23ನೇ ವಿಶ್ವ ದೃಷ್ಟಿ ದಿನ ಆಚರಣೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ: ಡಿಎಚ್‍ಒ ಡಾ.ಜನಾರ್ಧನ

0
103

ಬಳ್ಳಾರಿ,13 : ಪ್ರತಿಯೊಬ್ಬರು ತಮ್ಮ 40ವóರ್ಷ ವಯಸ್ಸಿನ ನಂತರ ತಪ್ಪದೇ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ದೃಷ್ಟಿದೋಷ, ಕಣ್ಣಿನ ಪೋರೆ, ಗ್ಲಾಕೋಮಾ ಹಾಗೂ ಇತರ ಸಾಮಾನ್ಯ ಕಣ್ಣಿನ ತೊಂದರೆಗಳನ್ನು ಗುರುತಿಸಿಕೊಂಡು ಕಣ್ಣಿನ ಸಂಭಾವ್ಯ ತೊಂದರೆಗಳನ್ನು ನಿವಾರಿಸಿ ಬಹುದಿನಗಳವರೆಗೆ ಕಣ್ಣಿನ ದೋಷವಿಲ್ಲದಂತೆ ರಕ್ಷಣೆ ಮಾಡಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ ತಿಳಿಸಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮದ ಅಡಿಯಲ್ಲಿ “ನಿಮ್ಮ ಕಣ್ಣುಗಳನ್ನು ಪ್ರೀತಿಸಿ” ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ 23ನೇ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾಡಳಿತ ವತಿಯಿಂದ ಸಿಎಸ್‍ಆರ್ ಅನುದಾನದ ಮೂಲಕ ಅಂಧತ್ವ ಮುಕ್ತ ಬಳ್ಳಾರಿ ಅಭಿಯಾನ ನಡೆಯುತ್ತಿದ್ದು, ಈಗಾಗಲೇ 650000 ಜನರ ತಪಾಸಣೆ ಮಾಡಲಾಗಿದ್ದು, 2038 ಜನರ ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು 15421 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ವ್ಯಕ್ತಿಯ ಮರಣದ ನಂತರ ನೇತ್ರದಾನವನ್ನು ಮಾಡಲು ಅವಕಾಶವಿದ್ದು, ರಾಜ್ಯ ಸರಕಾರವು ಆರಂಭಿಸಿರುವ ಅಭಿಯಾನದಲ್ಲಿ ಭಾಗವಹಿಸಿ jeevasarthakathe.Karnataka.gov.in ವೆಬ್‍ಸೈಟ್ ಮೂಲಕ ನೊಂದಣಿ ಮಾಡಿಸಬಹುದು ಎಂದು ಹೇಳಿದ ಡಾ.ಜರ್ನಾಧನ ಅವರು, ವಿಮ್ಸ್ ನಲ್ಲಿ ನೇತ್ರದಾನ ಮಾಡಿದ ಕಣ್ಣುಗಳನ್ನು ಸಂರಕ್ಷಿಸಿ ಇಡುವ ವ್ಯವಸ್ಥೆಯಿದ್ದು ನೇತ್ರ ಜೋಡಣೆಯ ಅವಶ್ಯಕತೆ ಇರುವವರಿಗೆ ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮ ಅಧಿಕಾರಿ ಡಾ.ವಿರೇಂದ್ರಕುಮಾರ ಅವರು ಮಾತನಾಡಿ, ಕಣ್ಣಿನ ತೊಂದರೆಗಳಲ್ಲಿ ಡಯಾಬಿಟಿಕ್, ರೆಟಿನೋಪತಿ ಮತ್ತು ಗ್ಲಾಕೋಮಾದಂತಹ ಖಾಯಿಲೆಗಳು ಗೊತ್ತಾಗದೇ ಕಣ್ಣಿನ ದೃಷ್ಟಿಯನ್ನು ಹಾನಿ ಮಾಡಬಹುದು. ಆದ್ದರಿಂದ ನಿರಂತರ ಕಣ್ಣಿನ ಪರೀಕ್ಷೆಯನ್ನು ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನೇತ್ರ ತಜ್ಞರಾದ ಡಾ.ಆಂಜನೇಯ ಪ್ರಸಾದ್ ಹಾಗೂ ಡಾ.ರೋಹಿಣಿ ಚಾಳೆಕಾರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್ ದಾಸಪ್ಪನವರ, ಸಹಾಯಕ ವ್ಯವಸ್ಥಾಪಕ ಗಂಗಾಧರ, ನೇತ್ರಾಧಿಕಾರಿ ಮಂಜುನಾಥ ಚಂದ್ರಶೇಖರ, ಈಶ್ವರಪ್ಪ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here