ಬಳ್ಳಾರಿ/ಹೊಸಪೇಟೆ, ಜ.25 : ಹೊಸಪೇಟೆಯ ಡಾನ್ ಬೋಸ್ಕೊ ಸಂಸ್ಥೆ ಯಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಪ್ರಯುಕ್ತ ಭಾನುವಾರ ಮಕ್ಕಳೊಂದಿಗೆ ಕೇಕ್ ಕಟ್ಟು ಮಾಡಿ ಹೆಣ್ಣು ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮ ಪ್ರಯುಕ್ತ ಮಕ್ಕಳಿಗೆ ಡ್ಯಾನ್ಸ್ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದ ತಂಡಗಳಿಗೆ ಬಹುಮಾನ ನೀಡಿ ಪೆÇ್ರೀತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೊ ಶಾಲೆಯ ಮುಖ್ಯಗುರುಗಳು ಫಾದರ್ ಪ್ರವೀಣ್, ಗ್ರಾಮೀಣ ಬಾಲಕಿಯರ ವಸತಿನಿಲಯದ ಮೇಲ್ವಿಚಾರಕಿ ಸಿಸ್ಟರ್ ಸೆಲಿನಾರೋಸ್ ಹಾಗೂ ಸಿಸ್ಟರ್ ಮರ್ಲಿನ್, ಚೈಲ್ಡ್ ಲ್ಯೆನ್ ಸಂಯೋಜಕ ಚಿದಾನಂದ ಹಾಗೂ ಸಿಬ್ಬಂದಿಗಳಾದ ನೇತ್ರ, ಸ್ವಾಮಿ ಹಾಗೂ ಸಂತೋಷ ಇದ್ದರು.
ಈ ಕಾರ್ಯಕ್ರಮ ದಲ್ಲಿ ಒಟ್ಟು 85ಮಕ್ಕಳು ಮತ್ತು 15ವಯಸ್ಕರು ಭಾಗವಹಿಸಿದ್ದರು.