ಕ್ರೀಡೆಯಿಂದ ದೈಹಿಕ ಆರೋಗ್ಯ ಕಾಪಾಡಲು ಸಾಧ್ಯ : ಹನುಮಂತರಾಯ

0
93

ದಾವಣಗೆರೆ: ಮಾ.15:ಒಂದು ಆಟವನ್ನು ಆಯ್ಕೆಮಾಡಿ ಅದನ್ನು ಜೀವನದ ಒಂದು ಭಾಗವನ್ನಾಗಿ ರೂಪಿಸಿಕೊಂಡು ದಿನನಿತ್ಯ ಅಭ್ಯಾಸ ಮಾಡಿದಲ್ಲಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ದಾವಣಗೆರೆ ವಿಶ್ವ ವಿದ್ಯಾಲಯ, ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇಂದು ಏರ್ಪಡಿಸಲಾಗಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ದಾವಣಗೆರೆ ವಲಯ ಮತ್ತು ಅಂತರ ವಲಯದ ಬಾಲ್ ಬ್ಯಾಡ್ಮಿಂಟನ್ ಪುರುಷರ ಮತ್ತು ಮಹಿಳೆಯರ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡೆ ಒಂದು ಹವ್ಯಾಸವಾಗಬೇಕು. ಪ್ರತಿನಿತ್ಯ 5 ಕಿ.ಮಿ ರನ್ನಿಂಗ್ ಮಾಡಿದರೆ ದೀರ್ಘ ಕಾಲದವರೆಗೆ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದಲ್ಲದೆ, ಧೀರ್ಘಾಯುಷಿಗಳಾಗಬಹುದು ಎಂದರು.
ದಿನನಿತ್ಯ ದೈಹಿಕ ವ್ಯಾಯಮ ಮಾಡಿದಲ್ಲಿ ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿರುತ್ತದೆ ಹಾಗೂ ಕ್ರೀಡೆಯಿಂದ ಖಿನ್ನತೆ ದೂರವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ತು.ಕ. ಶಂಕರಯ್ಯ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಎಸ್.ಬಿ.ಐ. ಬ್ಯಾಂಕ್‍ನ ಶಾಖಾ ವ್ಯವಸ್ಥಾಪಕರಾದ ದಿನೇಶ್ ಚಂದ್ರ ತ್ರಿಪಾಠಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ವೀರೇಂದ್ರ, ಪ್ರೊ.ಸುನಿತ, ಪ್ರೊ.ಭೀಮಣ್ಣ ಸುಣಗಾರ, ಪ್ರೊ. ಸದಾಶಿವ, ಮಹ್ಮದ್ ಖಾನ್, ಪ್ರೊ. ಶಂಕರ್ ಶೀಲಿ, ಡಾ.ತಿಪ್ಪಾರೆಡ್ಡಿ, ಡಾ.ಪ್ರಕಾಶ ಹಲಗೇರಿ, ಪ್ರೊ.ಗೌರಮ್ಮ, ದಾದಪೀರ್ ನವಿಲೇಹಾಳ್, ಡಾ.ಮಹೇಶ್ ಪಾಟೀಲ್, ಶಶಿಕಲಾ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here