ಜಿಲ್ಲಾ ಆಸ್ಪತ್ರೆಯ ವಿವಿಧ ಘಟಕ, ವಾರ್ಡ್ ಗಳಿಗೆ ಅನಿರೀಕ್ಷಿತ ಬೇಟಿ ನೀಡಿ, ಜಿಲ್ಲಾಧಿಕಾರಿಗಳಿಂದ ಪರಿಶೀಲನೆ; ಕಾಂಟ್ರಾಕ್ಟರ್ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ.

0
76

ಧಾರವಾಡ ಫೆ.21:ರಕ್ತದಾನಿಗಳಿಗೆ ಪ್ರಶಂಸೆ: ಭಾವಸಾರ ಕ್ಷತ್ರಿಯ ಸಮಾಜದ ಯುವಕ ಮಂಡಳ ಸದಸ್ಯರು ಮಂಡಳದ ವಾರ್ಷಿಕೋತ್ಸವದ ನಿಮಿತ್ಯ ಸ್ವಯಂ ಪ್ರೇರಣೆಯಿಂದ ರಕ್ತದಾನಮಾಡಲು ಜಿಲ್ಲಾ ಆಸ್ಪತ್ರೆಯ ರಕ್ತ ಸಂಗ್ರಹಣಾ ಕೇಂದ್ರಕ್ಕೆ ಆಗಮಿಸಿ, ರಕ್ತದಾನ ಮಾಡುತ್ತಿದ್ದರು.
ಜಿಲ್ಲಾ ಆಸ್ಪತ್ರೆಯ ವಿವಿಧ ವಾರ್ಡ ಪರಿಶಿಲನಾ ಕಾರ್ಯದಲ್ಲಿದ್ದ ಜಿಲ್ಲಾಧಿಕಾರಿಗಳು ರಕ್ತ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಶನದಲ್ಲಿ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಶುಭ ಹಾರೈಸಿದರು. ರಕ್ತದಾನಿಗಳನ್ನು ಉದ್ದೇಶಿಸಿ ಮಾತನಾಡಿ, ರಕ್ತದಾನ ಎಲ್ಲ ಕ್ಕಿಂತ ಶ್ರೇಷ್ಠವಾದ ದಾನವಾಗಿದೆ. ಇದೊಂದು ಮಾದರಿ ಕಾರ್ಯ. ಮುಂದಿನ ದಿನಗಳಲ್ಲಿ 50 ವರ್ಷ ಮೇಲ್ಪಟ್ಟ ಹಾಗೂ ಸಾರ್ವಜನಿಕರಿಗೆ ಕೋವಿಶಿಲ್ಡ್ ಲಸಕೆಯನ್ನುಹಾಕಲಾಗುತ್ತದೆ. ಯಾರು ಬಯ ಪಡದೆ ಲಸಿಕೆ ಪಡೆಯಬೇಕು ಎಂದರು. ನೆರೆ ರಾಜ್ಯಗಳಲ್ಲಿ ಮತ್ತೆ ಕೋರೊನಾ ವೈರಾಣು ಹೆಚ್ಚಳವಾಗುತ್ತಿದೆ. ಪ್ರತಿಯೊಬ್ಬರು ಮಾಸ್ಕ ಹಾಗೀ ಸಾಮಾಜಿಕ ಅಂತರ ಕಾಪಾಡಬೇಕು. ಮತ್ತು ತಪ್ಪದೆ ಕೋವಿಶಿಲ್ಡ್ ಲಸಿಕೆಯನ್ನು ಪಡೆಯಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ರಕ್ತದಾನ ಮಾಡಲು ಆಗಮಿಸಿದ್ದ ಮನಗುಂಡಿ ಬಸವ ಆಶ್ರಮದ ಪೂಜ್ಯ ಬಸವಾನಂದ ಸ್ವಾಮೀಜಿಗಳಿಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿ, ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ, ಮಕ್ಕಳ ತಜ್ಞ ವೈದ್ಯರಾದ ಡಾ.ಶೇಪುರ, ಡಾ.ನಾಡಗೌಡ, ಡಾ.ಅಚ್ಯುತನ್, ಸಿಡಿಪಿಓ ಡಾ. ಕಮಲಾ ಬೈಲೂರ, ಪೌಷ್ಟಿಕಾಂಶ ತಜ್ಞೆ ರೇಣುಕಾ ಕಲ್ಲನಗೌಡರ, ಎಇ ಎಮ್.ಎ.ಕಳಸಗೇರಿ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here