ಫ್ಯಾಮಿಲಿ ಪ್ಲ್ಯಾನಿಂಗ್ ಸಂಸ್ಥೆಯಲ್ಲಿ ಸಾಮಾನ್ಯ ಹಾಗೂ ಗೃಹ ಆಧಾರಿತ ಸಹಾಯಕ ತರಬೇತಿ ಪ್ರಾರಂಭ

0
100

ಧಾರವಾಡ. ಜ.27: ಇಲ್ಲಿನ ವಿಕಾಶ ನಗರದಲ್ಲಿರುವ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಅರೆವೈದ್ಯಕೀಯ ಸೇವೆಗಳಾಗಿರುವ ಸಾಮಾನ್ಯ ಹಾಗೂ ಗೃಹ ಆಧಾರಿತ ಸಹಾಯಕ ತರಬೇತಿಯನ್ನು ಎಚ್.ಡಿ.ಬಿ. ಆರ್ಥಿಕ ನೇರವಿನಿಂದ ಪ್ರಾರಂಭಿಸಲಾಗಿದೆ ಎಂದು ಎಫ್.ಪಿ.ಎ.ಐ ಸಂಸ್ಥೆಯ ಅಧ್ಯಕ್ಷರಾದ ಡಾ.ರತ್ನಾಮಾಲಾ ಎಂ. ದೇಸಾಯಿ ಹೇಳಿದರು.

ಇಂದು ಮಧ್ಯಾಹ್ನ ಪೊಲೀಸ್ ಹೆಡ್‍ಕ್ವಾಟರ್ಸ್ ರಸ್ತೆಯ ವಿಕಾಸ ನಗರದಲ್ಲಿರುವ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ ಶಾಖೆಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆಯಲ್ಲಿ ಈ ವರ್ಷ ಸಾಮಾನ್ಯ ಗೃಹ ಆಧಾರಿತ ಆರೈಕೆ ಸಹಾಯಕ ತರಬೇತಿಯನ್ನು ಪ್ರಾರಂಭಿಸಲಾಗಿದ್ದು. ಇದು ಯುವಜನರಿಗೆ ಉದ್ಯೋಗ ಅವಕಾಶ ಹೆಚ್ಚಿಸಲು ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಉದ್ದೇಶ ಹೊಂದಿದೆ.

2022 ರ ವೇಳಗೆ 5 ಬ್ಯಾಚ್ ಗಳಲ್ಲಿ 175 ಯುವಕರು, ಪುರುಷರು ಮತ್ತು ಮಹಿಳೆಯರು ತರಬೇತಿ ಪಡೆಯಲಿದ್ದು. ಶೇ.80ರಷ್ಟು ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗವಕಾಶಗಳನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು. ಈ ತರಬೇತಿಗೆ ಪ್ರವೇಶ ಪಡೆಯಲು ಕನಿಷ್ಟ ಹತ್ತನೇ ತರಗತಿ ವ್ಯಾಸಂಗ ಮಾಡಿರಬೇಕು.

ತರಬೇತಿ ಪಠ್ಯಕ್ರಮದಲ್ಲಿ ಶುಶ್ರೂಷಾ ಕೌಶಲ್ಯ, ರೋಗಿಯ ಆರೈಕೆ, ಸಂವಹನ ಕೌಶಲ್ಯ, ಮಾನವನ ದೇಹ ಮತ್ತು ಅಂಗಗಳು, ಔಷಧೋಪಚಾರ ಇತ್ಯಾದಿ ವಿಷಯಗಳನ್ನು ಹೊಂದಿರುತ್ತದೆ. ತರಬೇತಿ ಶುಲ್ಕ 500/- ರೂ ನಿಗದಿಪಡಿಸಲಾಗಿದ್ದು, 4 ತಿಂಗಳು ಈ ತರಬೇತಿಯನ್ನು ಕನ್ನಡ ಭಾಷೆಯಲ್ಲಿ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ 0836-2447896, 2441796 ಸಂಪರ್ಕಿಸಬಹುದು.

ಎಚ್.ಡಿ.ಬಿ.ಹಣಕಾಸು ಸೇವೆಗಳ ಬೆಂಬಲದೊಂದಿಗೆ ಎಫ್.ಪಿ.ಎ.ಐ ನ 8 ಶಾಖೆಗಳಾದ ಧಾರವಾಡ, ಮಧುರೈ, ಗ್ವಾಲಿಯರ್, ಭೋಪಾಲ್, ಪುಣೆ, ಕೋಲ್ಕತಾ, ಸಿಂಗ್‍ಭೂಮ್ ಮತ್ತು ಯಮುನಾ ನಗರಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶಾಖೆಯ ವ್ಯವಸ್ಥಾಪಕಿ ಸುಜಾತಾ ಎಸ್.ಆನಿಶೆಟ್ಟರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here