ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಜಿಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ

0
69

ಶಿವಮೊಗ್ಗ ಸೆಪ್ಟೆಂಬರ್ 01:
ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಗಸ್ಟ್ 26 ರಿಂದ 28 ರವರೆಗೆ ನಡೆಸಲಾದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡಿರುತ್ತಾರೆ.

ಆಕಾಶ್ ಎಸ್ ಗೊಲ್ಲರ್, 20 ವರ್ಷ ಇವರು 800 ಮೀ ಪ್ರಥಮ ಸ್ಥಾನ, 400 ಮೀ ದ್ವಿತೀಯ ಸ್ಥಾನ ಪಡೆದಿದ್ದು 1:52:07 ನಿಮಿಷದಲ್ಲಿ ಓಟವನ್ನು ಪೂರ್ಣಗೊಳಿಸಿ 5 ವರ್ಷದ ಹಿಂದಿನ ದಾಖಲೆಯನ್ನು ಮುರಿದಿರುತ್ತಾರೆ. ಗೌತಮಿ ಗೌಡ, 16 ವರ್ಷ ಇವರು ಎತ್ತರ ಜಿಗಿತ, 1.65 ಸೆಂ.ಮೀ ಎತ್ತರ ಜಿಗಿದು 19 ವರ್ಷ ಹಿಂದಿನ ದಾಖಲೆಯನ್ನು ಮುರಿದಿರುತ್ತಾರೆ.

ಶಿವಮೊಗ್ಗ ಜಿಲ್ಲಾ ಕ್ರೀಡಾಶಾಲೆ/ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿರುವ ನಿತಿನ್ ಜಿ ಸಿಂಗ್, 14 ವರ್ಷ ಇವರು ಉದ್ದಜಿಗಿತ, ಪ್ರಥಮ ಸ್ಥಾನ, ಗೌರಾಂಗಿ ಗೌಡ 16 ವರ್ಷ, ಇವರು 80 ಹರ್ಡಲ್ಸ್ ದ್ವಿತೀಯ ಸ್ಥಾನ, ಮೊಹಮ್ಮದ್ ಮುಜಾಮಿಲ್, 20 ವರ್ಷ ಇವರು ಉದ್ದ ಜಿಗಿತ, ದ್ವಿತೀಯ ಸ್ಥಾನ ಪಡೆದು ಈ ಕ್ರೀಡಾಪಟುಗಳು ಆಂಧ್ರಪ್ರದೇಶ ರಾಜ್ಯದ ಗುಂಟೂರುನಲ್ಲಿ ನಡೆಯುವ 33ನೇ ಸೌತ್ ಜೋನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.

ಈ ಕ್ರೀಡಾಪಟುಗಳು ಬಾಳಪ್ಪ ಮಾನೆ, ಅಥ್ಲೆಟಿಕ್ಸ್ ತರಬೇತುದಾರರು ಇವರ ಬಳಿ ದೈನಂದಿನ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಪ್ರತಿಭಾವಂತ ಕ್ರೀಡಾಪಟುಗಳಿಗೆ ಶಿವಮೊಗ್ಗ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಉದಯ ಕುಮಾರ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ.ಎಂ.ಟಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here