ಸತತ 8 ವರ್ಷಗಳಿಂದ ಜಿಲ್ಲಾ ಮಟ್ಟಕ್ಕೆ ಥ್ರೋಬಾಲ್ ಆಯ್ಕೆ- ಭಾಗೀರಥಿ (ಗಂಗೋತ್ರಿ) ಪದವಿ ಪೂರ್ವ ಕಾಲೇಜು.

0
206

ಕೊಟ್ಟೂರು:ಆಗಸ್ಟ್:11:-
ಪಟ್ಟಣದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಭಾಗೀರಥಿ ಪದವಿ ಪೂರ್ವ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ನಿರ್ಮಲ ಶಿವನಗುತ್ತಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಆಗಸ್ಟ್ 5 ಮತ್ತು 6 ನೇ ದಿನಾಂಕ ದಂದು ನೆಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾ ಕೂಟದಲ್ಲಿ ಬಾಲಕರ ಥ್ರೋ ಬಾಲ್, ಬಾಲಕಿಯರ ಥ್ರೋ ಬಾಲ್, ಬಾಲಕಿಯರ ಖೋಖೋ, ಬಾಲಕ ಮತ್ತು ಬಾಲಕಿಯರ ಟೇನಿಕಟ್ ಆಟಗಳು ಪ್ರಥಮ ಸ್ಥಾನ ಪಡೆದಿವೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಶ್ರೀ ಸಿ.ಬಿ. ರಜತ್ ರವರು ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಹರ್ಷವ್ಯಕ್ತ ಪಡಿಸಿದರು.

ಹಾಗೇಯೇ ವೈಯಕ್ತಿಕ ಆಟಗಳಲ್ಲಿ ಬಾಲಕರ ಮತ್ತು ಬಾಲಕಿಯರ 100 ಮೀ ಓಟ, ಬಾಲಕಿಯರ 200 ಮೀ, 800 ಮೀ,3000 ಮೀ,5000 ಮೀ, ಬಾಲಕಿಯರ ನೆಡೆಗೆ ಪ್ರಥಮ ಸ್ಥಾನ ಪಡೆದಿವೆ ಬಾಲಕಿಯರ 4×100,4×400 ಮೀಟರ್ ರಿಲೇ ಗಳು ಸಹ ಪ್ರಥಮ ಸ್ಥಾನ ಪಡೆದು 5 ಟ್ರೋಫಿ, 16 ಚಿನ್ನದ ಪದಕ, 12 ಬೆಳ್ಳಿ ಪದಕ, 8 ಕಂಚಿನ ಪದಕಗಳನ್ನು ಗೆದ್ದು ಒಟ್ಟು 95 ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿದೆ ಎಂದು ಕಾಲೇಜಿನ ದೈಹಿಕ ನಿರ್ದೇಶಕರಾದ ಶ್ರೀ ಶಿವಕುಮಾರ್ ಎ.ಎಂ. ಕಾರ್ಯಕ್ರಮದಲ್ಲಿ ತಿಳಿಸಿದರು.

ತಂಡಗಳ ಸಂಚಾಲಕರಾಗಿ ಪ್ರಫುಲ್ ಚಂದ್ರ ಎಂ.ಎಸ್, ಪೂರ್ಣಚಂದ್ರ ,ಮರುಳಪ್ಪ ಕೆ, ಶ್ಯಾಮ್ ರಾಜ್ ಟಿ, ಗುರುಸ್ವಾಮಿ,ಗುರುಬಸವರಾಜ ಎ.ಎಂ.ಎಂ,ಭರತ್, ವಿನಯಕುಮಾರ್, ಶಂಭು, ಕೊಟ್ರೇಶ, ಶಶಿಕಿರಣ ಕೆ ನಾಗರಾಜ,ದಿವ್ಯ ಉಪನ್ಯಾಸಕರು ಕಾರ್ಯನಿರ್ವಹಿಸಿದರು.

ಕಾಲೇಜು ಈ ವಿಧ್ಯಾರ್ಥಿಗಳ ಸಾಧನೆಗೆ ಶ್ರಮಿಸಿದ ಪ್ರಾಂಶುಪಾಲರಿಗೆ,ದೈಹಿಕ ನಿರ್ದೇಶಕರಿಗೆ ಉಪನ್ಯಾಸಕರಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಚಟ್ರಿಕಿ ಬಸವರಾಜ್ ರವರು ಅಭಿನಂದನೆ ಸಲ್ಲಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here