ಬಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಸಂಡೂರು ತಾಲೂಕು ಸಮಿತಿಯಿಂದ ತೋರಣಗಲ್ಲುನಲ್ಲಿ ಪ್ರತಿಭಟನೆ

0
77

ಸಂಡೂರು:ಆಗಸ್ಟ್:14: ‘ಭಾರತ ಪ್ರಜಾಸತ್ತಾತ್ಮಕ ಯುವಜನ ಪೇಡರೇಷನ್’ (DYFI) ಸಂಡೂರು ತಾಲ್ಲೂಕು ಸಮತಿ ನೇತೃತ್ವದಲ್ಲಿ 14.08.2021 ರಂದು ತೋರಣಗಲ್ಲು ಗ್ರಾಮದ ಮುಖ್ಯ ರಸ್ತೆ (BH MAIN ROAD) ಬಸ್ ನಿಲ್ದಾಣ ಬದಿಯಲ್ಲಿ ನಿರುದ್ಯೋಗಿ ಯುವಜನರಿಗೆ ಉದ್ಯೋಗ ನೀಡಿ, ಸ್ಥಳೀಯರಿಗೆ ಆದ್ಯತೆ ಒದಗಿಸಿ ಮತ್ತು ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಲು ಒತ್ತಾಯಿಸಿ ಪ್ಲೇ ಕಾರ್ಡ ಪ್ರದೇಶಿಸಿ ಪ್ರತಿಭಟನೆ ಹೋರಾಟ ಮಾಡಲಾಯಿತು. ಈ ಪ್ರತಿಭಟನೆಯ ಮನವಿಯನ್ನು ಮಾನ್ಯ ಶ್ರೀ ಮುಖ್ಯ ಮಂತ್ರಿಗಳಿಗೆ ಮಾನ್ಯ ಶ್ರೀ ಉಪತಹಶಿಲ್ದಾರರು ತೋರಣಗಲ್ಲು ನಾಡ ಕಛೇರಿ ಇವರ ಮುಖಾಂತರ ಕಳುಹಿಸಲಾಯಿತು.

DYFI ಸಂಡೂರು ತಾಲ್ಲೂಕು ಕಾರ್ಯದರ್ಶಿ ಹೆಚ್.ಸ್ವಾಮಿ ರವರು ಈ ಹೋರಾಟದ ಕುರಿತು ಮಾತನಾಡುತ್ತ ಉದ್ಯೋಗದ ಹಕ್ಕಿಗಾಗಿ ರಾಜ್ಯಾದ್ಯಂತ ಧರಣಿ, ಪ್ರತಿಭಟನೆ ಮಾಡಲಾಗಿದ್ದು ಇದರ ಭಾಗವಾಗಿ DYFI ಸಂಡೂರು ತಾಲ್ಲೂಕು ಸಮಿತಿಯು
ಸರಕಾರಗಳು ರೂಪಿಸುತ್ತಿರುವ ನೀತಿಗಳು, ಆಡಳಿತದ ವೈಫಲ್ಯಗಳಿಂದಾಗಿ ನಿರುದ್ಯೋಗದ ದರ ಸ್ವತಂತ್ರ ಭಾರತದಲ್ಲಿ ಎಂದೂ ಕಂಡರಿಯದ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಇದರಿಂದ ತಮ್ಮ ಅರ್ಹತೆಗೆ ಯೋಗ್ಯವಾದ ಉದ್ಯೋಗ, ಬದುಕಿನ ಭದ್ರತೆಗೆ ಬೇಕಾದ ಆದಾಯ ಇಲ್ಲದೆ ಯುವಜನತೆ ಹತಾಶರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ “ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಿ” ಹಾಗೂ ಸರೋಜಿನಿ ಮಹಿಷಿ ವರದಿಯ ಜಾರಿಗಾಗಿ ದೀರ್ಘಕಾಲೀನ ಹೋರಾಟ ಅನಿವಾರ್ಯ ಎಂದು ಕರೆನಿಡಿದರು.

ತಾಲ್ಲೂಕು ಸಹಾ ಕಾರ್ಯದರ್ಶಿ ಸೈಯದ್ ಶರೀಪ್ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಆಗಸ್ಟ್ 14 ರಂದು ಪ್ರತಿಭಟಿಸಲಾಗಿದ್ದು
ಕರ್ನಾಟಕ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಎರಡು ಲಕ್ಷದ ಎಪ್ಪತ್ತು ಸಾವಿರ ಉದ್ಯೋಗಗಳು ಭರ್ತಿಯಾಗದೆ ಖಾಲಿ ಬಿದ್ದಿವೆ. ಖಾಸಗಿ ಉದ್ಯಮಗಳು ಕಾರ್ಮಿಕರನ್ನು ಬಳಸಿ ಬಿಸಾಕುವ ನೀತಿ ಅನುಸರಿಸುತ್ತಿವೆ. ಗುತ್ತಿಗೆ ಪದ್ದತಿಗಳು ಜೀತಪದ್ದತಿಯ ಹೊಸ ರೂಪದಂತೆ ಮಾರ್ಪಾಡಾಗಿದ್ದು ಜೀವನ ನಿರ್ವಹಣೆಗೆ ಬೇಕಾದ ವೇತನ, ಉದ್ಯೋಗ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.

ಅದೇ ರೀತಿ ತಾಲ್ಲೂಕು ಉಪಾಧ್ಯಕ್ಷರು ಅರ್ಜುನ್ ರವರು ಮಾತನಾಡಿ ಪ್ರಸಕ್ತ ಸಂದರ್ಭದಲ್ಲಿ ಯುವಜನತೆ
ಅಮಾನವೀಯ ದುಡಿಮೆಗೆ ಸಾಕ್ಷಿಯಾಗಿದೆ. ಕಿರು ಉದ್ಯಮಗಳು ಸರಕಾರದ ನೀತಿಗಳಿಂದ ಮುಚ್ಚಲ್ಪಡುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸಂಪನ್ಮೂಲಗಳನ್ನು ಬಳಸಿ ಕೊಂಡು ಉದ್ಯೋಗ ಸೃಷ್ಟಿಸಬಲ್ಲ ಉದ್ಯಮ, ಕೈಗಾರಿಕೆಗಳ ಸ್ಥಾಪನೆಯ ಕಣ್ಣೋಟ ಸರಕಾರಗಳಲ್ಲಿ ಇಲ್ಲವೇ ಇಲ್ಲ ಎಂಬಂತಾಗಿದೆ. ರಾಜ್ಯದ ಕೈಗಾರಿಕಾ ಕೇಂದ್ರಗಳಲ್ಲಿ ನೇಮಕಾತಿಯ ಸಂದರ್ಭ ಸ್ಥಳೀಯರನ್ನು ಪೂರ್ಣವಾಗಿ ಕಡೆಗಣಿಸಿ ಹೊರಗಿನವರಿಗೆ ಮಣಿಹಾಕಲಾಗುತ್ತಿದೆ.
ಇದೆಲ್ಲದರಿಂದ ಯುವಜನರು ಕಂಗಾಲಾಗುತ್ತಿದ್ದು, ನಿರುದ್ಯೋಗಿ ಯುವಜನರ ಅರ್ಹತೆಗೆ ತಕ್ಕಾಗಿ ಉದ್ಯೋಗಗಳು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ತಾಲ್ಲೂಕು ಅಧ್ಯಕ್ಷರು ಕಾಲುಬರವರು ಮಾತನಾಡಿ ಬೀದಿಗೆ ಬೀಳುವ ಸ್ಥಿತಿ ಯುವಜನತೆಗೆ ನಿರ್ಮಾಣಗೊಂಡಿದೆ. ಶಿಕ್ಷಣ ಸಂಸ್ಥೆಗಳಿಂದ ಪದವಿಗಳನ್ನು ಹಿಡಿದು ಹೊರ ಬರುವ ಪರಿಣಿತ ಯುವ ಜನರು ತಮ್ಮ ಪದವಿಗೆ ಯೋಗ್ಯವಾದ ಉದ್ಯೋಗ ಇಲ್ಲದೆ ಅಸಹಾಯಕಾರಿ ನರಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ “ಉದ್ಯೋಗ ಸೃಷ್ಟಿಸಿ,ಸ್ಥಳೀಯರಿಗೆ ಆದ್ಯತೆ ಒದಗಿಸಿ ಮತ್ತು ಸರೋಜಿನಿ ಮಹಿರ್ಷಿ ವರದಿ ಜಾರಿಗಾಗಿ ಸ್ವಾತಂತ್ರ್ಯ ದಿನದ ಮುನ್ನಾ DYFI ಸಂಡೂರು ತಾಲ್ಲೂಕು ಸಮತಿಯು ಈ ಮೂಲಕ ಒತ್ತಾಯ ಮಾಡುತ್ತದೆ ಎಂದರು.

ಈ ಸಂಧರ್ಭದಲ್ಲಿ DYFI ನ ತಾಲ್ಲೂಕು ಮುಖಂಡರುಗಳಾದ ಶಿವರೆಡ್ಡಿ,ಹುಲೆಪ್ಪ, ದೊಡ್ಡ ಬಸವರಾಜ, ಗೌಸ್,ರಾಹುಲ್,ವೆಬಕುಮಾರಿ, ಅರ್ಪಿತ,ಲಕ್ಷ್ಮಿ, ಬೆಂಬಲವಾಗಿ A.ಸ್ವಾಮಿ CITU, ಉದ್ಯೋಗ ಖಾತ್ರಿ ಮಹಿಳಾ ಕಾರ್ಮಿಕರಾದ ಸರಸ್ವತಿ, ಪಾರ್ವತಿ, ಯಂಕಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here