ಮಾರ್ಚ್ 15, ಹಿರಿಯ ಪತ್ರಕರ್ತ, ಅಕ್ಷರ ಬ್ರಹ್ಮ ರವಿ ಬೆಳಗೆರೆಯವರ ಜನುಮ ದಿನ.

0
156

ಮಾರ್ಚ್ 15, ಕರ್ನಾಟಕ ಕಂಡ ಅತ್ಯುತ್ತಮ ಲೇಖಕ, ಹಿರಿಯ ಪತ್ರಕರ್ತ ಮತ್ತು”ಹಾಯ್ ಬೆಂಗಳೂರು” ವಾರಪತ್ರಿಕೆ ಸಂಪಾದಕ ರವಿಬೆಳಗೆರೆಯವರ ಹುಟ್ಟಿದ ಹಬ್ಬ.

15 ಮಾರ್ಚ್ 1958, ಬಳ್ಳಾರಿಯಲ್ಲಿ ಜನಿಸಿದ ಅವರು, ಬೆಂಗಳೂರಿಗೆ ಬಂದಿದ್ದು ಅನಿರೀಕ್ಷಿತವಾಗಿ. ಆಗ ಅವರ ಬಳಿ ಇದ್ದಿದ್ದು ಕೇವಲ 380-00, ಒಂದು ಮೋಟಾರ್ ಬೈಕ್ ಮಾತ್ರ.

ಕಪ್ಪು ಬಿಳುಪಿನ ಸುಂದರಿಯೆಂದೇ ಪ್ರಸಿದ್ಧವಾದ “ಹಾಯ್ ಬೆಂಗಳೂರು” ಎಂಬ ವಾರಪತ್ರಿಕೆ, ಆರಂಭದಿಂದ ಇಲ್ಲಿಯವರೆಗೂ ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರಕಟಿಸದೇ ಕೇವಲ ಓದುಗರನ್ನು ಗಮನದಲ್ಲಿಟ್ಟುಕೊಂಡು, ಅವರು ನೀಡಿದ ದುಡ್ಡಿಗೆ ಮೋಸವಾಗದಂತೆ ಪತ್ರಿಕೆಯನ್ನು ಹೊರತರುವುದು ನಿಜಕ್ಕೂ ಕಷ್ಟದ ಕೆಲಸ.

ಇಡೀ ಕನ್ನಡ ಪತ್ರಿಕೋದ್ಯಮದಲ್ಲಿ ರವಿಬೆಳಗೆರೆಯವರು ಎದುರಿಸಿದ ಬೆದರಿಕೆ ಕರೆಗಳು ಹಾಗೂ ವ್ಯಾಜ್ಯ (ಕೇಸ್) ಗಳನ್ನು ಬಹುಶಃ ಯಾವ ಪತ್ರಿಕೆಯ ಸಂಪಾದಕರೂ ಎದುರಿಸಿಲ್ಲ.

ಪತ್ರಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭದಿಂದಲೂ ನಿವೇದಿತಾ, ಆರ್ ಟಿ ವಿಠ್ಠಲ ಮೂರ್ತಿ, ಶೃಂಗೇಶ್ ಸೇರಿದಂತೆ ಹಲವರು ಶ್ರಮ ವಹಿಸಿದ್ದಾರೆ. ನಂತರ ರವಿಬೆಳಗೆರೆಯವರಿಗೆ ಲೋಕೇಶ್ ಕೊಪ್ಪದ್, ರವಿ ಕುಲಕರ್ಣಿ, ಸತೀಶ್ ಬಿಲ್ಲಾಡಿ, ಕಾಂತರಾಜ್ ಅರಸ್, ವಸಂತ್ ಗಿಳಿಯಾರ್ ಸೇರಿದಂತೆ ಹಲವರು ಸಾಥ್ ನೀಡಿದರು.

ರವಿ ಬೆಳಗೆರೆಯವರು ಹಾಯ್ ಬೆಂಗಳೂರ್ ಪತ್ರಿಕೆಯಲ್ಲದೇ, ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಜೊತೆಗೆ ಅವರು ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ರವಿಬೆಳಗೆರೆ ‘ಹಾಯ್ ಬೆಂಗಳೂರ್’ ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ರವಿ ಬೆಳಗೆರೆಯವರ ಕಥಾ ಸಂಕಲನ :

ದಾರಿ, 1980, ಪಾ.ವೆಂ. ಹೇಳಿದ ಕಥೆ, 1995, ಒಟ್ಟಾರೆ ಕಥೆಗಳು, 2001, ಕಾದಂಬರಿ 2003, ಗಾಡ್‌ಫಾದರ್ , ಮಾರ್ಚ್ 2005, ಕಾಮರಾಜ ಮಾರ್ಗ, ನವೆಂಬರ್ 2010, ಹಿಮಾಗ್ನಿ, 2012, ಅನುವಾದ : ವಿವಾಹ, 1983, ನಕ್ಷತ್ರ ಜಾರಿದಾಗ, 1984, ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್ 1999, ಕಂಪನಿ ಆಫ್ ವಿಮೆನ್, ಜನವರಿ 2000, ಟೈಂಪಾಸ್, ಜನವರಿ 2001, ರಾಜ ರಹಸ್ಯ, ನವೆಂಬರ್ 2002, ಹಂತಕಿ ಐ ಲವ್ ಯೂ, ಜನವರಿ 2007, ದಂಗೆಯ ದಿನಗಳು, ಮಾರ್ಚ್ 2008,

ದೇಶ-ಇತಿಹಾಸ-ಯುದ್ಧ :

ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999, ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005, ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007, ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002, ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003, ಡಯಾನಾ, ಜನವರಿ 2007, ನೀನಾ ಪಾಕಿಸ್ತಾನ, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ, ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು, ಮುಸ್ಲಿಂ.

ಜೀವನ ಕಥನ :

ಪ್ಯಾಸಾ, 1991, ಪಾಪದ ಹೂವು ಫೂಲನ್, ಆಗಸ್ಟ್ 2001, ಸಂಜಯ, 2000, ಚಲಂ (ಅನುವಾದ) ಮಾರ್ಚ್ 2008,

ಹತ್ಯಾಕಥನ :

ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991
ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1999 ರಂಗವಿಲಾಸ್ ಬಂಗಲೆಯ ಕೊಲೆಗಳು ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007, ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012, ಭೂಗತ ಇತಿಹಾಸ : ಪಾಪಿಗಳ ಲೋಕದಲ್ಲಿ ಭಾಗ -1, 1995, ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997, ಭೀಮಾ ತೀರದ ಹಂತಕರು, ಮೇ 2001, ಪಾಪಿಗಳ ಲೋಕದಲ್ಲಿ, 2005, ಡಿ ಕಂಪನಿ, 2008

ಬದುಕು :

ಖಾಸ್‌ಬಾತ್ 96, 1997, ಖಾಸ್‌ಬಾತ್ 97, ಸೆಪ್ಟಂಬರ್ 1997; ಖಾಸ್‌ಬಾತ್ 98, ಸೆಪ್ಟಂಬರ್ 1998, ಖಾಸ್‌ಬಾತ್ 99, ಅಕ್ಟೋಬರ್ 2003; ಖಾಸ್‌ಬಾತ್ 2000, ಅಕ್ಟೋಬರ್ 2003, ಖಾಸ್‌ಬಾತ್ 2001, ಜನವರಿ 2007,
ಖಾಸ್‌ಬಾತ್ 2002, ಜನವರಿ 2008, ಖಾಸ್‌ಬಾತ್ 2003,

ಅಂಕಣ ಬರಹಗಳ ಸಂಗ್ರಹ :

ಜೀವನ ಪಾಠ : ಬಾಟಮ್ ಐಟಮ್ ಭಾಗ 1, ಫೆಬ್ರವರಿ 2002, ಬಾಟಮ್ ಐಟಮ್ 2, ಅಕ್ಟೋಬರ್ 2003, ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006, ಪ್ರೀತಿ ಪತ್ರಗಳು :ಲವಲವಿಕೆ -1, ಡಿಸೆಂಬರ್ 1998 ಲವಲವಿಕೆ -2, ಸೆಪ್ಟಂಬರ್ 2004, ಲವಲವಿಕೆ -3, ಲವಲವಿಕೆ -4

ಕವನ ಸಂಕಲನ : ಅಗ್ನಿಕಾವ್ಯ, 1983

ಇತರೆ : ಕೇಳಿ, ಜೂನ್ 2001, ಮನಸೇ ಆಡಿಯೋ ಸಿಡಿ ಜನವರಿ 2007, ಫಸ್ಟ್ ಹಾಫ್, ಅಮ್ಮ ಸಿಕ್ಕಿದ್ಲು, 2012, ಇದು ಜೀವ: ಇದುವೇ ಜೀವನ, 2012, ಏನಾಯ್ತು ಮಗಳೇ, ಡಿಸೆಂಬರ್ 2013.

ಪ್ರಶಸ್ತಿಗಳು :

1984 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿವಾಹ (ಸೃಜನೇತರ), 1990ರಲ್ಲಿ ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಂಧ್ಯ (ಕತೆ), 1997ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಾ.ವೆಂ. ಹೇಳಿದ ಕತೆ (ಸಣ್ಣ ಕತೆ) 2004ರಲ್ಲಿ ಶಿವರಾಮ ಕಾರಂತ ಪುರಸ್ಕಾರ ನೀ ಹಿಂಗ ನೋಡಬ್ಯಾಡ ನನ್ನ (ಕಾದಂಬರಿ), 2005ರಲ್ಲಿ ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ ಪ್ರಾರ್ಥನಾ ಶಾಲೆ (ಕೇಂದ್ರ ಸರ್ಕಾರ), 2008ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಜೀವಮಾನದ ಸಾಧನೆ 2011 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ರವಿಬೆಳಗೆರೆಯವರು ಭಾಜನರಾಗಿದ್ದಾರೆ.

ಹಿರಿಯ ಪತ್ರಕರ್ತ ರವಿ ಬೆಳಗೆರೆಯವರಿಗೆ ಮತ್ತೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.

ಮುರಳೀಧರ ಹೆಚ್ ಸಿ
ಹವ್ಯಾಸಿ ಬರಹಗಾರರು, ಶಿವಮೊಗ್ಗ.

LEAVE A REPLY

Please enter your comment!
Please enter your name here