ಸಂಡೂರಿನ ಯೋಗ ಶಿಕ್ಷಕ ತುಮಟಿ ಶ್ರೀನಿವಾಸ್ ಆವರಿಂದ ರಥಸಪ್ತಮಿ ದಿನದೊಂದು ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ

0
233

ಸಂಡೂರು.20:-ಸಂಡೂರಿನ ಯೋಗ ಶಿಕ್ಷಕ ತುಮಕೂರ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ರಥಸಪ್ತಮಿ ದಿನದೊಂದು ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಯೋಗಾಸನ ಅದರಲ್ಲೂ ಸೂರ್ಯ ನಮಸ್ಕಾರದ ಕುರಿತು ವಿವರವಾಗಿ ತಿಳಿಸಿದರು.

ಮಾಘಮಾಸ ಶುಕ್ಲಪಕ್ಷದ ಸಪ್ತಮಿಯಂದು ರಥಸಪ್ತಮಿ ಎಂದು ಕರೆಯುತ್ತಾರೆ. ಸೂರ್ಯನು ರಥವೇರಿದ ದಿನವನ್ನು ರಥಸಪ್ತಮಿ ಎಂದು ಕರೆಯುತ್ತಾರೆ. ಸೂರ್ಯ ಹುಟ್ಟಿದ ದಿನ. ಸೂರ್ಯನು ತನ್ನ ರಥವನ್ನು ದಕ್ಷಿಣದಿಂದ ಉತ್ತರಕ್ಕೆ ತಿರುಗಿಸುವ ವಿಶೇಷ ದಿನ. ಅಂದು ಮುಂಜಾನೆ ಬೇಗ ಎದ್ದು ಏಳು ಎಕ್ಕದ ಎಲೆಗಳನ್ನು ಭುಜಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡಬೇಕು. ಸಾಧ್ಯವಾದಲ್ಲಿ ನದಿಸ್ನಾನ ಮಾಡಿದರೆ ತುಂಬಾ ಶ್ರೇಷ್ಠ. ಹೀಗೆ ಸ್ನಾನ ಮಾಡುವಾಗ ಸೂರ್ಯನ ಕುರಿತು ಈ ಶ್ಲೋಕ ಹೇಳಿದಲ್ಲಿ ಇನ್ನು ಉತ್ತಮ.
“ಸಪ್ತ ಸಪ್ತ ಮಹಾ ಸಪ್ತ, ಸಪ್ತದ್ವೀಪ ವಸುಂಧರಾ,
ಸಪ್ತಾಕ ವರ್ಣಮಾಧಾಯ, ಸಪ್ತಮಿ ರಥ ಸಪ್ತಮಿ”. ನಂತರ ಸೂರ್ಯ ಮಂತ್ರಗಳನ್ನು ಹೇಳಿ ಸೂರ್ಯನಮಸ್ಕಾರ ಮಾಡಿದಲ್ಲಿ ಸೂರ್ಯನ ಕೃಪೆ ನಮ್ಮ ಮೇಲೆ ಖಂಡಿತ ಬೀಳುವುದು.


ಸೂರ್ಯ ಎಂಬ ಶಬ್ದವೇ ಒಂದು ಚೈತನ್ಯ. ಪ್ರಕೃತಿಯಲ್ಲಿನ ಪ್ರಾಣಿ-ಪಕ್ಷಿ, ಕ್ರಿಮಿ-ಕೀಟ,ಗಿಡ,ಮರ,ಎಲೆ, ಬಳ್ಳಿ,ಹೂವು ಪ್ರತಿಯೊಂದಕ್ಕೂ ಅಂತರಾತ್ಮ ಸೂರ್ಯ.
ಅಂತಹ ಸೂರ್ಯೋಪಾಸನೆ ಮಾಡುವುದರಿಂದ ಆಯುಷ್ಯ , ಆರೋಗ್ಯ, ತೇಜಸ್ಸು,ಬಲ,ಶಕ್ತಿ, ವೀರ್ಯ ವೃದ್ಧಿಸುವುದೆಂದು ಅಕಾಲಿಕವಾಗಿ ಬರುವ ಸಾವನ್ನು ಗೆಲ್ಲಬಹುದೆಂದು ಮತ್ತು ಸರ್ವವ್ಯಾಧಿಗಳನ್ನು ದೂರ ಮಾಡಬಹುದೆಂದು ತಿಳಿದ ನಮ್ಮ ಋಷಿಮುನಿಗಳು ಸೂರ್ಯನ ಆರಾಧನೆಯನ್ನು ಕೈಗೊಂಡರು.
ಪ್ರಕೃತಿ ಪೂಜಕರಾಗಿದ್ದ ನಮ್ಮ ಹಿರಿಯರು ಭೂಮಿ, ನೀರು,ಮರಗಳು ಮತ್ತು ಸೂರ್ಯನನ್ನು ಆರಾಧಿಸುತ್ತಿದ್ದರು.
ಕೆಲವೆಡೆ ಬೇರೆ ಬೇರೆ ಹೆಸರಿನಲ್ಲಿ ಅದರ ಆಚರಣೆ ಇರುವುದು ಗಮನಿಸಬಹುದು. ಬಂಗಾಳದಲ್ಲಿ ಮಾಘ ಮಂಡಲ ವ್ರತವೆಂದು, ತಮಿಳುನಾಡಿನಲ್ಲಿ ಪೊಂಗಲ್ ಎಂದು, ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸುವುದು ವಾಡಿಕೆ.

ಸೂರ್ಯನನ್ನು 3ಪ್ರಕಾರಗಳಲ್ಲಿ ಉಪಾಸನೆ ಮಾಡಬಹುದಾಗಿದೆ. ಒಂದನೆಯದು ಪೂಜೆ ಯಜ್ಞಗಳ ಮೂಲಕ ಸೂರ್ಯೋಪಾಸನೆ, ಎರಡನೆಯದು ಸೂರ್ಯ ಮಂತ್ರಗಳ ಮೂಲಕ ಸೂರ್ಯೋಪಾಸನೆ, ಮೂರನೆಯದು “ಸೂರ್ಯ ನಮಸ್ಕಾರ”ಗಳ ಮೂಲಕ ಸೂರ್ಯೋಪಾಸನೆ ಹಾಗೂ ಹಲವು ಆಸನಗಳನ್ನು ಒಳಗೊಂಡಿರುವ ನಮಸ್ಕಾರ ಮಾಡುತ್ತಾ ದೇಹ ದಂಡಿಸುತ್ತ ಪ್ರತಿ ನಮಸ್ಕಾರವನ್ನು ಪುಷ್ಪಾರ್ಚನೆ ರೀತಿಯಲ್ಲಿ ಸೂರ್ಯ ಭಗವಾನನಿಗೆ ಸಮರ್ಪಿಸುವುದು ಒಂದು ಪದ್ದತಿ.
10 ಸ್ಥಿತಿಗಳ ಸುಂದರ ಜೋಡಣೆಯೇ ಸೂರ್ಯ ನಮಸ್ಕಾರ.
ಸೂರ್ಯ ನಮಸ್ಕಾರವನ್ನು ಉಪಾಸನ ವ್ಯಾಯಾಮ ಎಂದು ಕೂಡ ಕರೆಯುತ್ತಾರೆ. ದೇಹಾರೋಗ್ಯಕ್ಕೆ,ಮಾನಸಿಕ ಸಂಯಮ ಮತ್ತು ಏಕಾಗ್ರತೆಗೆ,ಸ್ಮರಣ ಶಕ್ತಿ, ಬುದ್ಧಿ ವಿಕಾಸಕ್ಕೆ ಸೂರ್ಯನಮಸ್ಕಾರ ಸರ್ವಾಂಗ ಸುಂದರ ವ್ಯಾಯಾಮ.
ಇಂದಿನ ನಗರ ಜೀವನದ ಜಂಜಾಟದಲ್ಲಿರುವ ನಾವು ವ್ಯಾಯಾಮ,ಯೋಗಾಸನ, ಪ್ರಾಣಾಯಾಮ ಮಾಡುವಷ್ಟು ಸಮಯವಿಲ್ಲದ ನಮಗೆ ಸೂರ್ಯನಮಸ್ಕಾರ ಒಂದು ವರದಾನ ಎಂದರೆ ತಪ್ಪಾಗಲಾರದು.
ಪ್ರಾತಃಕಾಲದ ದಿನಚರಿಯ ನಂತರ ಓಂಕಾರ,ಪ್ರಾರ್ಥನೆ ಮಾಡಿ ಸೂರ್ಯಮಂತ್ರವನ್ನು ಹೇಳಿಕೊಂಡು ಸೂರ್ಯನಮಸ್ಕಾರ ಮಾಡಿದಲ್ಲಿ ಮೇಲೆ ಹೇಳಿದ ಲಾಭಗಳ ಜೊತೆಗೆ ಇಡೀ ದಿನ ಉಲ್ಲಾಸಿತವಾಗಿಯೂ ಶಾಂತಿಯುತವಾಗಿಯೂ ಕಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಗುರುಭವನದಲ್ಲಿ ನಡೆದ ಯೋಗ ಶಿಬಿರದ ಯೋಗಾಸನ ಕಾರ್ಯಕ್ರಮದಲ್ಲಿ ಅನ್ನಪೂರ್ಣ ತುಕಾರಾಂ, ಆಶಾಲತಾ ಸೋಮಪ್ಪ, ಕುಮಾರ್ ನಾನಾವಟೆ, ಪ್ರಕಾಶ್ ,ಸುರೇಶ್ ಘೋರ್ಪಡೆ, ರುದ್ರಪ್ಪ, ನಿಂಗಪ್ಪ ಸರ್, ನಾಗಭೂಷಣ ಸರ್, ಪಂಪಾಪತಿ ಸರ್ ,ಶಾರದ ಟೀಚರ್ ,ಸುಮಾ ಮೇಡಂ ಸೌಮ್ಯ ,ಪರಮೇಶ್ವರ ರೆಡ್ಡಿ ಇತರರಿದ್ದರು ಹಾಗೂ 45 ಜನ ಯೋಗ ಶಿಭಿರಾರ್ತಿಗಳು ಬಾಗವಹಿಸಿದ್ದರು.

LEAVE A REPLY

Please enter your comment!
Please enter your name here