ಸಂಡೂರು ಪುರಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್

0
35

ಸಂಡೂರು ಪಟ್ಟಣ ಪುರಸಭೆ ಕಚೇರಿಯ ಕೆ ಎಸ್ ವೀರಭದ್ರಪ್ಪ ಸಭಾಂಗಣದಲ್ಲಿ ಅಧ್ಯಕ್ಷೆ ಶ್ರೀಮತಿ ಅನಿತಾ ವಸಂತ್ ಕುಮಾರ್ ಅವರು 2023-24ನೇ ಸಾಲಿಗೆ 62.40 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

23-24 ನೇ ಸಾಲಿನ ಅರ್ಥಿಕ ವರ್ಷದಲ್ಲಿ 31.48 ಅದಾಯವನ್ನು ಹಾಗೂ 30.85 ಕೋಟಿ ಖರ್ಚನ್ನು ಅಂದಾಜಿಸಲಾಗಿದ್ದು, 62.40 ಲಕ್ಷ ಉಳಿತಾಯವಾಗಲಿದೆ’ ಎಂದು ತಿಳಿಸಿದರು.

ಯೋಜನಾಧಿಕಾರಿ ಪ್ರಭುರಾಜ್ ಹಗರಿ ಮಾತನಾಡಿ, 23-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 92.40 ಲಕ್ಷ ಅಸ್ತಿ ತೆರಿಗೆ, 62.40 ಲಕ್ಷ ನೀರಿನ ತೆರಿಗೆ, 22.50 ಲಕ್ಷ ಮಳಿಗೆ ಬಾಡಿಗೆ, 2.49 ಕೋಟಿ 15ನೇ ಹಣಕಾಸು ಆಯೋಗದ ಅನುದಾನ, 1.20 ಕೋಟಿ, ಎಸ್. ಎಫ್.ಸಿ. ಮಕ್ತ ನಿಧಿ, 3.15 ಕೋಟಿ ಎಸ್.ಎಫ್.ಸಿ. ವೇತನ ಅನುದಾನ, 4.60 ಕೋಟಿ ಎಸ್.ಎಫ್.ಸಿ ವಿದ್ಯುತ್ ಅನುದಾನ, 95.80 ಲಕ್ಷ ಪುರಸಭೆಯ ಇತರೆ ಸೇವೆಗಳಿಂದ ಬರಬಹುದಾದ ಆದಾಯ ಮೂಲಗಳಾಗಿವೆ’ ಎಂದರು.

‘ರಸ್ತೆ ಚರಂಡಿ ನಿರ್ಮಾಣಕ್ಕಾಗಿ 4.40ಕೋಟಿ, ಸಾರ್ವಜನಿಕ ಬೀದಿ ದೀಪಗಳ ಅಭಿವೃದ್ಧಿಗೆ 2.46 ಕೋಟಿ, ರುದ್ರಭೂಮಿ ಹಾಗೂ ಪಾಕ್‌ರ್ಗಳ ಕೋಟಿ ಅಭಿವೃದ್ಧಿಗೆ 85 ಲಕ್ಷ, ವಾಹನ ಮತ್ತು ಆಧುನಿಕ ಸಲಕರಣೆ ಖರೀದಿಗೆ 1.17 ಕೋಟಿ, ಕಟ್ಟಡ ಹಾಗೂ ಇತರೆ ನಾಗರಿಕ ವಿನ್ಯಾಸಕ್ಕೆ 1.67 ಕೋಟಿ, ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ 2.37 ಕೋಟಿ, ಕುಡಿಯುವ ನೀರು ಮತ್ತು ಒಳಚರಂಡಿಗಾಗಿ 4.27 ಕೋಟಿ, ಪ.ಜಾತಿ/ಪ.ಪಂಗಡ ಹಾಗೂ ಇತರೆ ಹಿಂದುಳಿದ ಜನಾಗ ಮತ್ತು ಅಂಗವಿಕಲರ ಅಭಿವೃದ್ಧಿಗಾಗಿ 51.03 ಲಕ್ಷ ಹಾಗೂ ವೇತನ ಪಾವತಿಗಾಗಿ 3.28 ಕೋಟಿ ಖರ್ಚನ್ನು ಅಂದಾಜಿಸಲಾಗಿದೆ’ ಎಂದರು. ಉಪಾಧ್ಯಕ್ಷರಾದ ಈರೇಶ್‌ ಶಿಂಧೆ, ಮುಖ್ಯಾಧಿಕಾರಿ ಎಂ.ಖಾಜಾ, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here