ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ಕೂಡ್ಲಿಗಿ ವತಿಯಿಂದ ತಹಶೀಲ್ದಾರ ಎಸ್. ಮಹಾಬಲೇಶ್ವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

0
94

ಕೂಡ್ಲಿಗಿ: ಪಟ್ಟಣದ ತಾಲೂಕು ಆಡಳಿತ ಕಛೇರಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ಕೂಡ್ಲಿಗಿವತಿಯಿಂದ ತಹಶೀಲ್ದಾರ ಎಸ್. ಮಹಾಬಲೇಶ್ವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತು ತಲ್ಲಗೊಂಡು ಜನ ಜೀವನ ಅಸಹಜ ಸ್ಥಿತಿಯನ್ನು ಎದುರಿಸಬೇಕಾಯಿತು ಈ ಕಾರಣಕ್ಕೆ ಶೈಕ್ಷಣ ಕ ಚಟುವಟಿಕೆಗಗಳು ನಿಂತಿದ್ದವು. ಇತ್ತಿಚ್ಚಿಗೆ ಶಾಲಾ ಕಾಲೇಜುಗಳು ಆರಂಭವಾಗಿ ಮತ್ತೆ ಪುನ: ಶೈಕ್ಷಣ ಕ ಸ್ಥಿತಿಗತಿಗಳು ಸಹಜ ಸ್ಥಿತಿಗೆ ಮರಳುತ್ತಿವೆ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಬೇಕೆಂದು ಕೂಡ್ಲಿಗಿ ತಾಲೂಕು ಎಬಿವಿಪಿ ಆಗ್ರಹಿಸುತ್ತದೆ ಎಂದರು.

ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿದಾಗ ಮಾತ್ರ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಹಾಗೂಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುವುದು ನಮ್ಮ ಆಶಯವಾಗಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ ಸರ್ಕಾರವು ನೀಡುತ್ತಿದ್ದ ಈಗಾಗಲೇ ಕೆಲ ವಿದ್ಯಾರ್ಥಿ ವೇತನಗಳು ವಿದ್ಯಾರ್ಥಿಗಳಿಗೆ ಕೊರೊನಾದ ಈ ಕಷ್ಟ ಕಾಲದಲ್ಲಿ ತಲುಪದಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಒಂದು ಕಡೆ ಮನೆಯಲ್ಲಿ ಕಷ್ಟದ ವಾತಾವಾರಣ ತಾಂಡವಾಡುತ್ತಿದ್ದು, ಇನ್ನೋಂದೆಡೆ ವಸತಿ ನಿಲಯಗಳು ತೆರೆಯದೆ ಇರುವುದು ಮತ್ತು ವಿದ್ಯಾರ್ಥಿ ವೇತನ ದೊರೆಯದೆ ಇರುವುದರಿಂದ ವಿದ್ಯಾಥಿಗಳು ಕಂಗಾಲಾಗಿದ್ದಾರೆ. ಈ ಕೂಡಲೇ ತಕ್ಷಣ ಸರ್ಕಾರ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತವನ್ನು ಮಂಜೂರು ಮಾಡಬೇಕೆಂದು ತಿಳಿಸಿದರು.

ವಸತಿನಿಲಯಗಳನ್ನು ಪ್ರಾರಂಭ ಮಾಡಿ: ಅನೇಕ ತಿಂಗಳುಗಳ ಬಳಿಕ ಕಾಲೇಜುಗಳು ಪ್ರಾರಂಭವಾದರು ವಿದ್ಯಾರ್ಥಿಗಳು ಮಾತ್ರ ಹಳ್ಳಿಗಳಿಂದ ದಿನಾಲು ಬಸ್ಸ್ ಪಾಸ ಇಲ್ಲದೆ ಹಣವನ್ನು ಬಸ್ ಟಿಕೆಟ್‍ಗಾಗಿ ನೀಡಬೆಕು ಬಡ ವಿದ್ಯಾರ್ಥಿಗಳು ಹಣ ಜೋಡಿಸಿಕೊಂಡು ದಿನಾಲು ಕೊಡುವುದಕ್ಕೆ ಆಗುತ್ತಿಲ್ಲ ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಕಾಲೇಜುಗೆ ಕಳುಹಿಸದೆ ಹಿಂಜರಿಕೆ ಮಾಡುತ್ತಿದ್ದಾರೆ.ಮಕ್ಕಳ ಹಾಳುಗುತ್ತವೆ ಆದ ಕಾರಣ ವಸತಿ ನಿಲಯಗಳು ಆರಂಭಿಸಬೇಕೆಂದು ಒತ್ತಾಸೆಯಾಗಿದೆ.
ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಕಲ್ಪಿಸಿ ಅನೆಕ ಕಾಲೇಜುಗಳಲ್ಲಿ ಹಲವು ವಿಷಯಗಳಿಗೆ ಖಾಯಂ ಉಪನ್ಯಾಸಕರು ಇರುವುದಿಲ್ಲ ಅಂತಹ ವಿಷಯಕ್ಕೆ ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಿಸಿ ಎಂದು ತಹಶೀಲ್ದಾರ ಎಸ್.ಮಹಬಲೇಶ್ವರವರಿಗೆ ಮನವಿ ಪತ್ರದ ಮೂಲಕ ಬೇಡಿಕೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹನುಮಂತು, ಪ್ರಮುಖ ವಿನಾಯಕ,ಕಾರ್ಯದರ್ಶಿ ವಿರೂಪಾಕ್ಷಿ, ಶ್ರೀನಿವಾಸ್, ಟಿ.ವಿಜೆಯಕುಮಾರ, ಕರಿಬಸಪ್ಪ, ಅಂಜಿನಿ ತಿಪ್ಪೆಸ್ವಾಮಿ ಉಮೇಶ ಇದ್ದರು.

LEAVE A REPLY

Please enter your comment!
Please enter your name here