ಮೋಕ ಸಮುದಾಯ ಆರೊಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ವೀರನಾರಿಯರ ಹಾದಿಯಲ್ಲಿ ಸಾಗಲು ಕರೆ

0
100

ಬಳ್ಳಾರಿ,ಜ.25 : ದೇಶದ ವೀರನಾರಿಯರ ಸಾಹಸದ ಕಥೆಗಳು ನಮ್ಮ ಮುಂದಿದ್ದು, ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದರ ಮೂಲಕ ಅವರ ಇತಿಹಾಸವನ್ನು ಅರಿಯಬೇಕು ಮತ್ತು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದು ಅವುಗಳನ್ನು ಅರಿಯಬೇತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೇ ಮೋಕಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಭಾರತಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮೋಕಾ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಮೋಕಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮಮದಲ್ಲಿ ಅವರು ಮಾತನಾಡಿದರು.
ಮುಂದಿನ ಜೀವನದಲ್ಲಿ ನಾವು ಏನಾದರು ಸಾಧನೆ ಮಾಡಬೇಕಾದರೆ ನಮ್ಮ ದೇಶದಲ್ಲಿ ಸಾಕಷ್ಟು ವೀರನಾರಿಯರ ಉದಾಹರಣೆಗಳು ಇವೆ. ಅವರ ಹಾದಿಯಲ್ಲಿ ಮಕ್ಕಳು ತಮ್ಮ ಗುರಿಯನ್ನು ತಲುಪಬೇಕು ಎಂದು ಹೇಳಿದ ಅವರು ತಮಗೆ ಶಾಲೆಯಲ್ಲಿ ಅಥವಾ ಏನಾದರೂ ತೊಂದರೆ ಕಂಡುಬಂದಲ್ಲಿ ಪಾಲಕರ ಹತ್ತಿರ ಚರ್ಚೆ ಮಾಡಲು ತಿಳಿಸಿದರು.
ಎಲ್ಲಾ ರಂಗಗಳಲ್ಲಿ ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ;ಒಳ್ಳೆ ಯೋಚನೆಗಳ ಜೊತೆ ಶಿಕ್ಷಣ ಹಾಗೂ ಗ್ರಂಥಾಲಯ ಪುಸ್ತಕಗಳ ಓದುವ ಹವ್ಯಾಸ ಮಾಡಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಈಶ್ವರ್ ದಾಸಪ್ಪನರ್ ಅವರು ಮಾತನಾಡಿ, ಹೆಣ್ಣು ಮಕ್ಕಳ ದಿನಾಚರಣೆಯ ಜನವರಿ 24, 2015 ರಲ್ಲಿ ಜಾರಿಗೆ ಬಂದಿತು. 2014-15ರಲ್ಲಿ ಲಿಂಗಾನುಪಾತವು 1 ಸಾವಿರಕ್ಕೆ 918 ಇದ್ದಿತು;ಅದನ್ನು ಸರಿದೂಗಿಸಲು ಸರಕಾರ 2015ರಲ್ಲಿ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಸಾಕಷ್ಟು ಹೆಣ್ಣುಮಕ್ಕಳ ಬಗ್ಗೆ ಯೋಜನೆಗಳನ್ನು ಜಾರಿಗೆ ತಂದಿತು. ಭೇಟಿ ಬಚಾವ್ ಭೇಟಿ ಪಡಾವ್ ಹಾಗು ಭಾಗ್ಯ ಲಕ್ಷ್ಮೀ ಯೋಜನೆ. ಹಾಗು ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಇತರೆ ಅನೇಕ ಯೋಜನೆಗಳನ್ನು ಜಾರಿಗೆ ಬಂದಿವೆ ಎಂದರು.
ಮೋಕ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ನಿರೂಪಿಸಿದರು. ಪಾವನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಒಐಊP ನಾಗವೇಣಿ ಹಾಗು ಶುಶೃಷಣ ಅಧಿಕಾರಿಗಳಾದ ಬಸಮ್ಮ ಹಾಗು ಪ್ರಶಾಂತಿ, ಆಶಾ ಮೆಂಟರ್ ಪಾವನಿ ಹಾಗು ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯವರಾದ ಲಿಂಗಣ್ಣ, ಶ್ರೀಧರ್ ಇದ್ದರು.

LEAVE A REPLY

Please enter your comment!
Please enter your name here