ಎಂ.ತುಂಬರಗುದ್ದಿ ಪ್ರೌಢ ಶಾಲೆಯಲ್ಲಿ “ರಾಷ್ಟ್ರೀಯ ವಿಜ್ಞಾನ ದಿನ” ಕಾರ್ಯಕ್ರಮ.

0
226

ಸಂಡೂರು:ಪೆ:೨೮:-ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ, ಎಂ.ತುಂಬರಗುದ್ದಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪೆ.28. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೆ.ಸಿ.ಉಮೇಶ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು,ಶಾಲೆಯ ಮಕ್ಕಳಿಗೆ ವಿಜ್ಞಾನ ದಿನಾಚರಣೆ ಪ್ರಯುಕ್ತ ಪ್ರಬಂಧ ಮತ್ತು ಬಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದರು, ಸ್ಪರ್ಧೆಯಲ್ಲಿ ಬಾಗವಹಿಸಿ ವಿಜೇತರಾದ ಮಕ್ಕಳಿಗೆ ಕೆ.ಸಿ.ಉಮೇಶ್ ಬಹುಮಾನವನ್ನು ವಿತರಿಸಿದರು.

ತದನಂತರ ಮುಖ್ಯೋಪಾಧ್ಯಾಯರಾದ ಎಂ. ತಿಪ್ಪೇಸ್ವಾಮಿ ಮಾತನಾಡುತ್ತ…

೧೯೭೦ : ಭಾರತೀಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ ರವರು ಸಣ್ಣ ಕಣದ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ವ್ಯತ್ಯಾಸವನ್ನು (ಚದುರುವಿಕೆ) ಕಂಡು ಹಿಡಿದರು.

ಬೆಳಕಿನ ವರ್ತನೆ ಬಗ್ಗೆ ನಡೆಸಿದ ಸಂಶೋಧನೆಗಾಗಿ ೧೯೩೦ ರಲ್ಲಿ ಅವರು ಭೌತ ವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.ನೊಬೆಲ್ ಪಾರಿತೋಷಕಕ್ಕೆ ಭಾಜನರಾದ ಪ್ರಪ್ರಥಮ ಭಾರತೀಯ ವಿಜ್ಞಾನಿ ರಾಮನ್ ಅವರ ಈ ಸಂಶೋಧನೆ `ರಾಮನ್ ಎಫೆಕ್ಟ್’ ಎಂದೇ ಖ್ಯಾತಿ ಪಡೆದಿದೆ.

೧೯೮೭ ರಲ್ಲಿ, ‘ರಾಮನ್ ಅವರ ಶತಮಾನೋತ್ಸವದ ಸಂದರ್ಭ’ ದಲ್ಲಿ ಕೃತಜ್ಞತೆಯಿಂದ ಕೂಡಿದ ಭಾರತ, ಫೆಬ್ರುವರಿ, ೨೮ ನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ವೆಂದು ಘೋಷಿಸಿ, ಆ ದಿನವನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ವಾಗಿ ಆಚರಿಸಲಾಗುತ್ತಿದೆ. ‘ಪ್ರೊ.ರಾಮನ್ ರವರು’, ತಮ್ಮ ೮೨ ನೇ ವಯಸ್ಸಿನಲ್ಲಿ ನಿಧನರಾದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕೆ.ಸಿ. ಉಮೇಶ್,ಮುಖ್ಯೋಪಾಧ್ಯಾಯರಾದ ಎಂ. ತಿಪ್ಪೇಸ್ವಾಮಿ, ಎಸ್.ಡಿ. ಎಂ.ಸಿ. ಅದ್ಯಕ್ಷರು ಹಾಗು ಸದಸ್ಯರುಗಳು ಭಾಗವಹಿಸಿದ್ದರು ಹಾಗೂ ವಿಜ್ಞಾನ ಶಿಕ್ಷಕರಾದ ಶ್ರೀ. ಅಮರೇಶ ಸೊನ್ನದ,ಬಾಗಳಿ ಶಬ್ಬೀರ್, ನೀಲಾಂಬಿಕೆ, ಶಹತಾಜ, ಮಾರೇಶ,ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here