ತಮಿಳುನಾಡು ವಿಧಾನಸಭಾ ಚುನಾವಣೆ: ಬಳ್ಳಾರಿ ಜಿಲ್ಲೆಯಿಂದ 900 ಜನ ಗೃಹರಕ್ಷಕ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ

0
116

ಬಳ್ಳಾರಿ,ಏ.3 : ಏ.6ರಂದು ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಬಳ್ಳಾರಿ ಜಿಲ್ಲೆಯಿಂದ 900 ಜನ ಗೃಹರಕ್ಷಕ ಸಿಬ್ಬಂದಿಯನ್ನು ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಿಂದ ಶುಕ್ರವಾರ ಕಳುಹಿಸಿಕೊಡಲಾಯಿತು.
ಡಿಜಿಪಿ ಮತ್ತು ಹೋಂಗಾಡ್ರ್ಸನ ಕಮಾಂಡೆಂಟ್ ಜನರಲ್ ಆದೇಶದ ಮೇರೆಗೆ ಬಳ್ಳಾರಿ ಜಿಲ್ಲೆಯ ವಿವಿಧ ಘಟಕಗಳಿಂದ ಆಗಮಿಸಿದ 900 ಜನ ಗೃಹರಕ್ಷಕರು ತಮಿಳುನಾಡು ರಾಜ್ಯದ ಮಧುರೈ ನಗರಕ್ಕೆ 250 ಜನ ಮತ್ತು ಸೇಲಂ ಜಿಲ್ಲೆಗೆ 650 ಜನ ಗೃಹರಕ್ಷಕ ಸಿಬ್ಬಂದಿಯನ್ನು ತಮಿಳುನಾಡುನಿಂದ ಆಗಮಿಸಿದ 18 ಸರ್ಕಾರಿ ಬಸ್ಸುಗಳಲ್ಲಿ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಸಮಾದೇಷ್ಟರಾದ ಎಂ.ಎ.ಷಕೀಬ್ ಅವರು ತಮಿಳುನಾಡು ರಾಜ್ಯದ ಚುನಾವಣಾ ಕರ್ತವ್ಯಕ್ಕೆ ತೆರಳುವ ಗೃಹರಕ್ಷಕ ಸಿಬ್ಬಂದಿಗೆ ಚುನಾವಣಾ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಚುನಾವಣಾ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಒಳ್ಳೆಯ ಹೆಸರು ತರುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಮಿಳುನಾಡು ರಾಜ್ಯದ ಒಬ್ಬ ಪೊಲೀಸ್ ಇನ್ಸ್‍ಪೆಕ್ಟರ್, ಒಬ್ಬ ಪೊಲೀಸ್ ಸಬ್ ಇನ್ಸ್‍ಪೆಕ್ಟರ್, 13 ಜನ ಪೊಲೀಸ್ ಪೇದೆಗಳು, 36 ಜನ ಬಸ್ ಚಾಲಕರು ಮತ್ತು 900 ಜನ ಗೃಹರಕ್ಷಕರು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here