ಎಸ್ಸಿ ಎಸ್ಟಿ ಮೀಸಲಾತಿಗೆ ಅಗ್ರಹಿಸಿ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ

0
57

ಹೊಸಪೇಟೆ:ಜುಲೈ:11:- ವಾಲ್ಮೀಕಿ ಶ್ರೀಗಳು ಎಸ್ಸಿ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ಬೀಗಾಜಡಿದು ವಿಜಯನಗರದಲ್ಲಿಯೂ ಪ್ರತಿಭಟಿಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ನಗರದ ಪ್ರಮುಖ ರಸ್ತೆಯಲ್ಲಿ ನಡೆದ ಮೇರವಣಿಗೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಬೀಗಾಜಡಿದು ಮೂಲಕ ತಮ್ಮ ಆಗ್ರಹವನ್ನು ಸರ್ಕಾರಕ್ಕೆ ಅರ್ಪಿಸಿದರು.

ಮೇರವಣಿಗೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಬಂದು ಬೀಗಜಡಿದು ಪ್ರತಿಭಟಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಭೀಮಾನಾಯ್ಕ ಮೀಸಲಾತಿ ಕುರಿತು ನ್ಯಾ. ನಾಗಮೋಹನದಾಸ್ ವರದಿ ಜಾರಿಗೆ ಆಗ್ರಹಿಸಿದರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24ಗಂಟೆಯಲ್ಲಿ ಮಾಡುವುದಾಗಿ ಹೇಳಿ ಇಂದು ಸಮಯ ದೂಡುವ ಕೆಲಸ ಮಾಡುತ್ತಿದೆ ಎಂದರು.

ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸರ್ಕಾರದ ಈ ನೀತಿ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗಿದೆ ಎಂದರು.
ಪಕ್ಷಾತೀತವಾಗಿ ನಡೆಯುತ್ತಿರುವ ಪ್ರತಿಭಟನೆ ಮೀಸಲಾತಿ ದೊರೆಯುವವರೆಗೂ ಮುಂದುವರೆಯಲಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಹೊಸಪೇಟೆ ತಾಲೂಕುಗಳ ಸಮಾಜದ ಮುಖಂಡರು ಪಾಲ್ಗೊಂಡು ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೀರಸ್ವಾಮಿ, ಬಿ.ಎಸ್‌.ಜಂಬಯ್ಯನಾಯಕ, ಎಂ‌ ಜಂಬಯ್ಯನಾಯಕ, ತಾಯಪ್ಪನಾಯಕ, ಡಿ.ವೆಂಕಟರಮಣ, ಪರಶುರಾಮ, ಸೋಮಶೇಖರ್, ಪಿ.ವೆಂಕಟೇಶ, ದುರಗಪ್ಪ ಪೂಜಾರ, ಬದ್ರಿ, ಮರಿಸ್ವಾಮಿ, ಗುಜ್ಜಲ ರಘು, ಗುಜ್ಜಲ ನಾಗರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವರದಿ:- ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here