ಬಳ್ಳಾರಿ ರೂರಲ್ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕೋವಿಡ್ ರೋಗಿಗಳಿಗೆ ಉಚಿತ ಔಷಧ

0
109

ಬಳ್ಳಾರಿ,ಜೂ.05 : ಬಳ್ಳಾರಿ ರೂರಲ್ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳ ಉಪಯೋಗಕ್ಕಾಗಿ ಉಚಿತವಾಗಿ ರೂ.30 ಸಾವಿರ ಬೆಲೆಯ ಔಷಧಿಗಳನ್ನು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.
ಔಷಧಿಗಳನ್ನು ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ ಎಲ್ಲಾ ಕಡೆ ಕೋವಿಡ್ ಹೆಚ್ಚಾಗಿ ಹರಡುತ್ತಿದ್ದು, ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಚಿತವಾಗಿ ಔಷಧಿಗಳನ್ನು ನೀಡಿರುವುದು ಕೋವಿಡ್ ರೋಗಿಗಳಿಗೆ ನೆರವಾಗಲಿದೆ ಎಂದರು. ಬಳ್ಳಾರಿ ರೂರಲ್ ಕೇಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ ಸಹಾಯಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ್ ಶ್ರವಣ್, ಜಿಪಂ ಸಿಇಒ ಕೆ.ಆರ್.ನಂದಿನಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎ.ಷಕೀಬ್, ಬಳ್ಳಾರಿ ರೂರಲ್ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್‍ನ ಲಕ್ಷ್ಮಿಕಾಂತ್, ವರಹ ಮೆಡಿಕಲ್ ಸ್ಟೋರ್ಸ್‍ನ ಸಿ.ಕೆ.ಪ್ರಕಾಶ್, ಪ್ರಕಾಶ್ ಮೆಡಿಕಲ್ಸ್‍ನ ಪ್ರವೀಣ್ ಕುಮಾರ್, ರೇಣುಕಾ ಮೆಡಿಕಲ್‍ನ ಸಿ.ಅಬ್ದುಲ್ ಷುಕುರ್, ನ್ಯೂ ಸಾಗರ್ ಮೆಡಿಕಲ್‍ನ ಸಿ.ಕೆ.ಮೈನುದ್ದೀನ್, ಶಿಷಾ ಮೆಡಿಕಲ್‍ನ ಸತ್ಯಯನಾರಾಯಣ, ಯುನೈಟೆಡ್ ಮೆಡಿಕಲ್‍ನ ಕಿಷನ್ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here