ಗ್ರಾಮವಾಸ್ತವ್ಯ:ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಸಿ ಮಾಲಪಾಟಿ ಸಭೆ,ತಿಮ್ಮಲಾಪುರ ಗ್ರಾಮದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಡಿಸಿ ಮಾಲಪಾಟಿ

0
158

ಬಳ್ಳಾರಿ/ಹೊಸಪೇಟೆ,ಫೆ.16: ಫೆ.20ರಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಮ್ಮಲಾಪುರದಲ್ಲಿ ನಡೆಸಲು ಉದ್ದೇಶಿಸಿರುವ ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಸಹಾಯಕ ಆಯುಕ್ತರು,ತಹಸೀಲ್ದಾರರೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಅಪರ‌ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು.
ಸಭೆಯಲ್ಲಿ ತಿಮ್ಮಲಾಪುರ ಗ್ರಾಮಗಳ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಹಾಗೂ ಸರ್ಕಾರಿ ಜಮೀನು ಆಕ್ರಮ ಒತ್ತುವರಿ ತೆರವುಗೊಳಿಸುವಿಕೆ, ಪಿಂಚಣಿ ಸೌಲಭ್ಯದ, ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ, ಆಧಾರ್ ಕಾರ್ಡ್ ನೋಂದಣಿ ಕುರಿತು ಸಮಸ್ಯೆಗಳು ಇದ್ದಲ್ಲಿ ಸೂಕ್ತ ಪರಿಹಾರ ಒದಗಿಸುವುದು, ಗ್ರಾಮದಲ್ಲಿ ಸ್ಮಶಾನ ಲಭ್ಯತೆಯ ಪರಿಶೀಲನೆ, ಗ್ರಾಮದ ವಸತಿ ರಹಿತ ಜನರಿಗೆ ವಸತಿ ಸೌಲಭ್ಯ ಒದಗಿಸುವುದು, ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಒದಗಿಸುವುದು ಹಾಗೂ ಇತರೆ ಸರ್ಕಾರದ ಯೋಜನೆಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ಬಗ್ಗೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾಹಿತಿಯನ್ನು ಪಡೆದರು.
ಆರೋಗ್ಯ ಇಲಾಖೆಗೆ ಹೆಲ್ತ್ ಕ್ಯಾಂಪ್‍ನಲ್ಲಿ ದಂತ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಮಲಪಾಟಿ ಅವರು ಸೂಚನೆ ನೀಡಿದರು. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ತಿಮ್ಮಲಾಪುರದ ಶಾಲೆಯ ಆವರಣದಲ್ಲಿ ಸಸಿ ನಡೆಸಲು ಸೂಚಿಸಿದರು ಹಾಗೂ ಸಭೆಯ ನಂತರ ಸಂಜೆ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಲು ಸೂಚಿಸಿದರು.
ಗ್ರಾಮ ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿದ ಜಾಗಕ್ಕೆ ಆಯುಕ್ತರರು, ತಹಶಿಲ್ದಾರರು, ತಾಲೂಕು ಪಂಚಾಯತ್ ಅಧಿಕಾರಿಗಳು, ಅರಣ್ಯ ಇಲಾಖೆಯವರು, ಶಿಕ್ಷಣ ಇಲಾಖೆಯವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯವರು, ಸಮಾಜ ಇಲಾಖೆಯವರು, ಕೃಷಿ ಇಲಾಖೆಯವರು, ಆರೋಗ್ಯ ಇಲಾಖೆಯವರು, ಕಂದಾಯ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ 10ರಿಂದ 12ಗಂಟೆಯವರೆಗೂ ಗ್ರಾಮದ ಪ್ರತಿ ಮನೆಗಳಿಗೆ ಸಂಚರಿಸಿ ಸಾರ್ವಜನಿಕರ ಅಹವಾಲುಗಳನ್ನು ಪಡೆಯಲು ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವನಾಥ,
ತಾಲೂಕು ಪಂಚಾಯತ್ ಇಒ ವಿಶ್ವನಾಥ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಯಾದ ಕಿಶೋರ್, ಆರೋಗ್ಯ ಇಲಾಖೆಯ ಡಾ.ಭಾಸ್ಕರ್, ಪಶುಸಂಗೋಪನೆಯ ಅಧಿಕಾರಿಯಾದ ಡಾ.ಅಕ್ತರ್, ಸಿ.ಡಿ.ಪಿ.ಓ. ರಾದ ಸಿಂಧೂ, ಶಿರಸ್ತೇದಾರರಾದ ರಮೇಶ್, ಶ್ರೀಧರ್, ಮರಿಯಮ್ಮನಹಳ್ಳಿಯ ಆರ್.ಐ.ರರಾದ ಅಂದಾನಗೌಡ, ಚಿಲಕನಹಟ್ಟಿಯ ಪಿಡಿಓ ಮಂಜುಳಾ ಬಾಯಿ ಹಾಗೂ ಇತರೆ ಅಧಿಕಾರಿಗಳು ಇದ್ದರು.