ಕೂಡ್ಲಿಗಿ ಟಾಸ್ಕ್ ಪೋರ್ಸ್ ಸಭೆ:”ಮಾಸ್ಕ್”ಧರಿಸದಿದ್ದಲ್ಲಿ ದಂಡ-ತಹಶಿಲ್ದಾರ್ ಎಸ್.ಮಹಾಬಲೇಶ್ವರ

0
90

ವಿಜಯ ನಗರ ಜಿಲ್ಲೆ ಕೂಡ್ಲಿಗಿ-ರಾಜ್ಯಾಧ್ಯಂತ ಕೊರೊನಾ ಎರಡನೇ ಅಲೆ ಹರಡುತ್ತಿದ್ದು
ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ,ಕೊರೊನಾ ಹರಡುವಿಕೆಯನ್ನು ತಡೆಯಲು ಎಲ್ಲರೂ ಖಡ್ಡಾಯವಾಗಿ “ಮಾಸ್ಕ್”ಧರಿಸಬೇಕಾಗಿದೆ. ಅಂಗಡಿಗಳಲ್ಲಿ ಮಾಸ್ಕ್ ಹಾಕಿಕೊಳ್ಳುವಂತೆ ವ್ಯಾಪಾರಿಗಳಿಗೆ ಸೂಚಿಸಬೇಕು,”ಮಾಸ್ಕ್”ಧರಿಸದಿದ್ದರೆ 100 ₹ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು. ತಹಶಿಲ್ದಾರರಾದ ಎಸ್. ಮಹಬಲೇಶ್ವರ ತಿಳಿಸಿದರು.
ಅವರು ತಾಲ್ಲೂಕು ಕಚೇರಿಯಲ್ಲಿ ಮಾ12ರಂದು ನಡೆದ ತಾಲ್ಲೂಕು ಮಟ್ಟದ “ಟಾಸ್ಕ್ ಪೋರ್ಸ್‌ ಸಮಿತಿ” ಸಭೆಯಲ್ಲಿ ಮಾತನಾಡಿದರು.
ಎರಡನೇ ಬಾರಿ ಕೊರೊನಾ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ಮುಂಚೂಣಿ ವಿವಿಧ ಇಲಾಖೆಗಳ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸೂಚಿಸಿದರು.ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರು ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ಸಾರ್ವಜನಿಕರಿಗೆ ಲಸಿಕೆ ಹಾಕಲಾಗುತ್ತಿದ್ದು,60 ವರ್ಷ ಮೇಲ್ಪಟ್ಟವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು. ಈ ಕುರಿತು ಸ್ಥಳೀಯ ಆಡಳಿತಗಳು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು.ಲಸಿಕೆ ಹಾಕಿಸಲು ಅಂಗನವಾಡಿ,ಆಶಾ ಕಾರ್ಯಕರ್ತೆಯರು ಪ್ರತಿ ದಿನ ತಲಾ ಕನಿಷ್ಠ 5 ಜನರನ್ನು ಮನವೊಲಿಸಿ ಕರೆ ತರಲು ಹೇಳಿ ಎಂದು,ಶಿಶು ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಧಿಕಾರಿಗೆ ಸೂಚನೆ ನೀಡಿದರು.ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಖಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ,ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ ಮಾತನಾಡಿ,ಗ್ರಾಮೀಣ ಭಾಗಗಳಲ್ಲಿ ಜನರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರಲು. ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವಂತೆ ಆಯಾ ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ತಾಲ್ಲೂಕು ಆರೋಗ್ಯಧಿಕಾರಿ ಡಾ. ಷಣ್ಮುಖ ನಾಯ್ಕ್, ಕೊರೊನಾ ನೋಡಲ್ ಅಧಿಕಾರಿ ಡಾ. ಕೊಟ್ರೇಶ್,ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಿ.ಪಕೃದ್ಧೀನ್ ಸಾಬ್,ಸಿಪಿಐ ವಸಂತ ಅಸೋದೆ, ಶಿಶು ಅಭಿವೃದ್ಧಿ ಆಧಿಕಾರಿ ನಾಗನಗೌಡ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

✍️ ಬಡಿಗೇರ್ ನಾಗರಾಜ್. ಕೂಡ್ಲಿಗಿ

LEAVE A REPLY

Please enter your comment!
Please enter your name here