ಜಿಲ್ಲೆಯ ಕೋವಿಡ್ ಕಾಳಜಿ ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರಿಗೆ ಆರೋಗ್ಯ ಇಲಾಖೆ ಸಲಹೆಯಂತೆ ಪೌಷ್ಠಿಕ ಆಹಾರ ಪೂರೈಕೆ ಮಾಡಲು ನಿರ್ದೇಶನ ನೀಡಲಾಗಿದೆ : ಜಿಲ್ಲಾಧಿಕಾರಿ ನಿತೇಶ ಪಾಟೀಲ

0
110

ಧಾರವಾಡ ಜಿಲ್ಲೆಯಲ್ಲಿ ಆರಂಭಿಸಿರುವ ಎಲ್ಲ ಕೋವಿಡ್ ಕಾಳಜಿ ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅವಶ್ಯಕವಾಗಿರುವುದರಿಂದ ಆರೋಗ್ಯ ಇಲಾಖೆ ತಜ್ಞರ ಸಲಹೆಯ ಮೇರೆಗೆ ಸರಕಾರ ನೀಡಿರುವ ನಿರ್ದೇಶನದಂತೆ ಉತ್ತಮ ಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೋಂಕಿತರಿಗೆ ಕಾಲಕಾಲಕ್ಕೆ ಪೂರೈಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಈ ಕುರಿತು ಎಲ್ಲ ತಹಸಿಲ್ದಾರ ಅವರಿಗೆ ಆದೇಶಪತ್ರ ಹೊರಡಿಸಿದ್ದು, ಅದರಲ್ಲಿ ಯಾವ ಸಮಯಕ್ಕೆ ಯಾವ ಪೋಷಕಾಂಶ ಇರುವ ಆಹಾರ ನೀಡಬೇಕು ಎಂದು ತಿಳಿಸಿದ್ದಾರೆ.
ಸಾಧ್ಯವಾದಷ್ಟು ಸರಕಾರ ನೀಡಿರುವ ಪಟ್ಟಿಯಲ್ಲಿ ಸೂಚಿರುವ ಆಹಾರಗಳನ್ನು ಸೋಂಕಿತರಿಗೆ ಪೂರೈಸಬೇಕೆಂದು ಅವರು ಸೂಚಿಸಿದ್ದಾರೆ.

ಬೆಳಗಿನ ಉಪಹಾರ:
ಸೋಮವಾರ : ಬೆಳಿಗ್ಗೆ 7 ಗಂಟೆಗೆ ಇಡ್ಲಿ, ಬೆಳಿಗ್ಗೆ 10 ಗಂಟೆಗೆ ಕಲ್ಲಂಗಡಿ ಹಣ್ಣು, ರಾಗಿಗಂಜಿ.

ಮಂಗಳವಾರ: ಬೆಳಿಗ್ಗೆ 7 ಗಂಟೆಗೆ ಪಲಾವ್, ಬೆಳಿಗ್ಗೆ 10 ಗಂಟೆಗೆ ಪಪ್ಪಾಯಿ ಹಣ್ಣು, ಕಷಾಯ.

ಬುಧವಾರ: ಬೆಳಿಗ್ಗೆ 7 ಗಂಟೆಗೆ ದೋಸೆ, ಬೆಳಿಗ್ಗೆ 10 ಗಂಟೆಗೆ ಖರಜೂರ ಹಣ್ಣು, ರಾಗಿ ಗಂಜಿ.

ಗುರುವಾರ: ಬೆಳಿಗ್ಗೆ 7 ಗಂಟೆಗೆ ಇಡ್ಲಿ, ಬೆಳಿಗ್ಗೆ 10 ಗಂಟೆಗೆ ಕಲ್ಲಂಗಡಿ ಹಣ್ಣು, ಕಷಾಯ.

ಶುಕ್ರವಾರ: ಬೆಳಿಗ್ಗೆ 7 ಗಂಟೆಗೆ ಅವಲಕ್ಕಿ, ಬೆಳಿಗ್ಗೆ 10 ಗಂಟೆಗೆ ಪಪ್ಪಾಯಿ ಹಣ್ಣು, ರಾಗಿ ಗಂಜಿ.

ಶನಿವಾರ: ಬೆಳಿಗ್ಗೆ 7 ಗಂಟೆಗೆ ಪಲಾವ್, ಬೆಳಿಗ್ಗೆ 10 ಗಂಟೆಗೆ ಖರಜೂರ ಹಣ್ಣು, ಕಷಾಯ.

ರವಿವಾರ: ಬೆಳಿಗ್ಗೆ 7 ಗಂಟೆಗೆ ದೋಸೆ, ಬೆಳಿಗ್ಗೆ 10 ಗಂಟೆಗೆ ಪಪ್ಪಾಯಿ ಹಣ್ಣು, ರಾಗಿ ಗಂಜಿ ಉಪಹಾರ ನೀಡಲಾಗುತ್ತದೆ.

ಮದ್ಯಾಹ್ನ 1 ಗಂಟೆಗೆ ಊಟ: 2 ರೂಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ಬೇಳೆ ಸಾರು, ಮೊಸರು ಅಥವಾ ಮೊಟ್ಟೆ ನೀಡಲಾಗುತ್ತದೆ.

ಸಾಯಂಕಾಯ 5.30ಕ್ಕೆ ಅಲ್ಪೊಪಹಾರ: ಏಲಕ್ಕಿ ಬಾಳೆ ಹಣ್ಣು, 3 ಮಾರಿ ಬಿಸ್ಕಿಟ್ ಅಥವಾ 2 ಪ್ರೋಟಿನ್ ಬಿಸ್ಕಿಟ್ ಅಥವಾ 2 ಫ್ರೇಶ್ ಡೇಟ್ಸ್, ಮ್ಯಾಂಗೋ ಬಾರ್ (ವಿಟಮಿನ್-ಸಿ ಯುಕ್ತ) ನೀಡಲಾಗುತ್ತದೆ.

ರಾತ್ರಿ 7 ಗಂಟೆಗೆ ಊಟ: 2 ರೂಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ಬೇಳೆ ಸಾರು, ಮೊಸರು.

ರಾತ್ರಿ 9 ಗಂಟೆಗೆ: ಪ್ಲೇವರ್ಡ ಮಿಲ್ಕ್.

ಈಗಾಗಲೇ ಆರಂಭಿಸಿರುವ ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ಸರಕಾರದ ನಿರ್ದೇಶನದಂತೆ
ಪೌಷ್ಠಿಕ ಆಹಾರವನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here