ಕೊರೋನಾ ಲಸಿಕೆ ಪಡೆಯುವುದಕ್ಕೂ ಮುನ್ನ ರಕ್ತದಾನ ಮಾಡಿ: ಅಮರೇಗೌಡ ಮಲ್ಲಾಪೂರ

0
142

ಕೊರೋನಾ ಲಸಿಕೆ ಪಡೆದು ನಂತರ 28 ದಿನಗಳವರೆಗೂ ರಕ್ತದಾನ ಮಾಡುವದಕ್ಕೆ ಅವಕಾಶವಿಲ್ಲದ ಕಾರಣ ಲಸಿಕೆ ಪಡೆಯುವ ಮೊದಲು ನಿಮ್ಮ ಹತ್ತಿರ ರಕ್ತ ಭಂಡಾರಗಳಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ದಿನೇ ದಿನೇ ಹೆಚ್ಚುತ್ತಿರುವ ಕೊರೋನ ಪಾಸಿಟಿವ್ ಹಿನ್ನೆಲೆಯಲ್ಲಿ ಸರಕಾರದ ಸೂಚನೆಯಂತೆ ಕೊರೋನಾ ತಡೆಗಟ್ಟಲು ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದು ಅನಿವಾರ್ಯ ಆಗಿದೆ. ಆದರೆ ಮುಂದಿನ ದಿನಗಳಲ್ಲಿ
ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ, ವಯಸ್ಕರಿಗೆ, ಅಪಘಾತಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರಕ್ತ ಕೊರತೆ ಆಗದಂತೆ ಲಸಿಕೆ ಪಡೆಯುವ ಮೊದಲು ರಕ್ತ ದಾನ ಮಾಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ..

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here