ಶ್ರದ್ಧೆ, ಭಕ್ತಿಗಳೊಂದಿಗೆ ಜರುಗಿದ ಮೊಹರಂ ಹಬ್ಬ

0
318

ಕೊಟ್ಟೂರು:ಆಗಸ್ಟ್:10:-ಹಿಂದೂ ಮುಸ್ಲೀಂ ಬಾಂಧತೆಯ ಐಕ್ಯತೆ ಬಿಂಬಿಸುವ ಹಬ್ಬವೆಂದೇ ಹೆಸರಾಗಿರುವ ಮೊಹರಂ ಹಬ್ಬ ಪಟ್ಟಣದಲ್ಲಿ ಮಂಗಳವಾರ ಸಂಜೆ ಭಕ್ತರ ವಿವಿಧ ಬಗೆಯ ಕುಣಿತ ಸಂಭ್ರಮಗಳಿಂದ ತೆರೆ ಕಂಡಿತು ಹತ್ತು ದಿನಗಳಿಂದ ನಡೆಯುತ್ತಿದ್ದ ಈ ಹಬ್ಬದಲ್ಲಿ ಮುಸ್ಲೀಂರಿಗಿಂತ ಹಿಂದೂಗಳೇ ಹೆಚ್ಚಾಗಿ ಈ ಹಬ್ಬವನ್ನು ಆಚರಿಸುತ್ತ ಬಂದರು.

ಇದರ ಅಂಗವಾಗಿ ಪಟ್ಟಣದ 5 ಕಡೆ ಪಿರಲ ದೇವರ ಮೂರ್ತಿಗಳನ್ನು ಕುಳ್ಳಿರಿಸಿ ಹಲವು ಬಗೆಯ ಕಾಣಿಕೆಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು.

10ನೇ ದಿನವಾದ ಮಂಗಳವಾರದಂದು ಪಿರಲ ದೇವರ ಮೇರವಣಿಗೆ ಪಟ್ಟಣದ ರೇಣುಕ ಚಿತ್ರ ಮಂದಿರ ರಸ್ತೆಗುಂಟಾ ಸಾಗಿ ಗಾಂಧಿವೃತ್ತ ಕೊಟ್ಟೂರೇಶ್ವರ ದೇವಸ್ಥಾನ ರಸ್ತೆಗುಂಟಾ ಮುಂದೆ ಸಾಗಿತು. ಪೀರಲ ದೇವರ ಮೂರ್ತಿಗಳನ್ನು ಹಿಡಿದ ಮುಸ್ಲೀಂರು ಆಗಮಿಸುತ್ತಿದ್ದಂತೆ ರಸ್ತೆಗುಂಟಾ ಹೆಣ್ಣು ಗಂಡು ಎಂಬ ಬೇದವಿಲ್ಲದೆ ರಸ್ತೆಯುದ್ದಕ್ಕೂ ಮಲಗಿ ಭಕ್ತಿ ಸಮರ್ಪಿಸಿದರು. ಪೀರಲ ದೇವರ ಮೂರ್ತಿಗಳು ತಮ್ಮನ್ನು ಹೋದರೆ ನಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿ ಈ ಬಗೆಯಲ್ಲಿ ಭಕ್ತರು ಸೇವೆ ಸಲ್ಲಿಸಿದರು.

ಮೇರವಣಿಗೆ ಸಾಗುತ್ತಿದ್ದಂತೆ ಹಲಗೆಗಳನ್ನು ಬಾರಿಸುತ್ತ ಯುವಕರು ಕುಣಿದಾಡಿ, ನರ್ತಿಸುತ್ತಾ ಸಾಗಿದರು. ಇದಕ್ಕೂ ಮೊದಲು ಸೋಮವಾರ ರಾತ್ರಿ ಕತ್ತಲ ರಾತ್ರಿ ಹಬ್ಬ ನಡೆಯಿತು. ರಾತ್ರಿಯಿಡೀ ಭಕ್ತರು ಪೀರಲ ದೇವರ ಕುರಿಸಿರುವ ಸ್ಥಳದ ಮುಂದುಗಡೆ ಜಮಾಯಿಸಿ ಸಕ್ಕರೆ, ಉಪ್ಪು ಮತ್ತಿತರಗಳನ್ನು ಎಡೆ ರೂಪವಾಗಿ ಸಮರ್ಪಿಸಿದರಲ್ಲದೇ ಸ್ಥಳದ ಮುಂಭಾಗದಲ್ಲಿ ಹಾಕಿದ್ದ ಆಲೈ ಕುಂಡದ ಬೆಂಕಿಗೆ ಕಟ್ಟಿಗೆಗಳನ್ನು ಹಾಕಿ ನಮಿಸಿದರು.
ಪೀರಲ ದೇವರನ್ನು ಸಂತೃಪ್ತಿಗೊಳಿಸಲು ಕೆಲ ಭಕ್ತರು ಹುಲಿ ವೇಷ ಧರಿಸಿ ಕುಣಿದು ಹರಕೆ ತಿರಿಸಿದರು. ಮೆರವಣಿಗೆ ಗಚ್ಚಿನಮಠ ರಸ್ತೆಗುಂಟಾ ಸಾಗಿ ಕೇಳಗೇರಿ ಮೂಲಕ ಕೆರೆಗೆ ತೆರಳಿ ಅಲ್ಲಿ ದೇವರಗಳನ್ನು ವಿಸರ್ಜಿಸಿದ ಪೀರಲ ದೇವರುಗಳ ಪೂಜಾ ಕರ್ತರು ನಂತರ ರಾತ್ರಿ ಅವುಗಳ ಪೆಟ್ಟಿಗೆಗಳಲ್ಲಿ ಹೊತ್ತು ತಂದು ಹಾಡುಗಳನ್ನು ಹಾಡುತ್ತ ಮಸೀದಿಗಳಿಗೆ ತೆರಳಿದರು.

ಒಟ್ಟಾರೆ ಮೊಹರಂ ಹಬ್ಬದುದ್ದಕ್ಕೂ ಯಾವುದೇ ಬಗೆಯ ಗಲಾಟೆ, ಗದ್ದಲುಗಳು ಆಗದೇ ಶಾಂತಿಯುತವಾಗಿ ನೆರೆವೇರಿತು. ಮೆರವಣಿಗೆಯುದ್ದಕ್ಕೂ ಪೊಲೀಸರು ಸಂಚರಿಸಿ ಕಾವಲಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here