ಸಣ್ಣ ಉಪ್ಪಾರಹಳ್ಳಿ:ಮಕ್ಕಳನ್ನ ಸಮಾಜದ ಆಸ್ಥಿಯನ್ನಾಗಿಸಿ-ಶಿಕ್ಷಕ ಕೊಟ್ರೇಶ

0
99

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸೋವೇನಹಳ್ಳಿ ಗ್ರಾಮ ಪಂಚಾಯ್ತಿ ವತಿಯ ಸಣ್ಣ ಉಪ್ಪಾರಹಳ್ಳಿಯಲ್ಲಿ, ಫೆ26ರಂದು ಸಂಜೆ “ಮಕ್ಕಳ ಸ್ನೇಹ ಗ್ರಾಮ ಪಂಚಾಯಿತಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕೊಟ್ರೇಶ್ ಮಾತನಾಡಿದರು,ಮಕ್ಕಳಿಗಾಗಿ ಆಸ್ಥಿಮಾಡುವುದು ಸ್ವಾರ್ಥ ಸಾಧನೆ ಮಕ್ಕಳನ್ನೇ ಸಮಾಜದ ಆಸ್ಥಿಯನ್ನಾಗಿಸಿದ್ದಲ್ಲಿ ಸಮಾಜಾಭಿವೃದ್ಧಿ ಸಾಧ್ಯ ಎಂದು ಶಿಕ್ಷಕ ಕೊಟ್ರೇಶ ಗ್ರಾಮಸ್ಥರಿಗೆ ಕರೆ ನೀಡಿದರು.ಚಿಕ್ಕ ಮಕ್ಕಳಿಗೆ ಆರೋಗ್ಯದ ಹಿತ ದೃಷ್ಟಿಯಿಂದ ಆರು ವರ್ಷದೊಳಗಿನ ಮಕ್ಕಳಿಗೆ ಸಕಾಲಕ್ಕೆ ಅಗತ್ಯ ಲಸಿಕೆಗಳನ್ನು ಹಾಕಿಸುವುದು ಖಡ್ಡಾಯ,ಅಂಗನವಾಡಿ ಕಾರ್ಯಕರ್ತೆಯರಿಂದ ಪೌಷ್ಟಿಕ ಆಹಾರ ನೀಡುವುದು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಅರೋಗ್ಯ ಸಲಹೆಗಳನ್ನ ಸಹಕಾರವನ್ನ ನೀಡುವುದು ,ಅಂಗನವಾಡಿ ಹಾಗೂ ಸ್ಥಳೀಯ ಆಡಳಿತದ ಆಧ್ಯ ಕರ್ಥವ್ಯವಾಗಿದೆ ಇದನ್ನು ಪ್ರತಿಯೊಬ್ಬರು ಅರಿಯಬೇಕಿದೆ.
ಚಿಕ್ಕ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಇಲಾಖೆಗಳಿಂದ ರೂಪಿಸಿರುವ ಸೌಲಭ್ಯಗಳನ್ನು ಎಲ್ಲರೂ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು,”ಮಕ್ಕಳಿಗಾಗಿ ಆಸ್ಥಿ”ಮಾಡುವುದು ಸ್ವಾರ್ಥ ಮನೋಭಾವ ಬದಲಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿ ಉತ್ತಮ ಭವಿಷ್ಯ ರೂಪಿಸಿ ಮಕ್ಕಳನ್ನ “ಸಮಾಜದ ಬಹು ದೊಡ್ಡ ಆಸ್ಥಿಯನ್ನಾಗಿಸಿ”ಎಂದು ಕೊಟ್ರಶ್ ಕರೆ ನೀಡಿದರು.ನಂತರ ಕುಮಾರಸ್ವಾಮಿ ಮಾತನಾಡಿ ಅಗತ್ಯ ಜಾಗ್ರತೆ ಮೂಡಿಸಿದರು,ಮುಖ್ಯ ಶಿಕ್ಷಕ ಅಜ್ಜಯ್ಯ,ಸಹ ಶಿಕ್ಷಕ ಸಿದ್ದ ಬಸಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷ ಅಂಜಿನಪ್ಪ,ಗ್ರಾಮ ಪಂಚಾಯ್ತಿ ಸದಸ್ಯನಾಗೇಶ್,ಗ್ರಾಮದ ಮುಖಂಡರಾದ ಕುಮಾರಸ್ವಾಮಿ, ನಾರಾಯಣಪ್ಪ,ಶ್ರೀನಿವಾಸ, ಅಂಜಿನಪ್ಪ,ಬಸವರಾಜಪ್ಪ,ಗೋವಿಂದಪ್ಪ ಸೇರಿದಂತೆ ವಿವಿದ ಜನಪ್ರತಿನಿಧಿಗಳು,ಸ್ಥಳೀಯ ಆಡಳಿತ ಸಿಬ್ಬಂದಿ ಹಾಗೂ ವಿವಿದ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು ಮತ್ತು ಮಕ್ಕಳು ಹಿರಿಯ ಗ್ರಾಮಸ್ಥರು,ಮಕ್ಕಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

LEAVE A REPLY

Please enter your comment!
Please enter your name here