ಬಾಲಕ ಕಾಣೆ : ಪ್ರಕರಣ ದಾಖಲು

0
100

ಬಳ್ಳಾರಿ/ಹೊಸಪೇಟೆ,ಫೆ.17: ಹೊಸಪೇಟೆಯ ಬಿ.ಟಿ.ಆರ್.ನಗರದ ನಿವಾಸಿಯಾದ ವಿ.ಅಂಜನಿ ಎಂಬ 16 ವರ್ಷದ ಬಾಲಕ ಫೆ.11ರಂದು ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಎ.ಎಸ್.ಐ. ಕೆ.ಷಾಷಾವಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಬಾಲಕನ ಚಹರೆ ಗುರುತು: ಭೋವಿ ಜನಾಂಗ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ ಭಾಷೆಯನ್ನು ಮಾತನಾಡುತ್ತಾನೆ, ಬಲ ಮೊಣಕೈ ಕೆಳಗೆ ಇಂಗ್ಲೀಷನಲ್ಲಿ ಎ.ಎ. ಎಂಬ ಹಚ್ಚೆ ಹಾಕಿಸಿಕೊಂಡಿರುತ್ತಾನೆ, ಕೆಂಪು ಬಣ್ಣದ ಶರ್ಟ್ ಮತ್ತು ಬ್ಲೂ ಕಲರ್ ಜೀನ್ಸ್ ಪ್ಯಾಂಟನ್ನ್ ಧರಿಸಿರುತ್ತಾನೆ.
ಈ ಮೇಲ್ಕಂಡ ಬಾಲಕನ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಹೊಸಪೇಟೆ ಕಂಟ್ರೋಲ್ ರೂಮ್ ಸಂಖ್ಯೆ : 08394-226100, ಪಿ.ಎಸ್.ಐ. ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ. : 08394-228233, ಪಿ.ಐ. ಗ್ರಾಮೀಣ ಪೊಲೀಸ್ ಠಾಣೆ : 9480803075ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here