ಬಿಎಫ್‍ಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ

0
142

ಬಳ್ಳಾರಿ,ಮಾ.10 ನರೇಗಾ ಯೋಜನೆಯ ಅನುಷ್ಟಾನ ಹಾಗೂ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಮತ್ತು ತಾಂತ್ರಿಕ ಸಹಾಯಕರುಗಳಿಗೆ ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ಬಳ್ಳಾರಿ/ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ 16 ಬಿಎಫ್‍ಟಿ ಹುದ್ದೆಗಳಿಗೆ ಒಂದು ವರ್ಷದ ಅವಧಿ ಮೇರೆಗೆ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿಯ 02, ಕುರುಗೋಡು 01, ಸಂಡೂರು 03, ಸಿರುಗುಪ್ಪ 03, ಹರಪನಹಳ್ಳಿ 03, ಹೊಸಪೇಟೆ 02, ಕೊಟ್ಟೂರು 02 ಹುದ್ದೆಗಳು ಸೇರಿದಂತೆ ಒಟ್ಟು 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಪಂ ಆವರಣದಲ್ಲಿರುವ ಮಹಾತ್ಮಗಾಂಧಿ ನರೇಗಾ ಕೋಶ ವಿಭಾಗದಿಂದ ಅರ್ಜಿಗಳನ್ನು ಪಡೆದು ಮಾ.10ರಿಂದ 25ರವರೊಳಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನರೇಗಾ ಯೋಜನೆಯಡಿಯಲ್ಲಿ ಸಕ್ರಿಯ ಕೆಲಸಗಾರನಾಗಿರಬೇಕು, ಹಿಂದಿನ ಮೂರು ವರ್ಷಗಳಲ್ಲಿ ಕನಿಷ್ಠ 2ವರ್ಷಗಳಲ್ಲಿ ಕನಿಷ್ಠ 25ದಿನಗಳು ಕೂಲಿಕಾರನಾಗಿ ಕೆಲಸವನ್ನು ಮಾಡಿರಬೇಕು. ಕನಿಷ್ಠ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಸ್ಥಳೀಯ ಅಭ್ಯರ್ಥಿಗಳಾಗಿರಬೇಕು. 45ವರ್ಷಕ್ಕಿಂತ ಕಡಿಮೆ ವಯೋಮಿತಿ ಉಳ್ಳವರಾಗಿರಬೇಕು. ಸಮಾನ ಅಂಕಗಳನ್ನು ಪಡೆದಿದ್ದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗುವುದು. ದಾಖಲಾತಿ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳನ್ನು ನಿಗಧಿಪಡಿಸಿದ ಹುದ್ದೆಗಳಿಗೆ 1:3 ರ ಅನುಪಾತದಂತೆ ಸ್ಕ್ರೀನಿಂಗ್ ಟೆಸ್ಟ್‍ಗೆ ಆಯ್ಕೆ ಮಾಡಲಾಗುವುದು. ಸ್ಕ್ರೀನಿಂಗ್ ಟೆಸ್ಟ್ ನಲ್ಲಿ ಕನಿಷ್ಟ 40ಅಂಕ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಿ,ಇವರಲ್ಲಿ ಗರಿಷ್ಠ ಅಂಕ ಪಡೆದ ಅಭ್ಯರ್ಥಿಗಳನ್ನು ಸದರಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.