ಗೃಹರಕ್ಷಕದಳ: ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

0
97

ಬಳ್ಳಾರಿ.ಮಾ.10. ಮಹಿಳೆಯರು ಉತ್ಸಾಹದಿಂದ ಎಲ್ಲಾ ರಂಗಗಳÀಲ್ಲಿ ಮುಂದುವರೆಯಬೇಕು.ಹೆಣ್ಣುಮಕ್ಕಳು ಸದೃಢರಾಗಿರಬೇಕು ಮತ್ತು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಲೋಟ್ ಅವರು ಹೇಳಿದರು.
ಜಿಲ್ಲಾ ಗೃಹರಕ್ಷಕದಳ ಮತ್ತು ಜಿಲ್ಲಾ ಪೌರರಕ್ಷಣೆ ಸಂಯುಕ್ತಾಶ್ರಯದಲ್ಲಿ ನಗರದ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಮಂಗಳವಾರ ಸಂಜೆ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ವಿಷಯದಲ್ಲೂ ಹೆಣ್ಣು ಮಕ್ಕಳು ಮುಂದೆ ಬರುತ್ತಿದ್ದಾರೆ. ಬಳ್ಳಾರಿ ನಗರವನ್ನು ಸ್ವಚ್ಛವಾಗಿಡಲು ನಗರ ಪಾಲಿಕೆ ಹಮ್ಮಿಕೊಂಡಿರುವ ಸ್ವಚ್ಚ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನಕ್ಕೆ ತಾವು ಕೂಡ ನಮ್ಮೊಂದಿಗೆ ಕೈ ಜೋಡಿಸಿ ಎಂದು ತಿಳಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಮ್ಯೂಜಿಕಲ್ ಚೇರ್ಸ್, ಲೆಮನ್ ಸ್ಪೂನ್ ಮತ್ತು ತ್ರೋಬಾಲ್ ಆಟಗಳನ್ನು ನಡೆಸಲಾಯಿತು ಮತ್ತು ದಾಂಡಿಯಾ ನೃತ್ಯವನ್ನು ಸಹ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಅಸ್ಮಾ ಖಾತೂನ್, ಗೃಹರಕ್ಷಕದಳ ಸಮಾದೇಷ್ಟ ಎಂ.ಎ.ಷಕೀಬ್, ಟಿ.ನಾಗವೇಣಿ, ಎಸ್.ವಾಣಿ , ಮರಿಯಾ, ಪೌರರಕ್ಷಣೆ ಮುಖ್ಯ ವಾರ್ಡನ್ ಎನ್.ಎಸ್.ಲಕ್ಷ್ಮೀನರಸಿಂಹ, ಜಿಲ್ಲಾ ಗೃಹರಕ್ಷಕದಳದ ಭೋದಕರಾದ ಜಿ.ಹೆಚ್.ಲೋಕೇಶ್,ಗೃಹರಕ್ಷಕದಳದ ಜೆ.ಸುರೇಶ,ಎರ್ರಮ್ಮ,ಎಂ.ಸುಜಾತ ಹಾಗೂ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here