ನಾದಪ್ರಿಯಾ ಪ್ರಚಂಡ ಮಧುರ ಗಾನಗಂಧರ್ವ, ಕೋಗಿಲೆಂದು ಹೆಸರು ಪಡೆದ: ಶಿವಾನಿ ಕೊಪ್ಪ.

0
179

“ಸಂಗೀತ ಅನ್ನುವುದು ಯಾರಿಗೆ ಯಾವ ಸಮಯದಲ್ಲಿ
ಸಂಗೀತ ಶಾರದಾ ಮಾತೆ ಕೈಹಿಡಿದು ಕರೆದೊಯ್ಯುತ್ತಾಳೆ
ಎಂದರೆ! ಯಾರಿಗೂ ಸಹ ತಿಳಿದಾಗೆ, ನಮಗೆ
ಏನಾದರೊಂದು ಹೃದಯಕ್ಕೆ ಆತಂಕ ಆದಾಗ ನಾವು ಸಂಗೀತವನ್ನು ಆಲಿಸಿದರೆ ಸ್ಪಲ್ಪ ಮಟ್ಟಿಗೆ ನಮ್ಮಲ್ಲಿರುವ
ಸಂಕಷ್ಟಗಳು ದೂರಾಗುತ್ತವೆಂದು ನಾವು ಹೇಳ ಬಹುದು.
ಏಕೆಂದರೆ! ಈ ಸಂಗೀತದಲ್ಲಿ ಇರುವ ಅಪಾರವಾದ ಶಕ್ತಿ,
ಸಂಗೀತದಲ್ಲಿರುವ ಪ್ರತಿಯೊಂದು ರಾಗ ಸ್ವರಗಳು, ಅದರ ಕಂಪನಗಳು, ಹಾಗೂ ಸಂಗೀತದಲ್ಲಿರುವ ಪತ್ರಿಕಾರ ರೂಪಾಂತರಗಳು, ಅದರಲ್ಲಿರುವ ನಾದ ಬ್ರಹ್ಮಗಳು ನಮ್ಮ ಕಿವಿಗೆ ಅಪ್ಪಳಿದಾಗ ಎಷ್ಟು ಸಂತೋಷ ಆಗುತ್ತದೆ ಅಂದರೆ ಸಂಗೀತವನ್ನು ಕಲಿತವರಿಗೆ ಹಾಗೂ ಅದರ ಬಗ್ಗೆ ತಿಳಿದು
ಕೊಳ್ಳುವುದರ ಜೊತೆಗೆ ಅರಿತು ಕೊಂಡವರಿಗೆ,
ಹಾಗೂ ಸಂಗೀತವನ್ನು ಆಲಿಸಿದ್ದವರಿಗೆ,
ಅದರ ಬಗ್ಗೆ ಆಚಾರ ವಿಚಾರಧಾರೆಗಳನ್ನು ತಿಳಿದು ಕೊಂಡವರಿಗೆ ಸಂಗೀತದ ಮಹಿಮೆ ಮಾತ್ರ ಗೊತ್ತು.
ಇನ್ನೂ “ಉದಾಹರಣೆ:
‘ಕಸ್ತೂರಿ ವಾಸನೆಯನ್ನು’ ತೆಗೆದುಕೊಂಡವರಿಗೆ ಮಾತ್ರ ಗೊತ್ತು,”ಕಸ್ತೂರಿವಾಸನೆ” .
ನಮ್ಮ ಕರ್ನಾಟಕದಲ್ಲಿ ‘ಶಾಸ್ತ್ರೀಯ ಸಂಗೀತ,
ಮರಾಠಿ ಸಂಗೀತ,
ಹಿಂದು ಸ್ಥಾನಿ ಸಂಗೀತ. ಸಂಗೀತದಲ್ಲಿ ವಿವಿದ ಬಗ್ಗೆಯ ಸಂಗೀತಗಳು ಇರುತ್ತವೆ. ಒಟ್ಟಾರೆ ಹೇಳಬೇಕಾದರೆ ನಮ್ಮ ಕನ್ನಡ ಜನತೆ ಸಂಗೀತಕ್ಕೆ ತುಂಬಾ ಗೌರವ ಕೊಡುತ್ತಾರೆ.
ಇನ್ನೂ ವಿಶ್ವದಾಖಲೆಯಲ್ಲಿ ”ಗೋಲ್ಡನ್ ಆಪ್ ಬುಕ್ ಆಪ್ ರಿಕಾಡಿಂಗ್ ವರ್ಡ್” ಪಡೆದು ”ನಾದಪ್ರಿಯಾ, ಪ್ರಚಂಡ ಗಾನ ಬ್ರಹ್ಮ ಕೋಗಿಲೆ,’ ‘ಮಧರ ಗಾನ ಕೋಗಿಲೆ, ‘ಸಂಗೀತ ಗಾನ ಶಿರೋಮಣಿ, ಸಂಗೀತ ಗಾನ ಸರಸ್ವತಿ, ‘ಸಂಗೀತ ಗಾನ ಶಿರ ಬಾಲೆ, ಸಂಗೀತ ಗಾನ ಶಾರದಾ ಮಾತೆಯ ಮಡಿಲಲ್ಲಿ ಬೆಳೆದು ನಾದ ಪ್ರಚಂಡ ಮಧುರ ಗಾನ ಕೋಗಿಲೆಂದು ಪ್ರಾಮುಖ್ಯತೆ ಪಡೆದ ಈ ಬಾಲಕಿಯಾರು ಅಂತಿರಾ, ಇವರ ಬಗ್ಗೆ ಸ್ಪಲ್ಪ ವಿಚಾರಧಾರೆಗಳನ್ನು ತಿಳಿದು ಕೊಳ್ಳಣ, ಬನ್ನಿ ಹಾಗಾದರೆ,
ಈ ಬಾಲಕಿಯು ‘ಬೆಳೆಯುವ ಸೀರಿ’, ಮೊಳಕೆಯಲ್ಲಿಯಂತೆ ತನ್ನ ಕಿರು ವಯಸ್ಸಿನಲ್ಲಿ ಸಂಗೀತ ಹಾಗೂ ನಟನೆ ಕಲಿತು ವಿಶ್ವದಾಖಲೆ ಕಂಡ,
ಈ ಬಾಲಕಿಯ ಹೆಸರು:
ಕು: ‘ಶಿವಾನಿ ನವೀನ್, ಕೊಪ್ಪ. ಇವರ ತಂದೆಯ ಹೆಸರು: ನವೀನ್ ಚಂದ್ರಕೊಪ್ಪ,
ತಾಯಿ: ಸಂಜನಾ.
ಇವರಿಬ್ಬರ ದಂಪತಿಗಳಿಗೆ ಸುಪುತ್ರಿಯಾಗಿ, ಶಿವಾನಿಯವರು ೧೪ ಎಪ್ರಿಲ್, ೨೦೦೭, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ , ಬಪ್ಪುಂಜಿ ಕೈಮರದಲ್ಲಿ ಜನಿಸಿದ ನಂತರ, ಶಿವಾನಿಯವರು ತಮ್ಮ ಪ್ರಾಥಮಿಕ ಶಾಲೆಯನ್ನು, ಕೊಪ್ಪದ ಸಂತ ಜೋಸೆಫರ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯವರೆಗೂ ವಿಧ್ಯಾಭ್ಯಾಸ ಮಾಡಿದ,
ಬಳಿಕ ತಮ್ಮ ಪ್ರೌಢಶಾಲೆಯನ್ನು ಪ್ರಸ್ತುತ ಉಡುಪಿ ಜಿಲ್ಲೆಯ ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯನ್ನು ಕಲಿಕೆಯಲ್ಲಿ ಇರುತ್ತಾಳೆ. ಇನ್ನು ಶಿವಾನಿಯವರು ತಮ್ಮ ಶಿಕ್ಷಣ ಜೊತೆಗೆ ಸಂಗೀತವನ್ನು ಕಲಿಯುತ್ತಾಳೆ. ಮತ್ತು
ಕು: ಶಿವಾನಿಯವರ ತಂದೆ ತಾಯಿ ಕೂಡ ಸಂಗೀತ ಕಲಾವಿದರು. ಹಿರಿಯರು ಹೇಳುತ್ತಾರೆ ಮನೆಯೆ ಮೊದಲ ಪಾಠಶಾಲೆ , ಮನೆಯಲ್ಲಿ ಮಕ್ಕಳಿಗೆ ಹೇಗೆ ಶಿಕ್ಷಣ ಇರುತ್ತದೆ ಮಕ್ಕಳು ಹಾಗೆ ಬೆಳೆಯುತ್ತಾರೆ. ನಮ್ಮ ತಂದೆ ತಾಯಿಯಂತೆ ನಾನು ಕೂಡ ಸಂಗೀತವನ್ನು ಕಲಿಯಬೇಕೆಂದು ಕೊಂಡು, ಪುಟ್ಟ ಶಿವಾನಿಯವರು ಸಂಗೀತವನ್ನು ಕಲಿಯಲು ಪ್ರಾರಂಭಿಸಿದ ನಂತರ,
ಇವರ ತಂದೆ ತಾಯಿ ಕೂಡ ತಮ್ಮ ಮಗಳಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಶಿವಾನಿಯವರು
ಉಷಾ ಹೆಬ್ಬಾರ್ ಮಣಿಪಾಲ್ ಇವರಿಂದ ಕರ್ನಾಟಿಕ ಸಂಗೀತ ಅಭ್ಯಾಸ ಮಾಡುತ್ತಿರುತ್ತಾಳೆ‌. ಇನ್ನೂ
ಸಂವೇಧನ ಫೌಂಡೇಶನ್ ಆಯೋಜಿಸಿದ್ದ ಅಂತರಾಷ್ಟ್ರಿಯ ಮಟ್ಟದ ವಂದೇಮಾತರಂ ವಿಡಿಯೋ ಆಲ್ಬಮ್ ಸ್ಪರ್ಧೆಯಲ್ಲಿ ತನ್ನ ಗಾನ ಮಧುರ ಕಂಠದಿಂದ
ವಂದೇ ಮಾತರಂ ಗೀತೆಯನ್ನು ಹಾಡಿ ದ್ವಿತೀಯ ಸ್ಥಾನ ಪಡೆದರು, ಹಾಗೂ ಶಿವಾನಿ ಮ್ಯೂಸಿಕಲ್ಸ್ ಎಂಬ, ಐಗಿರಿ ನಂದಿನಿ ವಿಡಿಯೋ ಆಲ್ಬಂ ನಲ್ಲಿ ಅಭಿನಯ ಹಾಗೂ ಗಾಯನ, ಪ್ರಭವ ಎಂಬ ವಿಡಿಯೋ ಆಲ್ಬಮ್ ನಲ್ಲಿ ಹಿನ್ನೆಲೆ ಸುಮಧುರ ಗಾಯನವನ್ನು ಹಾಡಿ ಹೆಗ್ಗಳಿಕೆ
ಆಗಿರುವುದಲ್ಲದೇ ಈ ಶಿವಾನಿಯ ‘ಕನ್ನಡ ಚಲನಚಿತ್ರ ಚಿತ್ರಕ್ಕೆ’ ಹಿನ್ನೆಲೆ ಗಾಯನ, ಹಾಗೂ ಹಲವಾರು ತುಳು ನಾಟಕಗಳಿಗೆ ಹಿನ್ನೆಲೆ ಗಾಯನ, ಕರಾವಳಿಯ ಪ್ರಖ್ಯಾತ
ಮೀಡಿಯಾದಲ್ಲಿ ಅತಿಥಿ ಕಲಾವಿದೆಯಾಗಿ ಗಾಯನ, ‘ನಾಗತಿಹಳ್ಳಿ ಚಂದ್ರಶೇಖರ್’ ನಿರ್ದೇಶನದ ಇಷ್ಟಕಾಮ್ಯ ಚಲನಚಿತ್ರದಲ್ಲಿ ಸಹ ತನ್ನ ಅತ್ಯುತ್ತಮ ಬಾಲನಟಿಯನ್ನು
ಮಾಡಿದ್ದಲ್ಲದೆ, ಕಾದಂಬರಿ ಆಧಾರಿತ ‘ಸೀತಮ್ಮ ಬಂದಳು
ಸಿರಿಮಲ್ಲಿಗೆತೊಟ್ಟು’ ಚಿತ್ರದಲ್ಲಿ ಅಭಿನಯಿಸಿದ್ದಾಳೆ.
ಹಾಗೂ ಕನ್ನಡ ಚಲನಚಿತ್ರ ರಂಗದ ಅದ್ವಿತೀಯ ‘ನಿರ್ದೇಶಕರಾದ’ ‘ದಿ.ಕಾಶಿನಾಥ್ ರವರ’ ಪುತ್ರ ‘ಅಭಿಮನ್ಯು ಕಾಶಿನಾಥ್’ ನಾಯಕ ನಟನಾಗಿ ಅಭಿನಯಿಸಿರುವ ಹೊಸ ‘ಚಿತ್ರ ಎಲ್ಲಿಗೆ ಪಯಣ’, ಯಾವುದೋದಾರಿ’ ಎಂಬ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಲ್ಲದೆ ಈ ಶಿವಾನಿಯವರು ಹಲವಾರು ಟಿವಿವಾಹಿನಿಗಳಲ್ಲಿ ಕೂಡ ತಮ್ಮ ಮಧುರ ಕಂಠದಿಂದ
ಹಾಡನ್ನು ಹಾಡಿ ಕನ್ನಡ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾಳೆ.
ಈ ಶಿವಾನಿಯವರು ಹಲವಾರು ವೇದಿಕೆಗಳಲ್ಲಿ ತಮ್ಮದೇ ತಂಡವಾದ ಶಿವಾನಿ ಮ್ಯೂಸಿಕಲ್ಸ್ ನಲ್ಲಿ ಗಾಯಕಿಯಾಗಿ ಹಾಗೂ ನೃತ್ಯ ಕಲಾವಿದೆಯಾಗಿ ಅಭಿಮಾನಿಗಳನ್ನು
ರಂಜಸುತ್ತಾಳೆ ಹಾಗೂ ಇತ್ತೀಚೆಗೆ ಹಳ್ಳಿಯ ಬಾಲ್ಯಜೀವನದ ಚಿತ್ರಿಕರಣವನ್ನು ಒಳಗೊಂಡ ಹಳ್ಳಿಗೋಗುವಾಗ ಗೀತೆಯ ಜೊತೆಗೆ ಅಭಿನಯ ಜೊತೆಗೆ ಗಾಯನ ನೀಡಿರುತ್ತಾಳೆ. ಮೂರ್ತಿ ಚಿಕ್ಕದಾದರೂ ತನ್ನ ಕಿರು ವಯಸ್ಸಿನಲ್ಲಿ ತನ್ನ ಮಧುರ ನಾಗ ಕಂಠದಿಂದ ಗಾಯನ ಜೊತೆಗೆ ಸಂಗೀತ ಹಾಡಿ ತನ್ನ ತಂದೆ ತಾಯಿಗೆ
ಹೆಸರು ತರುವುದಲ್ಲದೆ ಹಾಗೂ ತಾನು ಕಲಿತ ಶಾಲೆಯಲ್ಲಿ ಹೆಸರು ಪಡೆದು ಹಾಗೂ ಕನ್ನಡ ಜನತೆಯ ಪ್ರೇಕ್ಷಕರ
ಮನದಲ್ಲಿ ಸದಾಕಾಲವೂ ಉಳಿದ ಶಿವಾನಿಯವರು.
ಇವರು ತಂದೆ ತಾಯಿ ಇಬ್ಬರೂ ವೃತ್ತಿ ನಿರಂತರವಾಗಿ ಗಾಯಕರಾಗಿದ್ದು ತಮ್ಮ ಜೊತೆಗೆ ತಮ್ಮ ಮಗಳಿಗೆ
ಸಹ ಸಂಪೂರ್ಣವಾಗಿ ಪ್ರೋತ್ಸಾಹ ನೀಡಿದ್ದಾರೆ.
ಒಟ್ಟಾರೆ ತಮ್ಮ ಜೊತೆಗೆ ಮಗಳೂ
ನಾದ ಪ್ರಚಂಡ ಪ್ರಯೆ, ಗಾನ ಕೋಗಿಲೆ, ಮಧುರ ಗಾನ ಸುದೆ ಎಂದು ಹೆಸರು ಪಡೆದ ಕು: ಶಿವಾನಿ ನವೀನ್ ಕೊಪ್ಪ ರವರು. ಇವರ ಸಾಧನೆ ಇನ್ನೂ ಬಹು ಎತ್ತರದ ಮಟ್ಟಿಗೆ ಹೋಗಲೆಂದು ಸಂಗೀತ ಶಾರದಾ ಮಾತೆ ಹತ್ತಿರ ಬೇಡಿ ಕೊಳ್ಳುವೆಂದು ನನ್ನ ಎರಡು ಮನದಾಳದ
ಮಾತಿಗೆ ವಿರಾಮ ನೀಡುವೆ.

ಲೇಖಕರು:-
ಬಸವರಾಜ ಎಸ್. ಬಾಗೇವಾಡಿಮಠ.
ರಾಣೆಬೇನ್ನೂರು. ಜಿಲ್ಲಾ: ಹಾವೇರಿ.

LEAVE A REPLY

Please enter your comment!
Please enter your name here