ಜೀವ “ಜ್ಯೋತಿ” ತೊರೆದ ಬಳಿಕ ದೇಹ ಬದುಕೀತೆ..

0
178

ನಿನ್ನ ಮದುವೆ ಜಾತ್ರೆ ನಡೆದಿದೆ ನಾನೇಯಿಲ್ಲದೆ..
ನನ್ನ ಅಂತಿಮ ಯಾತ್ರೆ ಹೊರಟಿದೆ ನೀನೇಯಿಲ್ಲದೆ..

ಕೊರಳಿಗೇರಿವೆ ಗಂಧ ಸೂಸುವ ಹೂವಿನ ಹಾರಗಳು..
ಬರಡಾದ ಮೋಡಗಳು ಬಿಕ್ಕುತಿಹವೆ ಸೋನೆಯಿಲ್ಲದೆ..

ನನ್ನ ಹಿಂದೆ ಸಾಲಾಗಿ ನಡೆದಿದೆ ಜನರ ಸಂದಣಿ..
ನಕಲಿ ನಗುವು ಮುಖದ ಮೇಲಿದೆ ಬೇನೆಯಿಲ್ಲದೆ..

ನಾದಸ್ವರಗಳು ಮೊಳಗುತಿಹವು ನಿನ್ನ ಹಾದಿಗೆ..
ಎದೆಯ ಬಡಿತ ಮೌನವಾಗಿದೆ ನೋವೆಯಿಲ್ಲದೆ..

ಜೀವ “ಜ್ಯೋತಿ” ತೊರೆದ ಬಳಿಕ ದೇಹ ಬದುಕೀತೆ..
ವಿರಹಗೀತೆಯು ಕಹಿಯ ಹರವಿತೆ ಜೇನೆಯಿಲ್ಲದೆ.

ಜ್ಯೋತಿ ಬಿ ದೇವಣಗಾವ
ಶಹಾಪುರ ಯಾದಗಿರಿ

LEAVE A REPLY

Please enter your comment!
Please enter your name here