಸಚಿವರುಗಳಿಗಾಗಲಿ ಗಣಿಗಾರಿಕೆಯಿಂದ ಭಾದೆಗೊಳಗಾಗಿರುವ ಕೃಷಿ, ಪರಿಸರ, ಅರಣ್ಯ, ಆರೋಗ್ಯ,ನೀರಿನ ಮೂಲಗಳು ಸೇರಿದಂತೆ ಎಲ್ಲಾ ವಲಯಗಳ ಮೇಲೆ ಆದ ದುಷ್ಪಪರಿಣಾಮಗಳಿಗೆ ಶಾಶ್ವತವಾಗಿ ಪುನಶ್ಚೇತನಗೊಳಿಸುವ ಯೋಜನೆಗಳ ಆಲೋಚನೆಗಳಿಲ್ಲ. ಇವರ ದೃಷ್ಟಿ ಕೇವಲ 18000 ಕೋಟಿಯ ಹಣವನ್ನು ಗುತ್ತಿಗೆದಾರರಿಗೆ/ಗಣ ಗುತ್ತಿಗೆದಾರರಿಗೆ/ಉದ್ದಿಮೆದಾರರಿಗೆ ಅನುಕೂಲವಾಗುವಂತಹ ಯೋಜನೆಗಳನ್ನ ರೂಪಿಸಿ ತಮಗೆ ಆದಾಯವಾಗುವಂತಹ ಯೋಜನೆಗಳನ್ನ ರೂಪಿಸಲು ಆಸಕ್ತಿ ತೋರುತ್ತಿದ್ದಾರೆ. ಇನ್ನಾದರು ಮುರುಗೇಶ್ ನಿರಾಣಿ ಸೇರಿದಂತೆ ರಾಜ್ಯ ಸರ್ಕಾರದ ಸಚಿವರುಗಳು, ವಿವಿಧ ಇಲಾಖೆಗಳು ಗಣಿ ಭಾದಿತ ಜನರ ಆಶೋತ್ತರಗಳನ್ನು ಪರಿಗಣ ಸಿ ರೂಪಿಸುವ ಯೋಜನೆಗಳಲ್ಲಿ ಸಮಾಜ ಪರಿವರ್ತನಾ ಸಮುದಾಯ, ಜನ ಸಂಗ್ರಾಮ ಪರಿಷತ್, ಗಣ ಭಾದಿತ ಪ್ರದೇಶದ ಜನರ ಅಭಿವೃದ್ದಿ ಸಮಿತಿಯ ಸಲಹೆಗಳನ್ನು ಪರಿಗಣಿಸಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪ್ರಯತ್ನಿಸಬೇಕೆಂದು
ಟಿ.ಎಂ.ಶಿವಕುಮಾರ್ ,
ಶ್ರೀಶೈಲ ಆಲ್ದಳ್ಳಿ ,
ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಈರಣ್ಣ ಮೂಲಿಮನಿ ಅವರುಗಳು ಆಗ್ರಹಿಸಿದ್ದಾರೆ

LEAVE A REPLY

Please enter your comment!
Please enter your name here