ಜೋಗೆಲ್ಲಾಪೂರ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ

0
84

ಧಾರವಾಡ.ಜ.30: ಶಿಶು ಅಭಿವೃದ್ಧಿ ಯೋಜನೆ ಹುಬ್ಬಳ್ಳಿ-ಧಾರವಾಡ(ಶಹರ) ವ್ಯಾಪ್ತಿಯ ಐ.ಆರ್.ಸಿ.ಎಸ್ ವಲಯದ ಜೋಗೆಲ್ಲಾಪೂರ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ನಿನ್ನೆ (ಜ. 29)ರಂದು ಆಚರಿಸಲಾಯಿತು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನನ್ನ ಪೆÇೀಷಣೆ ನನ್ನ ಹಕ್ಕು. ಹೆಣ್ಣು ಮಗುವನ್ನು ಚೆನ್ನಾಗಿ ಓದಿಸಿ ಒಳ್ಳೆಯ ಜೀವನ ಮಟ್ಟವನ್ನು ಸಾಧಿಸಲು ಅವಕಾಶವನ್ನು ಕಲ್ಪಿಸುವುದು ಪ್ರತಿ ಪೆÇೀಷಕರ ಜವಾಬ್ದಾರಿಯಾಗಿರುತ್ತದೆ. ಪ್ರತಿ ಮನೆಯ ಹೆಣ್ಣು ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸಲು ಪ್ರೇರಣೆ ನೀಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕಿ ಭಾರತಿ ಶೆಟ್ಟರ ಮಾತನಾಡಿದ ಅವರು ಹೆಣ್ಣು ಮಕ್ಕಳು ಹುಟ್ಟಿನಿಂದಲೆ ದೈವದತ್ತವಾಗಿ ಬಲಿಷ್ಟರಾಗಿರುತ್ತಾರೆ. ಗಂಡು ಮಗುವಿಗಿಂತ ಹೆಣ್ಣು ಮಕ್ಕಳು ಬಲಿಷ್ಟರೆಂದು ಉದಾರಣೆಗಳ ಮೂಲಕ ಮನದಟ್ಟು ಮಾಡಿದರು.
ಪೆÇೀಷಣ ಅಭಿಯಾನ ಯೋಜನೆಯಡಿ ಗರ್ಭಿಣಿಯರಿಗೆ ಸಿಮಂತ ಕಾರ್ಯಕ್ರಮ, 6 ತಿಂಗಳು ತುಂಬಿದ ಮಗುವಿಗೆ ಅನ್ನಪ್ರಾಶಾನಾ ಹಾಗೂ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್‍ಗಳನ್ನು ವಿತರಣೆ ಮಾಡಲಾಯಿತು.

ಸಮಾರಂಭದಲ್ಲಿ ಜೋಗೆಲ್ಲಾಪೂರ ಗ್ರಾಮದ ಮುಖಂಡರಾದ ಬಿ.ಎನ್ ಪಾಟೀಲ ಉಪಸ್ಥಿತರಿದ್ದರು. ಹುಬ್ಬಳ್ಳಿ-ಧಾರವಾಡ(ಶಹರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಕಮಲವ್ವ ಬೈಲೂರು ಅತಿಥಿಗಳನ್ನು ಸ್ವಾಗತಿಸಿದರು. ಗಂಗಮ್ಮಾ ತುಮಗೇರಿ ಮೇಲ್ವಿಚಾರಕಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಹಾಗೂ ಹಿರಿಯ ಮೇಲ್ವಿಚಾರಕಿ ಪದ್ಮಾ ಕಿಲ್ಲೇದಾರ ಇವರು ವಂದನಾರ್ಪಣೆ ಮಾಡಿದರು

LEAVE A REPLY

Please enter your comment!
Please enter your name here