ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ

0
152

ಬಳ್ಳಾರಿ,ಜ.31:ಜಿಲ್ಲಾಡಳಿತ,ಜಿಪಂ,ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಮೆ|| ಬ್ಲೋಸಂ ಆಸ್ಪತ್ರೆಯ ಸಹಯೋಗದೊಂದಿಗೆ ಬಳ್ಳಾರಿ ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರದ ಹೊರವಲಯದ ಅಂದ್ರಾಳ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರುಗಡೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ದೈಹಿಕ ಪರೀಕ್ಷೆ, ಲಿವರ್ ಕಾರ್ಯ ಪರೀಕ್ಷೆ, ಆಡಿಯೋಮೇಟ್ರಿ ಸ್ಕ್ರೀನ್ ಟೆಸ್ಟ್, ದೃಷ್ಠಿ ತಪಾಸಣೆ ಪರಿಕ್ಷೆ, ಸಿಬಿಸಿ ಪರೀಕ್ಷೆ, ಇಎಸ್‍ಆರ್ ಪರೀಕ್ಷೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷೆ, ಕಿಡ್ನಿ ಕಾರ್ಯ ಪರೀಕ್ಷೆ, ಲಿಪಿಡ್ ಫ್ರೋಪೈಲ್ ಪರೀಕ್ಷೆ, ಮಲೇರಿಯಾ ಪ್ಯಾರಸೈಟ್ ಪರೀಕ್ಷೆ,ಮೂತ್ರ ಪರೀಕ್ಷೆ, ಟಿ3,ಟಿ4 ಮತ್ತು ಟಿಎಸ್‍ಎಚ್, ಸೆರಮ್ ಐರನ್, ಸೆರಮ್ ಮ್ಯಾಗ್ನೇಶಿಯಂ, ಜಿಜಿಟಿಪಿ ಪರೀಕ್ಷೆ, ರಕ್ತದ ಗುಂಪುಪರೀಕ್ಷೆ, ಸಿಆರ್‍ಪಿ ಕ್ವಾಂಟಿಟಿವ್ ಪರೀಕ್ಷೆ , ಸೆರಮ್ ಫೆರಿಟಿನ್ ಪರೀಕ್ಷೆ, ಎಚ್‍ಐವಿ,ಹೆಪಟೈಟಿಸ್ ಬಿ ಮತ್ತು ಸಿ, ವಿಡಿಆರ್‍ಎಲ್, ಕೋವಿಡ್ ಆರ್‍ಟಿಪಿಸಿಆರ್ ಪರೀಕ್ಷೆಗಳು ಸೇರಿದಂತೆ ಇನ್ನೀತರ ಪರೀಕ್ಷೆಗಳನ್ನು ನಡೆಸಲಾಯಿತು.
ಶಿಬಿರದಲ್ಲಿ ಪಾಲ್ಗೊಂಡಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರೆಲ್ಲರಿಗೂ ಉಚಿತ ಆರೋಗ್ಯ ತಪಾಸಣೆಯನ್ನು ನುರಿತ ತಜ್ಞವೈದ್ಯರ ತಂಡ ಮಾಡಿತು. 60ಕ್ಕೂ ಹೆಚ್ಚು ನೋಂದಾಯಿತ ಕಟ್ಟಡ ಕಾರ್ಮಿಕರು ತಪಾಸಣೆ ಮಾಡಿಸಿಕೊಂಡರು.
ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿಗಳಾದ ಕಮಲ್ ಷಾ ಅಲ್ತಾಫ್ ಅಹ್ಮದ್ ಅವರು ಮಾತನಾಡಿ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ರೀತಿಯ ಆರೋಗ್ಯ ತಪಾಸಣೆಗಳನ್ನು ಮೇ ಬ್ಲೋಸಂ ಆಸ್ಪತ್ರೆಯ ಸಹಯೋಗದಲ್ಲಿ ಇಲಾಖೆಯು ಕೈಗೊಂಡಿದ್ದು, ನೋಂದಾಯಿತ ಕಟ್ಟಡ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀನಿವಾಸ್ ಮೋತ್ಕರ್ ಅವರು ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಮೆ|| ಬ್ಲೋಸಂ ಆಸ್ಪತ್ರೆಯ ಮುಖ್ಯಸ್ಥರಾದ ರಾಜೇಶ್,ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿಗಳಾದ ಕಮಲ್ ಷಾ ಅಲ್ತಾಫ್ ಅಹ್ಮದ್, ಮಾರಿಕಾಂಬ ಹುಲಿಕೋಟಿ, ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶ ಮತ್ತಿತರರು ಇದ್ದರು

LEAVE A REPLY

Please enter your comment!
Please enter your name here