ಹೈಕಮಾಂಡ್ ಸೂಚಿಸುವ ವ್ಯಕ್ತಿಯೇ ವಿಧಾನಸಭೆ ಚುನಾವಣೆಗೆ ಸ್ಪರ್ದಿ; ಕಾರ್ತಿಕೇಯ ಘೋರ್ಪಡೆ

0
881

ಸಂಡೂರು:ಮೇ:30:-ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಸಾಕಷ್ಟು ಸ್ಥಳೀಯ ಅಭ್ಯರ್ಥಿಗಳಿದ್ದಾರೆ, ಆದರೆ ಪಕ್ಷ ಯಾರನ್ನು ಗುರುತಿಸಿ ಸೂಚಿಸುತ್ತಾರೋ ನಿಲ್ಲಿಸಿ ಅವರನ್ನು ಬಾರಿ ಬಹುಮತದಿಂದ ಆರಿಸಿ ಗೆಲ್ಲಿಸಿಕೊಂಡು ಬರೋಣ ಎಂದು ಬಿಜೆಪಿ ಹಿರಿಯ ಮುಖಂಡರಾದ ಮಹಾರಾಜ ಕಾರ್ತಿಕೇಯ ಘೋರ್ಪಡೆಯವರು ಸಂಡೂರು ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದರು.

ಪಟ್ಟಣದ ಕಾರ್ತಿಕೇಯ ಘೋರ್ಪಡೆಯವರ ಕೃತಿಕಾ ನಿವಾಸದ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಉದ್ಘಾಟನಾ ಬಾಷಣದಲ್ಲಿ ಮಾತನಾಡುತ್ತಾ. ಬಿಜೆಪಿ ಪಕ್ಷ ಕಾರ್ಯಕರ್ತರನ್ನು ಬೆಳೆಸುವಂತ ಕೆಲಸಮಾಡುತ್ತಿದೆ, 2018 ರಲ್ಲಿ ನಾವು ರಾಜಕೀಯದಲ್ಲಿ ಗೆಲುವು ಪಡೆದು ಮುಂದೆ ಬರಬೇಕಾಗಿತ್ತು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಬಂಗಾರು ಹನುಮಂತ ಏಳು ಸಾವಿರ ಮತಗಳನ್ನು ಪಡೆದುಕೊಂಡಿದ್ದರಿಂದ ನಮ್ಮ ಪಕ್ಷ ಸೋಲುವಂತಾಯಿತು. ವಿಧಾನಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಎಲ್ಲರೂ ತಮ್ಮ ಸ್ವಾರ್ಥವನ್ನು ಬಿಟ್ಟು ಒಂದಾಗಿ ಕೆಲಸ ಮಾಡೋಣ ಎಲ್ಲರನ್ನೂ ಗೆಲ್ಲಿಸಿಕೊಂಡು ಬರೋಣ, ಗೊಂದಲಗಳಿದ್ದರೆ ಈಗಲೇ ಬಗೆಹರಿಸಿಕೊಳ್ಳಿ, ಈ ಬಾರಿ ಸಂಡೂರಿನಿಂದ ಬಿಜೆಪಿ ಪಕ್ಷದಿಂದ ಒಬ್ಬ ಎಮ್ಮೆಲ್ಲೇಯನ್ನು ಆರಿಸಿ ಗೆಲ್ಲಿಸಿಕೊಳ್ಳೋಣ ಅದೇ ನಮ್ಮ ಮುಂದಿನ ಗುರಿಯಾಗಬೇಕು,

ವಿಠ್ಠಲಾಪುರ ಕೆರೆಗೆ ನೀರು ತುಂಬಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ, ಆದ್ರೆ ಆ ಕೆರೆಗೆ ಸುಲಭವಾಗಿ ನೀರು ತರಬವುದು ಎಂದು ನಾವು ಮತ್ತು ನಮ್ಮ ಸಾಬೀತು ಪಡಿಸುವನಿಟ್ಟಿನಲ್ಲಿ ತುಂಗಭದ್ರಾ ನದಿಯ ನೀರನ್ನು ತಂದು 74 ಕೆರೆಗಳಿಗೆ ನೀರು ತುಂಬಿಸುವಂತ ಕೆಲಸ ಮಾಡಿದ್ದೇವೆ, ಡಿಪಿಆರ್ ರೆಡಿಯಾಗಿದೆ ಮುಂದಿನ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಕಾರ್ಯಕ್ರಮದ ದಿನವನ್ನು ನಿಗದಿಮಾಡಿ ಚಾಲನೆಯನ್ನು ನೀಡಲಿದ್ದೇನೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಮುರಾಹರಿ ಗೌಡ ಮಾತನಾಡಿ ನಮ್ಮ ಬಿಜೆಪಿ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನು ಸಹ ರಾಷ್ಟ್ರಪತಿ-ಪ್ರಧಾನಿ-ಮುಖ್ಯಮಂತ್ರಿ-ಜಿಲ್ಲಾಧ್ಯಕ್ಷ – ತಾಲ್ಲೂಧ್ಯಕ್ಷನಾಗಬವುದು ಅದು ನಮ್ಮ ಪಕ್ಷದ ಹೆಮ್ಮೆ, ಶಾಸಕ ತುಕಾರಾಮ್ 3 ಬಾರೀ ಶಾಸಕರಾದರು ಸ್ಥಳೀಯರಿಗೆ ಶುದ್ಧವಾದ ಕುಡಿಯುವ ನೀರನ್ನು ಒಡಗಿಸಲಾಗಲಿಲ್ಲ ಎಂದರು

ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಜಿ.ಟಿ.ಪಂಪಾಪತಿ, ಜಿಲ್ಲಾ ಅಧ್ಯಕ್ಷ ಮುರಾಹರಿ ಗೌಡ ಮಾತನಾಡಿದರು, ವೀರೇಶ್ ನಿರೂಪಿಸಿದರು

ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಮುರಾಹರಿ ಗೌಡ, ತಾಲೂಕು ಅಧ್ಯಕ್ಷ ಜಿ.ಟಿ.ಪಂಪಾಪತಿ,ಬಳ್ಳಾರಿ ಜಿಲ್ಲಾ ಪ್ರಭಾರಿ ಸಿದ್ದೇಶ್ ಯಾದವ್, ಜಿಲ್ಲಾ ಉಪಾಧ್ಯಕ್ಷರಾದ ಬಾಗ್ಯಲಕ್ಷ್ಮೀ, ಜಿಲ್ಲಾ ಪ್ರಭಾರಿ ಶಿವಶಂಕರಪ್ಪ, ಜಿಲ್ಲಾ ಕಾರ್ಯದರ್ಶಿ ಉಡೆಧ್ ಸುರೇಶ್, ರಾ.ಕಾ.ಸದಸ್ಯ ಕುಮಾರ್ ನಾಯ್ಕ್, ವಾಡ ಅಧ್ಯಕ್ಷ ಶರಣಪ್ಪ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here