ವಿಜಯನಗರ ಜಿಲ್ಲೆಯಲ್ಲಿ ಮಹಾಮಾನವತಾವಾದಿ ಶ್ರೀ ಬಸವೇಶ್ವರ ಜಯಂತೋತ್ಸವ ಮೇ 03ರಂದು

0
108

ಹೊಸಪೇಟೆ(ವಿಜಯನಗರ),ಏ.30 : ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಹೊಸಪೇಟೆ ಸಂಯುಕ್ತಾಶ್ರಯದಲ್ಲಿ ಮಹಾಮಾನವತಾವದಿ ಶ್ರೀ ಬಸವೇಶ್ವರ ಜಯಂತೋತ್ಸವವನ್ನು ಮೇ 03ರಂದು ಬೆಳಗ್ಗೆ 8.30ಕ್ಕೆ ಹೊಸಪೇಟೆ ನಗರದ ಬಸವೇಶ್ವರ ಬಡಾವಣೆಯ ಬಸವ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿಗಳು ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಅನಿರುದ್ಧ್ ಪಿ.ಶ್ರವಣ್ ಅವರು ತಿಳಿಸಿದ್ದಾರೆ.
ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರು ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಮೆರವಣಿಗೆಗೆ ಚಾಲನೆ ನೀಡಿ ಉದ್ಘಾಟಿಸಲಿದ್ದು, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಅಧ್ಯಕ್ಷತೆ ಮತ್ತು ಘನ ಉಪಸ್ಥಿತಿ ವಹಿಸಲಿದ್ದಾರೆ.
ಸಂಸದರಾದ ವೈ.ದೇವೆಂದ್ರಪ್ಪ, ಜಿ.ಎಂ.ಸಿದ್ದೇಶ್ವರ, ಸೈಯದ್ ನಾಸಿರ್ ಹುಸೇನ್, ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ, ಎನ್.ವೈ ಗೋಪಾಲಕೃಷ್ಣ, ಭೀಮನಾಯ್ಕ ಎಲ್.ಬಿ.ಪಿ, ಅಲ್ಲಂ ವೀರಭದ್ರಪ್ಪ, ಜಿ.ಕರುಣಾಕರರೆಡ್ಡಿ, ಎಸ್.ವಿ.ರಾಮಚಂದ್ರ, ಡಾ.ಚಂದ್ರಶೇಖರ್ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ನಗರಸಭೆಯ ಅಧ್ಯಕ್ಷರಾದ ಸುಂಕಮ್ಮ, ಹುಡಾ ಅಧ್ಯಕ್ಷರಾದ ಅಶೋಕ್ ಜೀರೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿಯ ಬಸವ ಯೋಗಾಶ್ರಮದ ಪೂಜ್ಯ ಬಸವೇಶ್ವರಿ ಮಾತಾಜಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಜಯಂತಿಯ ಮೆರವಣಿಗೆಯು ಬೆಳಗ್ಗೆ 10.30ರಿಂದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಶಾನಭಾಗ ವೃತ್ತದ ಮೂಲಕ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಮಠದವರೆಗೆ ಹೊರಡಲಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಅನಿರುದ್ಧ್ ಪಿ.ಶ್ರವಣ್ ಹಾಗೂ ಸಮುದಾಯದ ಭಾಂದವರು ಉಪಸ್ಥಿತರಿರಲಿದ್ದಾರೆ.

LEAVE A REPLY

Please enter your comment!
Please enter your name here