ಆಲಿಕಲ್ಲು: ಗಾಳಿ ಮಳೆಗೆ ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ತೋಟಗಾರಿಕೆ ಬೆಳೆಗಳು ಹಾನಿ!

0
209

ವಿಜಯನಗರ/ಕೊಟ್ಟೂರು:ತಾಲೂಕಿನಲ್ಲಿ ದಿನಾಂಕ: 08.05.2022 ರಂದು ಸಂಜೆ ಸುರಿದ ಆಲಿಕಲ್ಲು ಗಾಳಿ ಮಳೆಗೆ ನಿಂಬಳಗೇರಿ, ಮಂಗಾಪುರ, ಹಿರೇವಡೇರಹಳ್ಳಿ, ಯರ್ರಮ್ಮನಹಳ್ಳಿ, ರಾಂಪುರ, ಕಾಳಾಪುರ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆಗಳಾದ ಬಾಳೆ, ಪಪ್ಪಾಯಿ, ದಾಳಿಂಬೆ, ಎಲೆಬಳ್ಳೆ ಬೆಳೆಗಳು ನಷ್ಟವಾಗಿರುತ್ತವೆ. ಬಾಳೆ 60ಎಕರೆ, ಪಪ್ಪಾಯಿ 50ಎಕರೆ, ದಾಳಿಂಬೆ40ಎಕರೆ, ಎಲೆಬಳ್ಳೆ 40ಎಕರೆ ಅಂದಾಜು ನಷ್ಟವಾಗಿರುತ್ತದೆ. ನಿಂಬಳಗೇರಿ, ಮಂಗಾಪುರ, ಹಿರೇವಡೇರಹಳ್ಳಿ ಗ್ರಾಮಗಳಲ್ಲಿನ ಬಾಳೆ ಬೆಳೆ ಹಾಗೂ ಹಿರೇವಡೇರಹಳ್ಳಿ ಗ್ರಾಮದ ಎಲೆಬಳ್ಳಿ, ಉಜ್ಜಿನಿ, ರಾಂಪುರ ಗ್ರಾಮಗಳಲ್ಲಿ ಬಿದ್ದ ಮನೆಗಳ ಹಾನಿಯನ್ನು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ತೋಟಗಾರಿಕೆ ಅಧಿಕಾರಿಯಾದ ನಾಗರಾಜ ಇವರೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.

ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯಿಂದ ತಾಲೂಕಿನ ಎಲ್ಲಾ ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ನಿಖರ ಮಾಹಿತಿಯನ್ನು ಪಡೆದು ಪರಿಹಾರ ಕಾರ್ಯಕ್ಕೆ ವರದಿ ಸಿದ್ದಪಡಿಸಲಾಗುತ್ತಿದೆ. ತಾಲೂಕಿನಲ್ಲಿ ನಿನ್ನೆ ಸುರಿದ ಆನೆಕಲ್ಲು ಸಹಿತ ಸುರಿದ ಮಳೆ ಗಾಳಿಗೆ ಯಾವುದೇ ಪ್ರಾಣ ಹಾನಿ, ಜೀವಹಾನಿ ಸಂಭವಿಸಿರುವುದಿಲ್ಲ. ಸಂತ್ರಸ್ಥರಿಗೆ ಕೂಡಲೇ ಪರಿಹಾರ ಒದಗಿಸಲು ನಿಯಮಾನುಸಾರ ಕ್ರಮವಹಿಸಲಾಗುವುದು. ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಿಗರಿಗೆ ತಮ್ಮ ತಮ್ಮ ಕೇಂದ್ರಸ್ಥಾನದಲ್ಲಿದ್ದು, ಮಳೆ ಗಾಳಿಯಿಂದ ಹಾನಿ ಬಗ್ಗೆ ತಕ್ಷಣ ವರದಿ ಸಲ್ಲಿಸಲು ಸನ್ನದ್ಧರಾಗಿರಬೇಕೆಂದು ಸೂಚಿಸಲಾಗಿದೆ ಎಂದು ತಹಶೀಲ್ದಾರರಾದ ಎಂ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕಂದಾಯ ನಿರೀಕ್ಷರದಾದ ಹಾಲಸ್ವಾಮಿ, ಗ್ರಾಮ ಲೆಕ್ಕಿಗರಾದ ಶರಣಬಸವೇಶ, ರಮೇಶ ಹಾಗೂ ಇತರೆ ಗ್ರಾಮಗಳ ಗ್ರಾಮ ಲೆಕ್ಕಿಗರು ಪರಿಶೀಲನೆ ವೇಳೆ ಸ್ಥಳದಲ್ಲಿ ಹಾಜರಿದ್ದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here