ತಿಮ್ಮಲಾಪುರ ಮೊರಾರ್ಜಿ ದೇಸಾಯಿ ವಸತಿ ಪಿಯು ವಿಜ್ಞಾನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಿಶ್ಚಿತ ಗುರಿಯಿರಲಿ;ಸಾಧಿಸುವವರೆಗೆ ವಿಶ್ರಮಿಸದಿರಿ:ಡಿಸಿ ಮಾಲಪಾಟಿ

0
138

ತಿಮ್ಮಲಾಪುರ(ಹೊಸಪೇಟೆ),ಫೆ.20:
ಗುರಿ ಸಾಧಿಸಲೇಬೇಕು ಅಂತ ಅಂದುಕೊಂಡರೇ ಹಾಗೆಯೇ ಆಗ್ತೀರಿ..ಪರಿಪೂರ್ಣ ಯೋಜನೆ,ಬದ್ಧತೆ, ಸಾಧಿಸುವೆಡೆ ಅವಿರಶತ ಶ್ರಮ, ಒಳ್ಳೆಯ ಗುರಿ ಸಾಧಿಸುವ ಕನಸಿರಬೇಕು;ಅದನ್ನು ಸಾಧಿಸುವ ನಿರಂತರ ಶ್ರಮ ಇರಬೇಕು;ಅಂದಾಗ ಖಂಡಿತ ಗುರಿ ಸಾಧಿಸ್ತೀರಿ…ಇದಕ್ಕೆ ನಾನೆ ಉದಾರಣೆ…
ಹೀಗೆಂದು ಹೇಳಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು.
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ನಿಮಿತ್ತ ತಿಮ್ಮಲಾಪುರದಲ್ಲಿ ಗ್ರಾಮವಾಸ್ತವ್ಯಕ್ಕಾಗಿ ಆಗನಿಸಿದ ಹಿನ್ನೆಲೆಯಲ್ಲಿ ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ವಸತಿ ಪಿಯು ವಿಜ್ಞಾನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಸಂವಾದ ನಡೆಸಿದರು.
ಆರಂಭದಲ್ಲಿ ಒಳ್ಳೆಯ ಅಂಕಗಳು, ನಂತರ ಕಡಿಮೆ ಅಂಕಗಳು ಹಾಗೂ ವೈಫಲ್ಯ, ನಂತರ ಗುರಿಯಿಡೆಗೆ ಸಾಧಿಸಲು ನಡೆಸಿದ ಹಾರ್ಡ್ ವರ್ಕ್ ನಿಂದ ದೇಶದಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 53ನೇ ರ್ಯಾಂಕ್ ಬರಲು ಸಾಧ್ಯವಾಯಿತು ಎಂದರು.
ಏನೇ ಸಮಸ್ಯೆ ಬಂದ್ರೂ ಹಂಚಿಕೊಳ್ಳಬೇಕು; ಒಳ್ಳೆಯ
ಸ್ನೇಹಿತರಿರಬೇಕು. ಒಂದೇ ಪರೀಕ್ಷೆಯಲ್ಲಿ ವಿಫಲವಾದ ತಕ್ಷಣ ಎಲ್ಲವೂ ಮುಗಿಯಿತು ಅಂತಲ್ಲ. ಡಿಫ್ರೇಶನ್ ಬಗ್ಗೆ ತಲೆಕಡೆಸಿಕೊಳ್ಳಬೇಡಿ ಎಂದರು.
ನೈತಿಕತೆ ಎನ್ನುವುದು ಯಾವುದು ಸರಿಯಿಲ್ಲ;ಯಾವುದು ಸರಿಯಿದೆ ಎನ್ನುವುದು ತಿಳಿದುಕೊಳ್ಳಬೇಕು.ಭ್ರಷ್ಟಾಚಾರ ಎನ್ನುವುದು ಎಲ್ಲಿಯೂ ಇಲ್ಲ;ಅದು ನಮ್ಮ ಕೈಯಲ್ಲಿಯೇ ಇದೆ.ನಾನು ಕೊಡುವುದಿಲ್ಲ ಅಂತ ಸ್ವಯಂ ನಿರ್ಧಾರ ಮಾಡಿ ಎಂದರು.
ದೇಶ ಬಗ್ಗೆ ಪ್ರೀತಿ ಇದ್ದಾಗ;ನೈತಿಕತೆ ಸರಿಯಾಗಿದ್ದಾಗ ಭ್ರಷ್ಟಾಚಾರ ಎನ್ನುವುದು ತನ್ನಿಂದ ತಾನೇ ಕಡಿಮೆಯಾಗುತ್ತದೆ.
ಗ್ರಾಮಗಳ ಅಭಿವೃದ್ಧಿ ಅನ್ನುವುದು ದಿಢೀರ್ ಮಾಡುವಂತದ್ದಲ್ಲ;ಅದಕ್ಕೂ ಸಮಯಹಿಡಿಯುತ್ತದೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಪ್ರಶ್ನೆ ಕೇಳತಾರಂದರೇ ಶಾಲೆಯಲ್ಲಿ ಅದಿಲ್ಲ;ಇದಿಲ್ಲ ಅಂತ ಕೇಳ್ತಾರೆ ಅಂತ ತಿಳುಕೊಂಡಿದ್ದೆ;ಆದರೇ ತಾವು ಗುರಿಗಳೆಡೆ ಸಾಗಲು ಹಾಗೂ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಶ್ನೆಗಳು ಕೇಳಿರುವುದು ಖುಷಿಯಾಯಿತು ಎಂದರು.
ಅನಂತಪುರ‌ ಜಿಲ್ಲೆಯಲ್ಲಿ ನಮ್ಮ ಊರು ಅತ್ಯಂತ ಹಿಂದುಳಿದಿರುವಂತದ್ದು,1998ರಲ್ಲಿ ನಾನು 8ನೇ ತರಗತಿ ಓದುವಾಗ ಓರ್ವ ಕಲೆಕ್ಟರ್ ಬಂದು ಪರಿಪೂರ್ಣ ಪ್ಲಾನ್ ಮಾಡಿ ಇಡೀ ಎಸ್ಸೆಸ್ಸೆಲ್ಸಿಯ ಪರೀಕ್ಷೆಯ ಫಲಿತಾಂಶ ಬದಲಾಯಿಸಿರುವುದನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಅಪರ ಜಿಲ್ಲಾಧಿಕಾರಿ ‌ಪಿ.ಎಸ್.ಮಂಜುನಾಥ ಅವರು ಮಾತನಾಡಿ ಸಂಸ್ಕ್ರತಿ ಮತ್ತು ಶಿಕ್ಷಣ ಎರಡು ಮುಖ್ಯವಾಗಿವೆ. ಲಿಂಗತಾರತಮ್ಯದ ಕುರಿತು ಪೋಷಕರಿಗೆ ಅರಿವು ಮೂಡಿಸಬೇಕು ಎಂದರು.
ತಾವು ಭವಿಷ್ಯದ ಆಸ್ತಿಗಳು;ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೇರಿದ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕೆ ಶ್ರಮಿಸಿ ಎಂದರು.
ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮಾತನಾಡಿದರು.
ವಿದ್ಯಾರ್ಥಿಗಳು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದರು.
ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ,ತಹಸೀಲ್ದಾರ್ ವಿಶ್ವನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here