ಶ್ರೀ ರಾಜಭಾರತಿ ಸ್ವಾಮಿಗಳ ಸಾಮಾಜಿಕ ಸೇವೆ ಇತರರಿಗೆ ಮಾದರಿ: ಹಿರಿಯ ಚಿತ್ರಕಲಾವಿದ ಎಂ.ಎಸ್.ಬಿರಾದಾರ್

0
95

ಸಂಡೂರು;ಎರಡು ಜೀವಗಳನ್ನು ಸೇರಿಸಲು ಸಾವಿರಾರು ಜನರನ್ನು ಕಲೆಹಾಕಿ ಅವರೆಲ್ಲರ ಸಂಭ್ರಮಕ್ಕೆ ಕಾರಣವಾಗುದರ ಜೊತೆಗೆ ಸುಮಾರು 27 ವರ್ಷಗಳಿಂದ ಇಂಥಹ ವಿವಾಹ ಕಾರ್ಯಕ್ರಮಗಳು ಮತ್ತು ಸಂಕ್ಲಾಪುರದಲ್ಲಿ ಬಡಮಕ್ಕಳಿಗೆ ಶಿಕ್ಷಣ ನೀಡುವ ಶಾಲೆಯನ್ನು ನಡೆಸುತ್ತಿರುವ ಸ್ವಾಮೀಜಿಗಳ ಕಾಳಜಿ ಅನನ್ಯ ಎಂದು ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಎಂ.ಎಸ್.ಬಿರಾದಾರ್ ತಿಳಿಸಿದರು. ಅವರು ತಾಲೂಕಿನ ಜೋಗ ಗ್ರಾಮದ ಬಳಿಯ ದೇವರಕೊಳ್ಳದ ಅನ್ನಪೂರ್ಣೇಶ್ವರಿ ಆಶ್ರಮದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಂಪ್ಲಿ ಶಾಸಕ ಎನ್.ಗಣೇಶ್ ಮಾತನಾಡಿ, ಉಚಿತ ಸಾಮೂಹಿಕ ಮದುವೆಗಳನ್ನು ಮಾಡುವ ಮೂಲಕ ಬಡವರಿಗೆ ನೆರವಾಗಿವೆ ಜೊತೆಗೆ ದೈವತ್ವದ ಅನುಭೂತಿಯನ್ನು ಜನರಿಗೆ ನೀಡುತ್ತಿರುವ ಕೆಲಸ ಶ್ಲಾಗನೀಯ ಎಂದರು. ನನ್ನ ತಂದೆ ನಾನು ಸ್ವಾಮೀಜಿಗಳ ಭಕ್ತರು, ಅಂದು ಕೊಂಡ ಕೆಲಸಗಳು ಪೂರ್ಣಗೊಂಡಿವೆ ದೈವತ್ವದ ಸಾಕಾರ ಮೂರ್ತಿ ಇವರಾಗಿದ್ದಾರೆ ಎಂದು ತಿಳಿಸಿದರು. 23 ಜೋಡಿಗಳು ನೂತನ ದಾಂಪತ್ಯ ಸಪ್ತಪದಿ ತುಳಿದರು.
ಅರ್ಜುನ್ ಗುರೂಜಿ, ಟಗರು ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಗುಜ್ಜಲ ಪುರುಷೋತ್ತಮ, ಸತೀಶ್ ಬಿಲ್ಲಾಡಿ, ಲಕ್ಮಣ್, ಆರ್. ಶಿವರಾಮ್ ಸಂಡೂರು, ಜೋಗದ ಹೊನ್ನೂರಪ್ಪ, ಜೆ.ಎನ್.ಪರಶುರಾಮ್, ಮುರಾರಿಪುರ ಕುಮಾರಸ್ವಾಮಿ, ಭರಮನಗೌಡ, ಚಂದ್ರು, ಬಳ್ಳಾರಿ, ಹೊಸಪೇಟೆ, ಸಂಡೂರು, ಕೊಪ್ಪಳ,ಗಂಗಾವತಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ಎಸ್ಡಿಆರ್27-1) ಸಂಡೂರು ತಾಲೂಕಿನ ಜೋಗ ಗ್ರಾಮದ ದೇವರಕೊಳ್ಳದಲ್ಲಿ ಶ್ರೀ ರಾಜಭಾರತಿ ಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಎಂ.ಎಸ್.ಬಿರಾದಾರ್ ಮಾತನಾಡಿದರು. ಶಾಸಕ ಗಣೇಶ್, ಇತರ ಗಣ್ಯರು ವೇಧಿಕೆಯಲ್ಲಿದ್ದರು.

LEAVE A REPLY

Please enter your comment!
Please enter your name here